ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಸಂಘದ ಸಕ್ರಿಯ ಸದಸ್ಯರಾದ ಯಕ್ಷಿತ್ ಶೆಟ್ಟಿ ಅವರ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭವನ್ನು ಬುಧವಾರದಂದು ಕನ್ನಡ ಭವನದ ಡಾ.ರೊನಾಲ್ಡ್ ಕೊಲಾಸೋ ಲೌಂಜ್ ನಲ್ಲಿ ಆಯೋಜಿಸಲಾಯಿತು.







ಕನ್ನಡ ಸಂಘ ಬಹರೈನ್‌ನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ಯಕ್ಷಿತ್ ಶೆಟ್ಟಿ ಅವರು ನೀಡಿದ ಅಮೂಲ್ಯ ಸೇವೆ, ಸಮರ್ಪಣೆ ಹಾಗೂ ಸಕ್ರಿಯ ಭಾಗವಹಿಸುವಿಕೆಯನ್ನು ಗುರುತಿಸಿ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕನ್ನಡ ಸಂಘ ಬಹರೈನ್ ಅಧ್ಯಕ್ಷ ಅಜಿತ್ ಬಂಗೇರ ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಯಕ್ಷಿತ್ ಶೆಟ್ಟಿ ಅವರಿಗೆ ಹಾರ, ಶಾಲು, ಸ್ಮರಣಿಕೆಯಿಂದ ಕೃತಜ್ಞತೆಯ ಸಂಕೇತವಾಗಿ ಗೌರವ ಸಲ್ಲಿಸಿದರು.
ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷ ಅಜಿತ್ ಬಂಗೇರ, ಪದಾಧಿಕಾರಿಗಳು ಮತ್ತು ಸದಸ್ಯರು, ಸಂಘದ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಸ್ಮರಿಸಿ, ಅವರ ಸೇವಾಭಾವನೆ ಹಾಗೂ ಬದ್ಧತೆಯನ್ನು ಶ್ಲಾಘಿಸಿದರು. ಹಾಜರಿದ್ದ ಸದಸ್ಯರು ಯಕ್ಷಿತ್ ಶೆಟ್ಟಿ ಅವರ ಮುಂದಿನ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನಕ್ಕೆ ಹಾರ್ದಿಕ ಶುಭಾಶಯಗಳನ್ನು ಕೋರಿದರು.
ವರದಿ: ಕಮಲಾಕ್ಷ ಅಮೀನ್

