ಸೌದಿ ಅರೇಬಿಯಾ'ಹಜ್ಜ್' ನಿರ್ವಹಿಸಲು ಭಾರತದಿಂದ ಬಂದ ಹಜ್ಜಾಜಿಗಳಿಗೆ ಭವ್ಯ ಸ್ವಾಗತ...

‘ಹಜ್ಜ್’ ನಿರ್ವಹಿಸಲು ಭಾರತದಿಂದ ಬಂದ ಹಜ್ಜಾಜಿಗಳಿಗೆ ಭವ್ಯ ಸ್ವಾಗತ ಕೋರಿದ KCF HVC ತಂಡ

ಮದೀನಾ: ಪವಿತ್ರ ಹಜ್ಜ್ ಕಾರ್ಯ ನಿರ್ವಹಿಸಲು ಭಾರತದಿಂದ ಬಂದ ಹಜ್ಜಾಜಿಗಳ ಮೊದಲ ಎರಡು ವಿಮಾನವು ಮದೀನಾ ಮುನವ್ವರದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಝೀಝ್ ಇಂಟರ್ ನ್ಯಾಷನಲ್ ಏರ್ಪೋರ್ಟ್ ತಲುಪಿದೆ.

ಇಂದು ಭಾರತದ ಹೈದರಾಬಾದ್ ಹಾಗೂ ಲಕ್ನೋ ದಿಂದ 578 ಹಾಜಿಗಳು ಆಗಮಿಸಿದ್ದು, ಕರ್ನಾಟಕ ಕಲ್ಚರಲ್ ಫೌಂಡೇಶನ್ ನ ಹಜ್ಜ್ ವಾಲೇಂಟಿಯರ್ ಕೋರ್ ನ ಸದಸ್ಯರು ಹಜ್ಜಾಜಿಗಳನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು.

ಇಂಡಿಯನ್ ಅಂಬಾಸಿಡರ್ ಡಾ.ಸುಹೇಲ್ ಅಜಾಝ್ ಖಾನ್, ಇಂಡಿಯನ್ ಕೌನ್ಸಿಲ್ ಜನರಲ್(ಜಿದ್ದಾ) ಫಹದ್ ಅಹ್ಮದ್ ಖಾನ್ ಸೇರಿದಂತೆ ಇಂಡಿಯನ್ ಎಂಬಸಿಯ ವಿವಿಧ ಅಧಿಕಾರಿಗಳು ಹಜ್ಜಾಜಿಗಳನ್ನು ಸ್ವಾಗತಿಸಿದರು.

ಕೆಸಿಎಫ್ ಹೆಚ್.ವಿ.ಸಿ ಸದಸ್ಯರು ಹಜ್ಜಾಜಿಗಳನ್ನು ಮದೀನಾ ವಿಮಾನ ನಿಲ್ದಾಣ ಹಾಗೂ ಅವರು ತಂಗುವ ಹೋಟೆಲ್ ಗೆ ತೆರಳಿ ಸಹಕರಿಸಿದರು. ಹಾಜಿಗಳಿಗೆ ಹೆಚ್.ವಿ.ಸಿ ವೆಲ್ಕಂ ಕಿಟ್, ಖರ್ಜೂರ ನೀಡಿ ಸತ್ಕರಿಸಿದರು. ಈ ವೇಳೆ ಮದೀನಾ ಮುನವ್ವರದ ಸಾಂಪ್ರದಾಯಿಕ ಶೈಲಿಯಲ್ಲಿ ಝಂಝಂ ವಿತರಿಸಲಾಯಿತು ಹಾಗೂ ಹಜ್ಜಾಜಿಗಳ ಮೇಲೆ ಹೂವಿನ ಎಸಲುಗಳನ್ನು ಸುರಿಸುವ ಮೂಲಕ ಭವ್ಯವಾಗಿ ಸ್ವಾಗತಿಸಲಾಯಿತು.

ಅಶಕ್ತ ಹಜ್ಜಾಜಿಗಳನ್ನು ವೀಲ್ ಚೇರ್ ಮೂಲಕ ಕೆ.ಸಿಎ.ಫ್ ಹೆಚ್.ವಿ.ಸಿ ಕಾರ್ಯಕರ್ತರು ಹೋಟೆಲ್ ತಲುಪಿಸಿದರು. ಇಂದು ರಾತ್ರಿ 7.30 ವೇಳೆಗೆ ಮುಂಬೈಯಿಂದ 442 ಹಾಜಿಗಳು ಆಗಮಿಸಲಿದ್ದಾರೆ. ರಾಜ್ಯದ 956 ಹಜ್ಜಾಜಿಗಳು ನಾಳೆ ಪವಿತ್ರ ನಗರವಾದ ಮದೀನಾ ಮುನವ್ವರ ತಲುಪಲಿದ್ದು, 378 ಹಾಜಿಗಳು ನಾಳೆ ಬೆಳಗ್ಗಿನ ವೇಳೆ, 289 ಹಾಜಿಗಳು ಮಧ್ಯಾಹ್ನ ವೇಳೆ, ಹಾಗೂ ಸಂಜೆ 289ಹಾಜಿಗಳು ಮದೀನಾ ಮುನವ್ವರ ತಲುಪಲಿದ್ದು, ಕರ್ನಾಟಕ ಕಲ್ಚರಲ್ ಫೌಂಡೇಶನ್ ಹಜ್ಜ್ ವಾಲೆಂಟಿಯರ್ ಕೋರ್ ಸದಸ್ಯರು ಮಕ್ಕತುಲ್ ಮುಕರ್ರಮ ಹಾಗೂ ಮದೀನಾ ಮುನವ್ವರದಲ್ಲಿ ಹಜ್ಜಾಜಿಗಳಿಗೆ ಸಹಕರಿಸಲು ಸನ್ನಧ್ಧರಾಗಿದ್ದಾರೆ.
ವರದಿ : ಹಕೀಂ ಬೋಳಾರ್

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories