ಯುಎಇಸೆಪ್ಟೆಂಬರ್ 21ರಂದು ಕೆಸಿಎಫ್ ದುಬೈ ಸೌತ್ ಝೋನ್ ಆಶ್ರಯದಲ್ಲಿ...

ಸೆಪ್ಟೆಂಬರ್ 21ರಂದು ಕೆಸಿಎಫ್ ದುಬೈ ಸೌತ್ ಝೋನ್ ಆಶ್ರಯದಲ್ಲಿ ‘ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್’; ಸ್ವಾಗತ ಸಮಿತಿ ರಚನೆ

ದುಬೈ: ಕೆಸಿಎಫ್ ದುಬೈ ಸೌತ್ ಝೋನ್ ಪ್ರತಿ ವರ್ಷವೂ ನಡೆಸುವ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ ನ 2025ನೇ ಸಾಲಿನ ಕಾರ್ಯಕ್ರಮದ ಸ್ವಾಗತ ಸಮಿತಿಯ ರಚನೆಯು ದುಬೈ ಬಿಸಿನೆಸ್ ಬೇಯಲ್ಲಿರುವ ಬೇ ಬೈಟ್ಸ್ ಹೋಟೇಲಲ್ಲಿ ರವಿವಾರದಂದು ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಅವರು, ಪ್ರವಾದಿ (ಸ.ಅ) ರವರ 1500ನೇ ಜನ್ಮ ದಿನಾಚರಣೆಯನ್ನು ದುಬೈ ಸೌತ್ ಝೋನ್ ಈ ಬಾರಿ ವಿಜೃಂಭಣೆಯಿಂದ ಆಚರಿಸಲಿದೆ. ಪ್ರವಾದಿ ಕೀರ್ತನೆಗಳು ಮತ್ತು ಮದ್ಹ್ ಪ್ರಭಾಷಣಗಳನ್ನೊಳಗೊಂಡ ಪ್ರಸ್ತುತ ಗ್ರ್ಯಾಂಡ್ ಮಿಲಾದ್ ಕಾನ್ಫರೆನ್ಸ್-2025, ಸೆಪ್ಟೆಂಬರ್ 21 ರವಿವಾರ ದುಬೈ ಊದ್ ಮೇತ ಪಾಕಿಸ್ತಾನ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲರೂ ಕೈಜೊಡಿಸಬೇಕೆಂದು ಮನವಿ ಮಾಡಿದರು.

ಸ್ವಾಗತ ಸಮಿತಿಯ ಚೇರ್ಮ್ಯಾನ್ ಆಗಿ ಇಕ್ಬಾಲ್ ಸಿದ್ದಕಟ್ಟೆ, ವರ್ಕಿಂಗ್ ಚೇರ್ಮ್ಯಾನ್ ನಝೀರ್ ಹಾಜಿ ಕೆಮ್ಮಾರ, ಕನ್ವೀನರ್ ರಜಬ್ ಉಚ್ಚಿಲ, ವರ್ಕಿಂಗ್ ಕನ್ವೀನರ್ ಆಸಿಫ್ ಇಂದ್ರಾಜೆ, ಫಿನಾನ್ಶ್ಯಲ್ ಚೇರ್ಮ್ಯಾನ್ ಇಲ್ಯಾಸ್ ಮೂಳೂರು, ಫಿನಾನ್ಸ್ ಕನ್ವೀನರ್ ರವೂಫ್ ಸಾಗರ, ಅಶ್ಫಾಕ್ ಕೊಡಗು ಹಾಗೂ ಖಾದರ್ ಕಯ್ಯೂರು ಸೇರದಂತೆ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕೆಸಿಎಫ್ ದುಬೈ ಸೌತ್ ಝೊನ್ ಅಧ್ಯಕ್ಷ ಇಲ್ಯಾಸ್ ಮದನಿ ಬರ್ಷಾ ವಹಿಸಿದ್ದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಶಾಹುಲ್ ಹಮೀದ್ ಸಖಾಫಿ ಉದ್ಘಾಟಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆಸಿಎಫ್ ಸಂಘಟನಾ ನಾಯಕರಾದ ರಜಬ್ ಉಚ್ಚಿಲ, ಹಮೀದ್ ಹಾಜಿ ಸ್ಟಾರ್ ಲಿಂಕ್, ಇಲ್ಯಾಸ್ ಮೂಳೂರು, ರವೂಫ್ ಸಾಗರ, ನವಾಝ್ ಹಾಜಿ ಕೋಟೆಕಾರ್, ನಝೀರ್ ಹಾಜಿ, ಇಕ್ಬಾಲ್ ಹಾಜಿ ಸಿದ್ದಕಟ್ಟೆ ಸೇರಿದಂತೆ ಝೋನ್, ಸೆಕ್ಟರ್ ಹಾಗೂ ಶಾಖೆಯ ನಾಯಕರು ಭಾಗವಹಿಸಿದ್ದರು. ಝೋನ್ ಕಾರ್ಯದರ್ಶಿ ಮನ್ಸೂರ್ ಹರೇಕಳ ಸ್ವಾಗತಿಸಿದರು, ರಫೀಕ್ ಕಲ್ಲಡ್ಕ ವಂದಿಸಿದರು. ಅಝೀಝ್ ಅಹ್ಸನಿ ಕಾರ್ಯಕ್ರಮ‌ವನ್ನು ನಿರೂಪಿಸಿದರು.

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories