ಫ್ಲೋರಿಡಾ: ಇಲ್ಲಿನ ಲೇಕ್‌ಲ್ಯಾಂಡ್ ನಗರದ ಆರ್.ಪಿ.ಫಂಡಿಂಗ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ ‘ನಾವಿಕ'(ನಾವು ವಿಶ್ವ ಕನ್ನಡಿಗರು) ಸಂಘಟನೆಯ ಆಶ್ರಯದಲ್ಲಿ ‘8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025’ಕ್ಕೆ ಅದ್ದೂರಿಯ ಚಾಲನೆ ನೀಡಲಾಯಿತು.

ಈ ಐತಿಹಾಸಿಕ ಸಮಾವೇಶವು ಆಗಸ್ಟ್ 31ರ ರವಿವಾರದವರೆಗೆ ಕನ್ನಡಿಗರನ್ನು ಒಂದುಗೂಡಿಸಿ ಬಹಳ ವಿಜೃಂಭಣೆಯಿಂದ ನಡೆಯಲಿದೆ. ಈ ಮೂರು ದಿನ ಕನ್ನಡದ ಕಲರವಕ್ಕೆ ಅಮೇರಿಕದ ಕನ್ನಡಿಗರು ಸಾಕ್ಷಿಯಾಗಲಿದ್ದು, ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಮನರಂಜನೆಯ ಕಾರ್ಯಕ್ರಮಗಳನ್ನು ಸವಿಯಲು ಕನ್ನಡಿಗರೆಲ್ಲ ತುದಿಗಾಲಲ್ಲಿ ನಿಂತಿದ್ದಾರೆ.



















‘8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025’ಕ್ಕೆ ಶುಕ್ರವಾರ ಗಣೇಶ ಪೂಜೆಯೊಂದಿಗೆ ಚಾಲನೆ ನೀಡಲಾಯಿತು. ನಾವಿಕ ಸಂಘಟನೆಯ ಅಧ್ಯಕ್ಷ ಶಿವಕುಮಾರ್ ಬೆಂಗಳೂರು ಹಾಗು ಜಯಂತಿ ಅವರು ಕೃಷ್ಣಮೂರ್ತಿ ಜೋಯಿಷ ಅವರ ಪೂಜೆಯೊಂದಿಗೆ ಸಮಾವೇಶಕ್ಕೆ ಅಧಿಕೃತ ಚಾಲನೆ ನೀಡಿದರು.
ನಟರಾದ ಶ್ರೀನಾಥ್, ಸಿಹಿಕಹಿ ಚಂದ್ರು, ಡಾ.ರೇಣುಕಾ ರಾಮಪ್ಪ ಸೇರಿದಂತೆ ಹಲವು ಮಂದಿ ಗಣ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷ ಶಿವಕುಮಾರ್ ಬೆಂಗಳೂರು ಹಾಗು ಸಮ್ಮೇಳನ ಸಂಚಾಲಕ ಹರ್ಷಿತ್ ಗೌಡ ಸಾರಥ್ಯದಲ್ಲಿ ನಾವಿಕ ಸಂಸ್ಥೆಯು ಫ್ಲೋರಿಡಾ ರಾಜ್ಯದಲ್ಲಿರುವ ನಾಲ್ಕು ಪ್ರಮುಖ ಕನ್ನಡ ಸಂಘಗಳಾದ ಶ್ರೀಗಂಧ ಕನ್ನಡ ಕೂಟ ಟಾಂಪ, ಒರ್ಲಾಂಡೋ ಕನ್ನಡ ಕೂಟ, ನಂದಿ ಕನ್ನಡ ಕೂಟ ಮಯಾಮಿ ಮತ್ತು ಸವಿಕನ್ನಡ ಕೂಟ ಜ್ಯಾಕ್ಸನ್ವಿಲ್ ಸಹಯೋಗದೊಂದಿಗೆ ಈ ಬೃಹತ್ ವಿಶ್ವ ಕನ್ನಡ ಸಮಾವೇಶವನ್ನು ಆಯೋಜಿಸುತ್ತಿದೆ.
ಬೆಂಕಿ ಬಸಣ್ಣ