ಯುಎಇನ.8ರಂದು ದುಬೈಯಲ್ಲಿ 'ಕನ್ನಡಿಗರ ಕೂಟ-ಗಲ್ಫ್ ಕನ್ನಡ ಮೂವೀಸ್'ನಿಂದ 'ಕರ್ನಾಟಕ...

ನ.8ರಂದು ದುಬೈಯಲ್ಲಿ ‘ಕನ್ನಡಿಗರ ಕೂಟ-ಗಲ್ಫ್ ಕನ್ನಡ ಮೂವೀಸ್’ನಿಂದ ‘ಕರ್ನಾಟಕ ರಾಜ್ಯೋತ್ಸವ’; ಡಾ.ಆರತಿ ಕೃಷ್ಣ ಸ್ವಾಗತಕ್ಕೆ ಸಿದ್ಧತೆ: ಡಾ.ರೊನಾಲ್ಡ್ ಕೊಲಾಸೊ, ಶಿವರಾಜ್ ಕುಮಾರ್, ರಮ್ಯಾಗೆ ಪ್ರಶಸ್ತಿ

ದುಬೈ: ಕನ್ನಡಿಗರ ಕನ್ನಡ ಕೂಟ ದುಬೈ ಯುಎಇ ಮತ್ತು ಗಲ್ಫ್ ಕನ್ನಡ ಮೂವೀಸ್ ಜಂಟಿಯಾಗಿ ಆಯೋಜಿಸಿರುವ “ಕರ್ನಾಟಕ ರಾಜ್ಯೋತ್ಸವ -2025” ಕಾರ್ಯಕ್ರಮವು ನವೆಂಬರ್ 8ರಂದು ಸಂಜೆ 4.30ರಿಂದ ದುಬೈಯ ಕಿಸೀಸ್ ನ ಜೆಮ್ಸ್ ಕೇಂಬ್ರಿಜ್ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.

ಈ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ, ವಿಧಾನ ಪರಿಷತ್ ನೂತನ ಸದಸ್ಯೆಯಾಗಿ ಆಯ್ಕೆಗೊಂಡಿರುವ ಡಾ.ಆರತಿ ಕೃಷ್ಣ ಅವರು ಭಾಗವಹಿಸಲಿದ್ದು, ಇದು ಅವರ ಯುಎಇಯ ಮೊದಲ ಭೇಟಿಯಾಗಿದೆ. ಜೊತೆಗೆ ಡಾ.ಆರತಿ ಕೃಷ್ಣ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ವೇದಿಕೆ ಕೂಡ ಕಲ್ಪಿಸಲಾಗಿದೆ.

ಸಂಜೆ 4.30ರಿಂದ ರಾತ್ರಿಯ ವರೆಗೆ ಜರುಗುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು Zee ಕನ್ನಡ ಕಾಮಿಡಿ ಕಿಲಾಡಿಗಳು ತಂಡದವರಿಂದ ಹಾಸ್ಯ ಮನೋರಂಜನೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಲಿರುವ ಕನ್ನಡಚಿತ್ರರಂಗದ ಖ್ಯಾತ ನಟ ಡಾ.ಶಿವರಾಜ್ ಕುಮಾರ್ ಅವರಿಗೆ “ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ-2025”, ಖ್ಯಾತ ಚಲನಚಿತ್ರ ನಟಿ ರಮ್ಯಾ ಅವರಿಗೆ “ಕನ್ನಡದ ಕಣ್ಮಣಿ ಪ್ರಶಸ್ತಿ -2025” ಹಾಗು ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊರವರಿಗೆ “ಅಂತಾರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ -2025″ನ್ನು ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Hot this week

DKSC ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಅನ್ವರ್ ಸಾಹೇಬ್ ಕುಂಜಾಲ್ ಆಯ್ಕೆ

ಕುವೈತ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC), ಇದರ ಕುವೈತ್ ರಾಷ್ಟ್ರೀಯ...

ಕರ್ನಾಟಕ ಸಂಘ ಖತರ್‌ನಿಂದ ರಮಝಾನ್‌ ಸೇವಾ ಕಾರ್ಯ: ಇಫ್ತಾರ್ ಆಹಾರ ಕಿಟ್‌ಗಳ ವಿತರಣೆ

ಕರ್ನಾಟಕ ಸಂಘ ಖತರ್‌ (KSQ), ರಮಝಾನ್‌ ಮಾಸದ ಪವಿತ್ರ ಚಟುವಟಿಕೆಗಳ ಭಾಗವಾಗಿ...

ಅಟ್ಲಾಂಟ ಒಕ್ಕಲಿಗರ ಕೂಟದಿಂದ ಪ್ರಥಮ ಸಮಾವೇಶ

ಕೆ. ಆರ್. ಶ್ರೀನಾಥ್, ಅಟ್ಲಾಂಟ ಅಟ್ಲಾಂಟ: ಫೆಬ್ರವರಿ 22ರ ರವಿವಾರದಂದು ಅಟ್ಲಾಂಟದಲ್ಲಿ ನೆಲಸಿರುವ...

AIM India Forum Delegation Meets Indian Ambassador to UAE

Abu Dhabi: A delegation from AIM India Forum met...

Konkani movie ‘My Dear Father’ thrills audience in Kuwait with double premiere shows

Kuwait: The Konkani film My Dear Father was screened...

Related Articles

Popular Categories