ಯುಎಸ್‌ಎನ್ಯೂಯಾರ್ಕ್ ಅಲ್ಬನಿಯಲ್ಲಿ ಪ್ರಧಾನಿ ಮೋದಿಯವರ 75ನೇ ಜನ್ಮದಿನ ಆಚರಣೆ;...

ನ್ಯೂಯಾರ್ಕ್ ಅಲ್ಬನಿಯಲ್ಲಿ ಪ್ರಧಾನಿ ಮೋದಿಯವರ 75ನೇ ಜನ್ಮದಿನ ಆಚರಣೆ; ಸಾಮೂಹಿಕ ಪೂಜೆ

ನ್ಯೂಯಾರ್ಕ್: ಬುಧವಾರ ಸಂಜೆ ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಹಿಂದೂ ದೇವಾಲಯದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ದೇವರಿಗೆ ಅರ್ಚನೆ, ಪ್ರಾರ್ಥನೆ, ಪೂಜೆ ಮಾಡುವುದರೊಂದಿಗೆ ಆಚರಿಸಲಾಯಿತು. ಜೊತೆಗೆ ಮೋದಿಯವರ 75ನೇ ಹುಟ್ಟು ಹಬ್ಬದ ವಿಶೇಷ ಕೇಕನ್ನು ಕಟ್ ಮಾಡುವ ಮೂಲಕ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಸ್ಥಳೀಯ ಮುಖಂಡರಾದ ಬೆಂಕಿ ಬಸಣ್ಣ, ಸುರೇಶ್ ಬಾಟೆ, ಈರಣ್ಣ , ಶ್ರೀಕುಮಾರ್ ಮತ್ತು ಪ್ರದೀಪ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎರಡು ವರ್ಷದ ಮಗುವಿನಿಂದ 85 ವರ್ಷದ ಹಿರಿಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಕಿ ಬಸಣ್ಣ, ‘ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿರುವುದು ನಮ್ಮೆಲ್ಲರ ಪುಣ್ಯ. 2014ಕ್ಕೆ ಮೊದಲು ನಾವು ಪಾಕಿಸ್ತಾನವನ್ನು ನಮ್ಮ ಸಮಾನ ಬಲವುಳ್ಳ ವೈರಿಯಾಗಿ ಮತ್ತು ಚೀನಾ ದೇಶವನ್ನು ನಮಗಿಂತ ಅತ್ಯಂತ ಬಲಿಷ್ಠವಾದ ದೇಶವೆಂದು ಪರಿಗಣಿಸುತ್ತಿದ್ದವು. ಆದರೆ ಮೋದಿ ಪ್ರಧಾನಿಯಾಗಿ ಕೇವಲ ಹತ್ತು ವರ್ಷಗಳಲ್ಲಿ ನಾವು ಪಾಕಿಸ್ತಾನವನ್ನು ನಮಗಿಂತ ಅತ್ಯಂತ ದುರ್ಬಲ ದೇಶವನ್ನಾಗಿ ಮತ್ತು ಚೀನಾವನ್ನು ನಮ್ಮ ಸಮ ಬಲದ ದೇಶವಾಗಿ ನೋಡುತ್ತಿದ್ದೇವೆ. ಮೋದಿ ಅವರು ಇನ್ನೂ ಹತ್ತು ಹದಿನೈದು ವರ್ಷ ಸಂಪೂರ್ಣ ಬಹುಮತದೊಂದಿಗೆ ಪ್ರಧಾನಿಯಾದರೆ ಭಾರತವು ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ದೇಶವಾಗಿ ಬೆಳೆದು “ಸೂಪರ್ ಪವರ್” ಆಗುವುದರಲ್ಲಿ ಸಂದೇಹವೇ ಇಲ್ಲ’ ಎಂದು ಹೇಳಿದರು.

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories