ಬಹರೈನ್ಬಹರೈನ್‌ನಲ್ಲಿ ಕನ್ನಡ ಸಂಘದ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ...

ಬಹರೈನ್‌ನಲ್ಲಿ ಕನ್ನಡ ಸಂಘದ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಹಿನ್ನೆಲೆ: ಅದ್ದೂರಿಯಾಗಿ ನಡೆದ ಪೂಜಾ ಮಹೋತ್ಸವ ಕಾರ್ಯಕ್ರಮ

ಬಹರೈನ್: ಇಲ್ಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಬಹರೈನ್ ಕನ್ನಡ ಸಂಘವು ಇತ್ತೀಚೆಗೆ ಮನಾಮದಲ್ಲಿರುವ ಕನ್ನಡ ಭವನದ ಸಭಾಂಗಣದಲ್ಲಿ ಪೂಜಾ ಮಹೋತ್ಸವವನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ಸುಮಾರು 800ಕ್ಕೂ ಹೆಚ್ಚು ಭಕ್ತಾದಿಗಳು ತನ್ಮಯತೆಯಿಂದ ಭಕ್ತಿಪರವಶರಾಗಿ ಪೂಜಾ ವಿಧಿ, ವಿಧಾನಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಅಧ್ಯಕ್ಪ ಅಜಿತ್ ಬಂಗೇರ ಅವರ ಸಾರಥ್ಯದಲ್ಲಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಿಟ್ಟಿನಲ್ಲಿ ಸಂಸ್ಥೆಯ ಪ್ರಥಮ ಕಾರ್ಯಕ್ರಮವಾಗಿ ಈ ಪೂಜಾ ಮಹೋತ್ಸವವನ್ನು ಆಯೋಜಿಸಿದ್ದರು.

ನಾಡಿನಿಂದ ಈ ಪೂಜಾ ಕೈಂಕರ್ಯವನ್ನು ನಡೆಸಿಕೊಡಲು ದ್ವೀಪಕ್ಕೆ ವಿಶೇಷವಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಕದ್ರಿ ದೇಗುಲದ ಅರ್ಚಕರಾದ ವೇದಮೂರ್ತಿ ಶ್ರೀ ಕೃಷ್ಣ ಅಡಿಗರು ಶ್ರೀ ಸತ್ಯನಾರಾಯಣ ಪೂಜೆ ಹಾಗು ಶನಿ ಪೂಜೆಗಳ ವಿಧಿ, ವಿಧಾನಗಳನ್ನು ಸಾಂಗವಾಗಿ ನೆರವೇರಿಸಿಕೊಟ್ಟರು. ಪೂಜೆಯುದ್ದಕ್ಕೂ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ವಾದ್ಯವೃಂದದೊಂದಿಗೆ ಸುಶ್ರಾವ್ಯವಾದ ಭಜನೆಗಳು ನೆರೆದ ಭಕ್ತಾದಿಗಳನ್ನು ಭಕ್ತಿಪರವಶರಾಗುವಂತೆ ಮಾಡಿತು. ನಾಡಿನಿಂದ ವಿಶೇಷವಾಗಿ ಹೂವುಗಳನ್ನು ತರಿಸಿ ದೇವರ ಮಂಟಪವನ್ನು ಸುಂದರವಾಗಿ ಅಲಂಕರಿಸಲಾಗಿದ್ದು, ನೆರೆದ ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತಿತ್ತು.

ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಹಾಗು ಆಡಳಿತ ಮಂಡಳಿಯ ಇತರ ಪದಾಧಿಕಾರಿಗಳು ಮತ್ತು ಅಹ್ವಾನಿತ ಅತಿಥಿಗಳನ್ನು ಸ್ವಾಗತಿಸಿ ಸರ್ವರ ಪರವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸಂಕಲ್ಪದೊಂದಿಗೆ ಪೂಜಾ ವಿದಿ ವಿಧಾನಗಳು ಪ್ರಾರಂಭವಾಯಿತು.

ಗಣಪತಿ ಪೂಜೆ, ಕಳಸ ಪೂಜೆ, ನವಗ್ರಹ ಪೂಜೆ, ಸತ್ಯನಾರಾಯಣ ದೇವರ ವೃತ ಕಲ್ಪೋಕ್ತಿ ಪೂಜೆ, ಭಜನೆ ಸಂಕೀರ್ತನೆ, ಸತ್ಯನಾರಾಯಣ ದೇವರ ಕಥೆ, ಶನಿ ಪೂಜೆಯ ನಂತರ ಮಹಾಮಂಗಳಾರತಿ ನಡೆಯಿತು. ಕನ್ನಡ ಸಂಘದ ನೂತನ ಅಧ್ಯಕ್ಷ ಅಜಿತ್ ಬಂಗೇರ ನೆರೆದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಪೂಜಾ ಮಹೋತ್ಸವ ಪುಣ್ಯದ ಕಾರ್ಯಕ್ರಮ ಮಾತ್ರವಲ್ಲ ನಮ್ಮೆಲ್ಲರನ್ನೂ ಒಂದುಗೂಡಿಸಲು ಅವಕಾಶ ಕಲ್ಪಿಸುವ ಮಾಧ್ಯಮ ಕೂಡ ಹೌದು. ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ವೈದಿಕರಾದ ವೇದಮೂರ್ತಿ ಕೃಷ್ಣ ಅಡಿಗರನ್ನು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಸರ್ವ ಧರ್ಮ ಸಮನ್ವಯ ಎಂಬಂತೆ ಕ್ರೈಸ್ತ ಧರ್ಮಗುರುಗಳಾದ ರೆವೆರೆಂಡ್ ಸುಧೀರ್ ರೋಬಿನ್ಸನ್ ಹಾಗು ಮುಸ್ಲಿಂ ಧರ್ಮಗುರುಗಳಾದ ಅಬ್ದುಲ್ ಮಜೀದ್ ಜುಹ್ರಿ ಅವರು ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿ ನೆರೆದವರನ್ನು ಉದ್ದೇಶಿಸಿ ಮಾತನಾಡಿ, ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು . ಇವರಿಬ್ಬರಿಗೂ ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು .

ಅನ್ನ ದಾನದ ಪ್ರಾಯೋಜಕರಾಗಿ ಜಯಶಂಕರ್.ವಿ ಸಹಕರಿಸಿದ್ದರು. ಕನ್ನಡ ಸಂಘ ಆಯೋಜಿಸಿದ್ದ ಈ ಪೂಜಾ ಮಹೋತ್ಸವದಲ್ಲಿ ದ್ವೀಪದ ಎಲ್ಲಾ ಸಮುದಾಯ ಮತ್ತು ಸಂಘಟನೆಗಳ ಅಧ್ಯಕ್ಷರು, ಪಧಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.

ಮಹಾಮಂಗಾಳಾರತಿಯ ನಂತರ ಭಕ್ತ ಸಮೂಹ ತೀರ್ಥ ಪ್ರಸಾದ, ಸಪಾತ ಭಕ್ಷ್ಯ ಸ್ವೀಕರಿಸಿದ ನಂತರ ಮಹಾಪ್ರಸಾದದ ಅಂಗವಾಗಿ ಬಾಳೆ ಎಲೆಯಲ್ಲಿ ರುಚಿಯಾದ ಭಕ್ಷ್ಯ, ಭೋಜನಗಳನ್ನು ಬಡಿಸಲಾಯಿತು.

ಪ್ರಧಾನ ಕಾರ್ಯದರ್ಶಿ ರಾಮ ಪ್ರಸಾದ್ ಅಮ್ಮೆನಡ್ಕ ನೆರೆದ ಭಕ್ತಾಧಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯಕ್ರಮದ‌ ಯಶಸ್ಸಿಗೆ ಕಾರಣರಾದ ಎಲ್ಲ ಸ್ವಯಂಸೇವಕರು, ಸೇವಾದಾರರು ಹಾಗು ಪ್ರಾಯೋಜಕರಿಗೆ ಧನ್ಯವಾದ ಸಲ್ಲಿಸಿದರು.

ವರದಿ -ಕಮಲಾಕ್ಷ ಅಮೀನ್

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories