ದುಬೈ: ಉದ್ಯಮಿ ಹಾಗು ದುಬೈಯ ‘ಆಕ್ಮೆ’ ಬಿಲ್ಡಿಂಗ್ ಮೆಟಿರಿಯಲ್ಸ್’ನ ಆಡಳಿತ ನಿರ್ದೇಶಕ ಆಗಿರುವ ಖ್ಯಾತ ಗಾಯಕ ಹರೀಶ್ ಶೇರಿಗಾರ್ ಅವರ ಸಾರಥ್ಯದಲ್ಲಿ ಶನಿವಾರ ದುಬೈನ ಅಲ್- ಜದ್ದಾಫ್’ನ ‘ಸ್ವಿಸ್ ಇಂಟರ್ ನ್ಯಾಷನಲ್ ಸ್ಕೂಲಿನಲ್ಲಿ ನಡೆದ ‘ಸ್ಯಾಂಡಲ್‌ವುಡ್ ಟು ಬಾಲಿವುಡ್’ ಎಂಬ ವಿಶೇಷ ಸಂಗೀತ, ನೃತ್ಯ ಹಾಗು ಹಾಸ್ಯಮಯ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.





ಕಾರ್ಯಕ್ರಮ ಆರಂಭದಿಂದ ಹಿಡಿದು ಕೊನೆಯವರೆಗೂ ‘ಸ್ಯಾಂಡಲ್‌ವುಡ್ ಟು ಬಾಲಿವುಡ್’ ಕಾರ್ಯಕ್ರಮ ಜನರನ್ನು ಆಸನಬಿಟ್ಟು ಕದಡದಂತೆ ಮಾಡುವ ಮೂಲಕ ಬಹಳ ಯಶಸ್ವಿಯಾಗಿ ನಡೆಯಿತು.
ಖ್ಯಾತ ಗಾಯಕರ ಸುಮಧುರ ಕಂಠಸಿರಿಯಿಂದ ಹೊರಹೊಮ್ಮಿದ ಸುಶ್ರಾವ್ಯ ಸಂಗೀತ ನೆರೆದ ಸಹಸ್ರಾರು ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು.






ಕಾರ್ಯಕ್ರಮವನ್ನು ಆರಂಭದಲ್ಲಿ ದುಬೈಯ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್’ನ ಆಡಳಿತ ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹಾಗು ಹರೀಶ್ ಶೇರಿಗಾರ್ ಮತ್ತು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ವೇಳೆ ಉದ್ಯಮಿ ಗುಣಶೀಲ ಶೆಟ್ಟಿ, ಗಾಯಕ ನವೀದ್ ಮಾಗುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತ ವಿಶೇಶ್ವರ ಭಟ್ ಹಾಗು ರವಿ ಹೆಗಡೆ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.














ಕಾರ್ಯಕ್ರಮದಲ್ಲಿ ಹರೀಶ್ ಶೇರಿಗಾರ್ ಅವರು ತಮ್ಮ ಸುಮಧುರ ಕಂಠದ ಮೂಲಕ ಹಳೆಯ ಹಿಂದಿ, ಕನ್ನಡ, ತುಳು ಸೂಪರ್ ಹಿಟ್ ಗೀತೆಗಳನ್ನು ಹಾಡುವ ಮೂಲಕ ನೆರೆದವರನ್ನು ಸಂಗೀತ ಲೋಕದಲ್ಲಿ ತೇಲಾಡುವಂತೆ ಮಾಡಿದರು.
ಸ್ಥಳೀಯ ಕಲಾವಿದರಾದ ಗಾಯಕ ನವೀದ್ ಮಾಗುಂಡಿ, ನಯನಾ ರಾಜಗೋಪಾಲ್, ಅಕ್ಷತಾ ರಾವ್, ಜೋಸೆಫ್ ಮಥಾಯಸ್, ಗುಣಶೀಲ ಶೆಟ್ಟಿ, ವಿಘ್ನೇಷ್, ಸುರೇಶ್ ದೇವಾಡಿಗ, ಡಾ.ಪುಷ್ಪರಾಜ್ ಶೆಟ್ಟಿ, ಸನ್ನಿಥಿ ಶೆಟ್ಟಿ ಅವರ ಹಾಡು ಸಂಗೀತ ಪ್ರಿಯರನ್ನು ಮೋಡಿತು. ರಾಜಗೋಪಾಲ ಮತ್ತು ತಂಡದವರ ಮ್ಯೂಸಿಕ್ ಕಾರ್ಯಕ್ರಮಕ್ಕೆ ಮತ್ತಷು ಮೆರುಗುತಂದುಕೊಟ್ಟಿತು.
‘ಸೌಲ್ & ಬೀಟ್ಸ್ ವಿಎಮ್ ಕ್ರ್ಯೂ’ ದುಬೈ ತಂಡದಿಂದ ನೃತ್ಯ ಹಾಗೂ ದುಬೈಯ ‘ಗಮ್ಮತ್ ಕಲಾವಿದೆರ್’ ತಂಡದ ‘ರಂಗ ಸಾರಥಿ’ ವಿಶ್ವನಾಥ ಶೆಟ್ಟಿ ನಿರ್ದೇಶನದ ‘ಗಮ್ಮತೇ ಗಮ್ಮತ್’ ತುಳು ಹಾಸ್ಯ ನಾಟಕ ನೆರೆದವರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡಿತು. ಆರಂಭದಿಂದ ಕೊನೆಯವರೆಗೂ ಸ್ವೀನಿ ಡಿಸೋಜ ಹಾಗು ತನ್ಸೀಫ್ ಕಾರ್ಯಕ್ರಮವನ್ನು ಬಹಳ ಚೆಂದವಾಗಿ ನಡೆಸಿಕೊಟ್ಟರು.









