ಯುಎಇದುಬೈ ಅಲ್ ಬರ್ಶಾದ 8 ಅಂತಸ್ತಿನ ವಸತಿ ಕಟ್ಟಡದಲ್ಲಿ...

ದುಬೈ ಅಲ್ ಬರ್ಶಾದ 8 ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ; ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದ ದುಬೈ ಸಿವಿಲ್ ಡಿಫೆನ್ಸ್

ದುಬೈ: ಇಲ್ಲಿನ ಅಲ್ ಬರ್ಶಾದ ಮಾಲ್ ಆಫ್ ಎಮಿರೇಟ್ಸ್ ಸಮೀಪ ರವಿವಾರ ರಾತ್ರಿ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ವಸತಿ ಕಟ್ಟಡದಲ್ಲಿ ಕಾಣಿಸಿಕೊಂಡ ಅವಘಡದಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ದುಬೈ ಸಿವಿಲ್ ಡಿಫೆನ್ಸ್(ನಾಗರಿಕ ರಕ್ಷಣಾಲಯ) ಸೋಮವಾರ ತಿಳಿಸಿದೆ.

ದುಬೈ ಸಿವಿಲ್ ಡಿಫೆನ್ಸ್ ಆಪರೇಷನ್ ರೂಮ್’ಗೆ ನಿನ್ನೆ ರಾತ್ರಿ 10.30ರ ಸಮಯಕ್ಕೆ ಬೆಂಕಿ ಬಿದ್ದ ಬಗ್ಗೆ ಕರೆ ಬಂದಿದೆ. ಈ ವೇಳೆ ತಕ್ಷಣ ಸ್ಪಂದಿಸಲಾಗಿದ್ದು, ಅಲ್ ಬರ್ಶಾ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

8 ಮಹಡಿಯ ಈ ಕಟ್ಟಡದ ಮುಂಭಾಗದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇದು ಎಲ್ಲ ಕಡೆ ಹರಡಿದೆ. ಈ ವೇಳೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಲ್ ಬರ್ಶಾ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು, ಕಮಾಂಡರ್’ಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories