ಸೌದಿ ಅರೇಬಿಯಾಸೌದಿ ಪ್ರಯಾಣಿಕರ ಗಮನಕ್ಕೆ! ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ...

ಸೌದಿ ಪ್ರಯಾಣಿಕರ ಗಮನಕ್ಕೆ! ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ(ಡಿಸೆಂಬರ್ 30) ಟರ್ಮಿನಲ್ ಬದಲಾವಣೆ!

ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(KKIA)ದಲ್ಲಿ ಇಂದಿನಿಂದ(ಡಿ.30) ಟರ್ಮಿನಲ್ ಬದಲಾವಣೆ ಆಗಲಿದೆ.

ಈ ಹಿಂದೆ ಟರ್ಮಿನಲ್ 2 ರಿಂದ ಸಂಚರಿಸುತ್ತಿದ್ದ ವಿಮಾನಗಳು ಹೊಸದಾಗಿ ಗೊತ್ತುಪಡಿಸಿದ ಟರ್ಮಿನಲ್ 3ಗೆ ಸ್ಥಳಾಂತರವಾಗಲಿವೆ. ಇದರಿಂದ ಭಾರತಕ್ಕೆ ಆಗಮಿಸುವ ವಿಮಾನಗಳ ಮೇಲೆ ಪರಿಣಾಮ ಬೀರಲಿದ್ದು, ಇನ್ನು ಇಲ್ಲಿಗೆ ಆಗಮಿಸುವ ಹಾಗು ಹೊರಡುವ ಏರ್ ಇಂಡಿಯಾ, ಇಂಡಿಗೋ ವಿಮಾನಗಳು ಟರ್ಮಿನಲ್ 3ರಲ್ಲಿ ಕಾರ್ಯನಿರ್ವಹಿಸಲಿವೆ.

ಇನ್ನು ಮುಂದೆ ಎಮಿರೇಟ್ಸ್, ಬ್ರಿಟಿಷ್ ಏರ್‌ವೇಸ್, ಖತರ್ ಏರ್‌ವೇಸ್, ಗಲ್ಫ್ ಏರ್, ಈಜಿಪ್ಟ್ ಏರ್ ಮತ್ತು ಹೆಚ್ಚಿನ ಇತರ ಅಂತಾರಾಷ್ಟ್ರೀಯ ವಿಮಾನಗಳು ಕೂಡ ಈ ಹೊಸ ಟರ್ಮಿನಲ್‌ನಿಂದ ಸಂಚಾರ ನಡೆಸಲಿವೆ.

ಇಲ್ಲಿಯವರೆಗೆ ಈ ಏರ್‌ಲೈನ್‌ಗಳು ಟರ್ಮಿನಲ್ 2 ಮೂಲಕ ಸಂಚಾರ ನಡೆಸುತ್ತಿದ್ದವು.ಇಂದಿನಿಂದ ಟರ್ಮಿನಲ್ 3ರಲ್ಲಿ ಸಂಚಾರ ಕಾರ್ಯ ಆರಂಭಿಸಲಿವೆ.

ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಸ್ತುತ ಪ್ರಯಾಣಿಕರ ಅನುಕೂಲಕ್ಕಾಗಿ ವಿಸ್ತರಿಸಲಾಗಿದೆ. ಈ ಬಗ್ಗೆ ಪ್ರಯಾಣಿಕರು ಗೊಂದಲಕ್ಕೀಡಾಗದೆ ಟರ್ಮಿನಲ್ ಬದಲಾವಣೆ ಬಗ್ಗೆ ಮಾಹಿತಿ ಪಡೆದು ಪ್ರಯಾಣಿಸಬೇಕಾಗಿದೆ.

(ಮಾಹಿತಿ: ಪಿ.ಎ.ಹಮೀದ್ ಪಡುಬಿದ್ರಿ, ರಿಯಾದ್)

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories