ಖತರ್ಕೆಎಸ್‌ಕ್ಯೂನಿಂದ ಅಗಲಿದ ಗಣ್ಯರಿಗೆ ಗೌರವ ಶ್ರದ್ಧಾಂಜಲಿ: ಡಾ.ಭೈರಪ್ಪ, ಡಾ.ಸರದೇಶಪಾಂಡೆ,...

ಕೆಎಸ್‌ಕ್ಯೂನಿಂದ ಅಗಲಿದ ಗಣ್ಯರಿಗೆ ಗೌರವ ಶ್ರದ್ಧಾಂಜಲಿ: ಡಾ.ಭೈರಪ್ಪ, ಡಾ.ಸರದೇಶಪಾಂಡೆ, ಜೆ.ಪಾಲ್​ಗೆ ನುಡಿ ನಮನ

ದೋಹಾ(ಖತರ್): ಕನ್ನಡ ಸಾಹಿತ್ಯ ಲೋಕದ ಪದ್ಮಭೂಷಣ ದಿ.ಡಾ.ಎಸ್.ಎಲ್.ಭೈರಪ್ಪ, ರಂಗಭೂಮಿ ದಿಗ್ಗಜ ದಿ.ಡಾ.ಯಶವಂತ ಸರದೇಶಪಾಂಡೆ ಮತ್ತು ಕರ್ನಾಟಕ ಸಂಘ ಖತರ್‌ನ(KSQ) ಗೌರವಾನ್ವಿತ ಹಿರಿಯ ಸದಸ್ಯ ದಿ.ಜಗದೀಶ್ ಚಂದ್ರ ಪಾಲ್ (ಜೆ.ಪಾಲ್) ಅವರ ಅಗಲಿಕೆಯನ್ನು ಸ್ಮರಿಸುತ್ತ, ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಕೆಎಸ್‌ಕ್ಯೂ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯನ್ನು ದೋಹಾದ ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಬೆಂಗಳೂರು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಮೂವರು ದಿವಂಗತರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಅವರ ಅಗಲಿಕೆಯ ಶೋಕಾಚಾರಣೆ ಸ್ಮರಣಾರ್ಥವಾಗಿ ಒಂದು ನಿಮಿಷದ ಮೌನ ಆಚರಿಸಲಾಯಿತು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕರ್ನಾಟಕ ಸಂಘ ಖತರ್‌ನ ಅಧ್ಯಕ್ಷ ಎಂ.ರವಿ ಶೆಟ್ಟಿ ಅವರು ಅಗಲಿದ ಮೂವರು ಗಣ್ಯರ ಬರಹ ಬದುಕಿನ ಬಗ್ಗೆ ಬೆಳಕು ಚೆಲ್ಲಿ ಅವರ ಜೀವನದಲ್ಲಿನ ಹೆಜ್ಜೆ ಗುರುತುಗಳನ್ನು ಸ್ಮರಿಸಿದರು. ಅವರ ಮೌಲ್ಯಗಳು, ಆದರ್ಶಗಳು ಮತ್ತು ಅವರು ನಡೆದು ತೋರಿಸಿದ ಹಾದಿಯನ್ನು ಅನುಸರಿಸುವುದೇ ಅವರ ಪರಂಪರೆಗೆ ಸಲ್ಲಿಸುವ ನಿಜವಾದ ಗೌರವ ಎಂದು ಪ್ರತಿಪಾದಿಸಿದರು.

ಸಲಹಾ ಸಮಿತಿ ಅಧ್ಯಕ್ಷ ಮಹೇಶ್ ಗೌಡ, ಸಲಹೆಗಾರರಾದ ವಿ.ಎಸ್.ಮನ್ನಂಗಿ ಮತ್ತು ಎಚ್.ಕೆ. ಮಧು, ಐಸಿಸಿ ಮಾಜಿ ಅಧ್ಯಕ್ಷೆ ಮಿಲನ್ ಅರುಣ್ ಮತ್ತು ಸದಸ್ಯರಾದ ಮುರಳೀಧರ್ ಮಲೋಡೆ, ಡಾ.ದೊರೆ ಹಾಗೂ ಅನಿಲ್ ಭಾಸಗಿ ಅವರು ವೈಯಕ್ತಿಕ ಅನುಭವಗಳು ಮತ್ತು ನೆನಪುಗಳನ್ನು ಹಂಚಿಕೊಂಡರು.

ಡಾ.ಭೈರಪ್ಪ ಅವರ ಆಳವಾದ ಸಾಹಿತ್ಯಿಕ ಪ್ರಭಾವ, ರಂಗಭೂಮಿಯಲ್ಲಿ ಡಾ.ಸರದೇಶಪಾಂಡೆ ಅವರ ಸೃಜನಶೀಲತೆ ಮತ್ತು ಕೆಎಸ್‌ಕ್ಯೂಗೆ ಜೆ. ಪಾಲ್ ಅವರ ನಿಸ್ವಾರ್ಥ ಸೇವೆಯನ್ನು ಅವರು ಪ್ರಮುಖವಾಗಿ ಮೆಲುಕು ಹಾಕಿದರು.

