ದುಬೈ: ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್(KMJU) ಆಶ್ರಯದಲ್ಲಿ ‘ಗ್ಲೋಬಲ್ ಮೀಡಿಯಾ ಐಕನ್ ಪ್ರಶಸ್ತಿ 2025’ ಕಾರ್ಯಕ್ರಮವು ಏಪ್ರಿಲ್ 12ರಂದು ದುಬೈನ ಮ್ಯೂಸಿಯಂ ಆಫ್ ದಿ ಫ್ಯೂಚರ್’ನಲ್ಲಿ ನಡೆಯಲಿದೆ.

ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿರುವ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಕನ್ನಡ ಸಿನೆಮಾದ ಹೆಸರಾಂತ ನಟ, ನಟಿಯರು ಭಾಗಿಯಾಗಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ, ಶಾಸಕ ಎಂ. ಸತೀಶ್ ರೆಡ್ಡಿ, ಡಾ.ಸಿಜೆ ರಾಯ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಉಚಿತ ಪ್ರವೇಶವಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟಾಲಿವುಡ್‌ನ ಹಾಸ್ಯ ಕಲಾವಿದ ಅಲಿ, ಸ್ಯಾಂಡಲ್‌ವುಡ್ ತಾರೆಯರಾದ ಶಶಿಕುಮಾರ್, ನಟಿ ಪ್ರೇಮಾ, ಮೇಘನಾ ರಾಜ್, ಶರ್ಮಿಳಾ ಮಾಂಡ್ರೆ, ನಟ ಶೈನ್ ಶೆಟ್ಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಅನುಷ ರೈ, ಧನ್ಯ ರಾಮ್‌ಕುಮಾರ್ ಮತ್ತಿತರರು ಭಾಗಿಯಾಲಿದ್ದು, ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗುತರಲಿದೆ.
ದುಬೈಗರನ್ನು ನಗಿಸಲು ಹೆಸರಾಂತ ಕಾಮಿಡಿ ಕಾರ್ಯಕ್ರಮ ‘ಗಿಚ್ಚ ಗಿಲಿ ಗಿಲಿ’, ಮಜಾ ಭಾರತ ತಂಡದ ಹಾಸ್ಯ ಕಲಾವಿದರಾದ ಸುಷ್ಮಾ, ಜಗ್ಗಪ್ಪ ಇನ್ನಿತರರು ಭಾಗವಹಿಸಲಿದ್ದು, ಜೊತೆಗೆ ಗಾಯಕಿ ಮಾನಸ ಹೊಳ್ಳ, 2007ರಲ್ಲಿ ಝೀ ಕನ್ನಡ ವಾಹಿನಿಯ ಸರಿಗಮಪ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಚಿನ್ಮಯಿ ಆತ್ರೇಯ, ಗಾಯಕಿ ಅರ್ಚನಾ ಅರವಿಂದ್ ಅವರ ತಂಡದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಶಂಕರ್ ಬಬಲೇಶ್ವರ +971504693459,
ದೀಪಕ್ ಸೋಮಶೇಖರ್ +971509520336