ದುಬೈಯ ಹಲವೆಡೆ ರವಿವಾರ ಸಾಧಾರಣ ಮಳೆಯಾಗಿದ್ದು, ದೇರಾ, ಬುರ್ ದುಬೈ ಮತ್ತು ಅಲ್ ಕರಾಮಾ ಸೇರಿ ಕೆಲವೆಡೆ ತುಂತುರು ಮಳೆಯಾಗಿದೆ.
ಯುಎಇಯಾದ್ಯಂತ ಮೋಡ ಕವಿದ ವಾತಾವರಣವಿರಲಿದ್ದು, ರಾತ್ರಿಯಾಗುತ್ತಿದ್ದಂತೆ, ದ್ವೀಪಗಳಲ್ಲಿ, ಕೆಲವು ಉತ್ತರ, ಪೂರ್ವ ಮತ್ತು ಕರಾವಳಿ ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.
22 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವಿದ್ದು, ರಾತ್ರಿಯಿಡೀ ತಾಪಮಾನವು ಕುಸಿಯುವ ಸಾಧ್ಯತೆ ಇದೆ. ದ್ವೀಪಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಸುಮಾರು 18 ಡಿಗ್ರಿ ಸೆಲ್ಸಿಯಸ್ ಮತ್ತು ಒಳಗಿನ ಪ್ರದೇಶಗಳಲ್ಲಿ ಸುಮಾರು 14 ಡಿಗ್ರಿ ಸೆಲ್ಸಿಯಸ್ ತಲುಪಲಿದೆ.