ಡಾ. ಭೈರಪ್ಪ ಅವರು ‘ಖತರ್ ಕನ್ನಡ ಸಮ್ಮಾನ್’ ಪ್ರಶಸ್ತಿ ಪ್ರದಾನಕ್ಕಾಗಿ ಖತರ್‌ಗೆ ಭೇಟಿ ನೀಡಿದ ಸನ್ನಿವೇಶವನ್ನು ಹಾಗೂ ಡಾ. ಸರದೇಶಪಾಂಡೆ ಅವರು ತಮ್ಮ ಮೆಚ್ಚುಗೆ ಗಳಿಸಿದ ನಾಟಕ ಕೃತಿಗಳನ್ನು ಪ್ರಸ್ತುತಪಡಿಸಲು ಖತರ್‌ಗೆ ಹಲವು ಭಾರಿ ಭೇಟಿ ನೀಡಿದ್ದನ್ನು ಭಾಷಣಕಾರರು ಭಾವನಾತ್ಮಕವಾಗಿ ನೆನಪಿಸಿಕೊಂಡರು.

ಎಲ್ಲ ಸಮಿತಿ ಸದಸ್ಯರ, ಸಲಹಾ ಮಂಡಳಿಯ, ಸ್ವಯಂಸೇವಕರ ಸಹಕಾರದೊಂದಿಗೆ ಈ ಶ್ರದ್ಧಾಂಜಲಿ ಸಭೆಯು ಮಹಾನ್ ಚೇತನಗಳ ಜೀವನವನ್ನು ಗೌರವಿಸಿ, ಅವರ ಕೊಡುಗೆಗಳನ್ನು ಸ್ಮರಿಸುವ ಹೃದಯಸ್ಪರ್ಶಿ ಕಾರ್ಯಕ್ರಮವಾಗಿ ಸಂಪನ್ನವಾಯಿತು. ಸಲಹೆಗಾರರಾದ ಅರುಣ್ ಕುಮಾರ್ ಮತ್ತು ಡಾ.ಸಂಜಯ್ ಕುದರಿ, ಬಂಟ್ಸ್ ಖತರ್ ಅಧ್ಯಕ್ಷ ನವೀನ್ ಶೆಟ್ಟಿ ಇರುವೈಲ್, ಸಮುದಾಯ ನಾಯಕ ಅಸ್ಮತ್ ಅಲಿ ಹಾಗೂ ವಿನೋದ ಪಾಲ್ ಅವರ ಸೊಸೆ ಗ್ರೀಷ್ಮಾ ಮತ್ತು ಕುಟುಂಬಸ್ಥರು ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಕಾರ್ಯದರ್ಶಿ ಭೀಮಪ್ಪಾ ಖೋತ ಅವರು ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರ ” ಕಾಲದ ಮರಳಿನಲ್ಲಿ ಹೆಜ್ಜೆ ಗುರುತುಗಳನ್ನು ಬಿಡು, ಕಾಲನ್ನೆಳೆಯುತ್ತ ನಡೆಯಬೇಡಾ” ಎನ್ನುವ ಮಾತನ್ನು ಪ್ರಸ್ತಾಪಿಸಿ ಅಗಲಿದ ಮಹನೀಯರ ಹೆಜ್ಜೆ ಗುರುತುಗಳನ್ನು ಸ್ಮರಿಸಿಕೊಳ್ಳುತ್ತಾ ಸಭೆಯನ್ನು ಪ್ರಾರಂಭಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಪರಿಸರ ಮತ್ತು ವ್ಯವಸ್ಥಾಪಕ ಕಾರ್ಯದರ್ಶಿ ಶಶಿಧರ ಹೆಚ್.ಬಿ. ಧನ್ಯವಾದ ಸಮರ್ಪಣೆ ಮಾಡಿದರು.

Hot this week

Kuwait: KCWA’s annual family picnic draws over 600 attendees at Mishref Garden

Kuwait: The Kuwait Canara Welfare Association (KCWA) organised its...

ಖತರ್‌ನಲ್ಲಿ ಕರಾವಳಿ ಕನ್ನಡಿಗನ ಸಾಧನೆ; ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆ

ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ...

ಖತರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ: ಗಲ್ಫ್ ನಾಡಿನಲ್ಲಿ ಗಂಧದ ನಾಡಿನ ವೈಭವ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ)ನ ಕರ್ನಾಟಕ ರಾಜ್ಯೋತ್ಸವ – ರಜತ...

ದುಬೈ: ಕನ್ನಡಿಗರ ಕೂಟದಿಂದ ʼಕನ್ನಡ ರಾಜ್ಯೋತ್ಸವ 2025ʼ ಭವ್ಯ ಸಂಭ್ರಮ

ದುಬೈ: ಕನ್ನಡಿಗರ ಕೂಟ – ದುಬೈ ಮತ್ತು ಗಲ್ಫ್ ಕನ್ನಡ ಮೂವೀಸ್...

Related Articles

Popular Categories