ಇತರೆಕೆನಡಾದಲ್ಲಿ ಮಂಗಳೂರಿನ ಕನ್ನಡಿಗರ ಹೊಸ ಸಾಹಸ: 'ಬ್ಯಾರೀಸ್ ಸೂಪರ್...

ಕೆನಡಾದಲ್ಲಿ ಮಂಗಳೂರಿನ ಕನ್ನಡಿಗರ ಹೊಸ ಸಾಹಸ: ‘ಬ್ಯಾರೀಸ್ ಸೂಪರ್ ಮಾರ್ಕೆಟ್’ ಶುಭಾರಂಭ

ಒಂಟಾರಿಯೊ(ಕೆನಡಾ): ಇಲ್ಲಿನ ಒಂಟಾರಿಯೊದಲ್ಲಿನ ಮಿಸಿಸವುಗದಲ್ಲಿ ಮಂಗಳೂರಿನ 3 ಮಂದಿ ಬ್ಯಾರಿ ಯುವಕರು ಆರಂಭಿಸಿರುವ ‘ಬ್ಯಾರೀಸ್ ಸೂಪರ್ ಮಾರ್ಕೆಟ್’ ಫೆಬ್ರವರಿ 1ರಂದು ಅದ್ದೂರಿಯಾಗಿ ಶುಭಾರಂಭಗೊಂಡಿತು. ಈ ಶುಭಾರಂಭಕ್ಕೆ ಅಲ್ಲಿನ ಗಣ್ಯರು ಹಾಗೂ ಸ್ಥಳೀಯರು ಸಾಕ್ಷಿಯಾದರು.

‘ಬ್ಯಾರೀಸ್ ಸೂಪರ್ ಮಾರ್ಕೆಟ್’ನ್ನು ಮಿಸ್ಸಿಸುವಗ-ಎರಿನ್ ಮಿಲ್ಸ್ ನ ಸಂಸತ್ ಸದಸ್ಯೆ ಇಕ್ರಾ ಖಾಲಿದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ಥಳೀಯ ಜನತೆಯ ಅಗತ್ಯಗಳನ್ನು ಪೂರೈಸುವಲ್ಲಿ ಬ್ಯಾರೀಸ್ ಸೂಪರ್ ಮಾರ್ಕೆಟ್ ನ ಬದ್ಧತೆ ಬಗ್ಗೆ ಶ್ಲಾಘಿಸಿ, ನೂತನ ಮಳಿಗೆಗೆ ಶುಭ ಹಾರೈಸಿದರು.

ಉತ್ತರ ಅಮೆರಿಕ ಮುಸ್ಲಿಂ ಸಮುದಾಯದ ಗಣ್ಯರಾದ ಡಾ.ಅಬ್ದಲ್ಲಾ ಇದ್ರಿಸ್ ಅಲಿ ಅವರು ಈ ವೇಳೆ ಉಪಸ್ಥಿತರಿದ್ದರು. ಟೊರೊಂಟೊದಲ್ಲಿನ ಪ್ರಪ್ರಥಮ ಪೂರ್ಣಾವಧಿಯ ಇಸ್ಲಾಮಿಕ್ ಶಾಲೆ ಇಸ್ನಾದ ಸ್ಥಾಪಕರಾದ ಡಾ.ಅಲಿ ಅವರು ಮೂವರು ಯುವಕರ ಈ ಹೊಸ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಕೋರಿದರು. ಅವರೊಂದಿಗೆ ಇಸ್ನಾದ ಇಮಾಂ ಆದ ಶೇಖ್ ಹೊಸಾಂ ಹಿಲಾಲ್ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಾಲ್ಟನ್ ಸರಕಾರಿ ಸಂಬಂಧಗಳ ಪ್ರಾಂಶುಪಾಲರು ಹಾಗೂ ಮಾಜಿ ಓಕ್ ವಿಲ್ಲೆ ಪ್ರಾಂತೀಯ ಕೌನ್ಸಿಲರ್ ಸ್ಟೀಫನ್ ಸ್ಪಾರ್ಲಿಂಗ್ ಉಪಸ್ಥಿತರಿದ್ದರು.

ಅಸಾಧಾರಣ ಸಾರ್ವಜನಿಕ ಸೇವೆ ಹಾಗೂ ಸಾಮುದಾಯಿಕ ವಕಾಲತ್ತಿಗಾಗಿ ಕೆನಡಾ ಹೌಸ್ ಆಫ್ ಕಾಮನ್ಸ್ ನ ವಿಶೇಷ ಮಾನ್ಯತಾ ಪ್ರಶಸ್ತಿಯನ್ನು ‘ಬ್ಯಾರೀಸ್ ಸೂಪರ್ ಮಾರ್ಕೆಟ್’ಗೆ ನೀಡಿ ಇಕ್ರಾ ಖಾಲಿದ್ ಗೌರವಿಸಿದರು.

ಕಾರ್ಯಕ್ರಮದಲ್ಲಿ ಐಕ್ಯತೆ ಹಾಗೂ ಸಂಭ್ರಮಾಚರಣೆಯ ಸ್ಪೂರ್ತಿಯೊಂದಿಗೆ ಕೆನಡಾದಲ್ಲಿ ನೆಲೆಸಿರುವ ಬ್ಯಾರಿ, ತುಳು, ಕೊಂಕಣಿ ಹಾಗೂ ಮಂಗಳೂರಿನ ಇತರ ಸಮುದಾಯಗಳ ಜನರು ಪಾಲ್ಗೊಂಡಿದ್ದರು.

ಬ್ಯಾರೀಸ್ ಸೂಪರ್ ಮಾರ್ಕೆಟ್ ನ ಪ್ರಾರಂಭವು ಕೇವಲ ವಾಣಿಜ್ಯ ಮಳಿಗೆಗಿಂತ ಮಹತ್ವದ್ದಾಗಿದ್ದು, ಅದು ವೈವಿಧ್ಯತೆ, ಒಳಗೊಳ್ಳುವಿಕೆ ಹಾಗೂ ಸಾಮುದಾಯಿಕ ಅಭಿವೃದ್ಧಿಯ ಬದ್ಧತೆಯನ್ನು ಹೊಂದಿದೆ. ಬ್ಯಾರೀಸ್ ಸೂಪರ್ ಮಾರ್ಕೆಟ್ ತನ್ನ ಪಯಣ ಪ್ರಾರಂಭಿಸಿದ್ದು, ಅದು ಕೇವಲ ಶಾಪಿಂಗ್ ತಾಣವಾಗುವ ಬದಲು, ಎಲ್ಲರೂ ತಮ್ಮ ಮನೆಯೆಂದೇ ಭಾವಿಸುವಂಥ ಆಹ್ಲಾದಕರ ಸಾಮುದಾಯಿಕ ಸ್ಥಳವನ್ನಾಗಿಸುವ ಗುರಿ ಹೊಂದಿದೆ ಎಂದು ಅದರ ಪಾಲುದಾರರಾದ ಹಫೀಝ್ ಅಬ್ದುಲ್ ಖಾದರ್, ಮುನೀರ್ ಅಹ್ಮದ್ ಹಾಗೂ ಹಾಶಿಮ್ ಅಶ್ರಫ್ ಈ ವೇಳೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories