ಯುಎಇಯುಎಇ ವಿಸಿಟಿಂಗ್ ವೀಸಾ ಗೊಂದಲಕ್ಕೆ ತೆರೆ; ಪ್ರಯಾಣಿಕರ ಮುಖದಲ್ಲಿ...

ಯುಎಇ ವಿಸಿಟಿಂಗ್ ವೀಸಾ ಗೊಂದಲಕ್ಕೆ ತೆರೆ; ಪ್ರಯಾಣಿಕರ ಮುಖದಲ್ಲಿ ಮಂದಹಾಸ; ಪ್ರಯಾಣಿಕರೇ ಈ ಮಾಹಿತಿ ಬಗ್ಗೆ ಗಮನವಿರಲಿ….

ದುಬೈ: ಇತ್ತೀಚಿಗೆ ಯುಎಇಗೆ ಹೋಗಲು ವಿಸಿಟಿಂಗ್(ಭೇಟಿ) ವೀಸಾ ಬಗ್ಗೆ ಜನರಲ್ಲಿ ಉಂಟಾಗಿರುವ ಗೊಂದಲ, ಸಮಸ್ಯೆಗಳಿಗೆ ಈಗ ಅಂತಿಮ ತೆರೆಬಿದ್ದಿದ್ದು, ಪ್ರಯಾಣಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ವಿಸಿಟ್ ವೀಸಾ ಬಗ್ಗೆ ಯುಎಇ ಸರಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಕಳೆದ ವರ್ಷದಿಂದ ಜಾರಿಗೆ ತಂದ ಕಾರಣ, ದುಬೈ, ಅಬುಧಾಬಿ, ಶಾರ್ಜಾ ಸೇರಿದಂತೆ ಯುಎಇಗೆ ತೆರಳುತ್ತಿದ್ದ ಉದ್ಯೋಗಾಕಾಂಕ್ಷಿಗಳು, ವೈಯಕ್ತಿಕ ಅಥವಾ ವ್ಯವಹಾರ ಉದ್ದೇಶಗಳಿಗಾಗಿ ಅಥವಾ ಸಂಬಂಧಿಕರು, ಸ್ನೇಹಿತರನ್ನು ಭೇಟಿ ಮಾಡಲು ಹೋಗುತ್ತಿದ್ದವರಿಗೆ ಇದರಿಂದ ಹಲವು ಸಮಸ್ಯೆಗಳು, ಗೊಂದಲಗಳು ಎದುರಾಗಿದ್ದವು.

ಯುಎಇಯ ಭೇಟಿಗಾಗಿ ಸಲ್ಲಿಕೆಯಾಗುತ್ತಿದ್ದ ಬಹುತೇಕ ವಿಸಿಟಿಂಗ್(ಭೇಟಿ) ವೀಸಾ ದಾಖಲಾತಿ ಸಲ್ಲಿಕೆಯ ಕೊರತೆಯಿಂದ ತಿರಸ್ಕೃತಗೊಳ್ಳುತ್ತಿದ್ದವು. ಇದರಿಂದ ಜನ ಕಂಗೆಟ್ಟಿದ್ದರು. ಜೊತೆಗೆ ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಕರ್ನಾಟಕದ ಕರಾವಳಿ ಭಾಗದ ಜನರಿಗೆ ಯುಎಇಯಲ್ಲಿ ವೀಸಾ ದೊರೆಯುತ್ತಿಲ್ಲ ಎಂಬ ಸಂದೇಶಗಳು ಹರಿದಾಡುತ್ತಿದ್ದು, ಇದು ಉದ್ಯೋಗಾಕಾಂಕ್ಷಿಗಳನ್ನು ಹಾಗು ಯುಎಇಯಲ್ಲಿ ಉದ್ಯೋಗ ಮಾಡಿಕೊಂಡಿರುವವರರನ್ನು ಭೇಟಿ ಮಾಡಲು, ಇನ್ನಿತರ ಕಾರ್ಯಕ್ರಮಗಳ ನಿಮಿತ್ತ ಹೋಗುತ್ತಿದ್ದ ಜನರ ನಿದ್ದೆಗೆಡಿಸಿತ್ತು.

ವೀಸಾ ಅನುಮೋದನೆಗೊಳ್ಳಲು ಬೇಕಾದ ದಾಖಲಾತಿಗಳ ಬಗ್ಗೆ ಟ್ರಾವೆಲ್ಸ್ ಏಜೆನ್ಸಿಗಳು ಜನರಲ್ಲಿ ನಿರಂತರವಾಗಿ ಸೂಚನೆಗಳನ್ನು ನೀಡುತ್ತಲೇ ಬಂದಿದ್ದು, ಈಗ ಈ ಸಮಸ್ಯೆ ಬಹುತೇಕ ಅಂತ್ಯ ಕಂಡಿದೆ.

ಯುಎಇಯ ಸದ್ಯದ ಷರತ್ತುಗಳ ಪ್ರಕಾರ, ಪ್ರಯಾಣಿಕರ ಬಳಿ 3,000 ದಿರ್ಹಂ ಅಂದರೆ ಸುಮಾರು 68,000 ರೂಪಾಯಿ ಅಥವಾ ಕ್ರೆಡಿಟ್ ಕಾರ್ಡ್ ಇರಬೇಕು, ಪ್ರಯಾಣದ ಟಿಕೆಟಿನ ಜೊತೆ ರಿಟರ್ನ್ ಟಿಕೆಟ್ ಮತ್ತು ವಸತಿ ಪುರಾವೆ(ಹೋಟೆಲ್ ಬುಕ್ಕಿಂಗ್) ಅಥವಾ ಸಂಬಂಧಿಕರು, ಸ್ನೇಹಿತರ ಜೊತೆ ವಾಸಿಸುವವರೂ ಅವರ ಮನೆಯ ಬಾಡಿಗೆ ಒಪ್ಪಂದ(Tenancy Contract), ಎಮಿರೇಟ್ಸ್ ಐಡಿ ಮಾಹಿತಿಯ ದಾಖಲಾತಿ ಮುಂಗಡವಾಗಿ ಸಲ್ಲಿಸಬೇಕಾಗುತ್ತದೆ. ಇದನ್ನು ಸಲ್ಲಿಸಲು ಸಾಧ್ಯವಾಗದ ಕಾರಣದಿಂದ ವಿಸಿಟಿಂಗ್ ವೀಸಾಗಳು ತಿರಸ್ಕೃತಗೊಳ್ಳುತ್ತಿದ್ದವು. ಆದರೆ ಈಗ ಪ್ರಯಾಣಿಕರು ಇದನ್ನೆಲ್ಲಾ ಒದಗಿಸುತ್ತಿರುವುದರಿಂದ ವೀಸಾ ಒಂದೆರೆಡು ದಿನಗಳೊಳಗೆ ಅನುಮೋದನೆಯಾಗುತ್ತಿದೆ.

ಪ್ರಯಾಣಿಕರೇ ಈ ಬಗ್ಗೆ ಗಮನವಿರಲಿ
ನೀವು ಯುಎಇಗೆ ವಿಸಿಟಿನ್ ವೀಸಾದಲ್ಲಿ ಭೇಟಿ ನೀಡುವವರಾಗಿದ್ದರೆ ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳಿ. ವೀಸಾ ವೇಳೆ ಸಲ್ಲಿಕೆ ಮಾಡುವ ಎಲ್ಲ ದಾಖಲಾತಿಗಳನ್ನು ನಿಮ್ಮ ಬಳಿ ಇಟ್ಟು ಕೊಂಡು ಪ್ರಯಾಣ ಬೆಳೆಸಿ. ನೀವು ಪ್ರಯಾಣಿಸುವ ಆಯಾ ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಪರಿಶೀಲನೆ ಮಾಡಲೆಂದೇ ಅಧಿಕಾರಿಗಳ ತಂಡವೊಂದು ಕಾರ್ಯನಿರ್ವಹಿಸುತ್ತಿದೆ. ಅವರು ನಿಮ್ಮ ಬಳಿ ಬಂದು ನಿಮ್ಮ ಬಳಿ ಪ್ರಯಾಣದ ನೀವು ಕೊಂಡಾಗಬೇಕಾದ ಹಣ, ಕ್ರೆಡಿಟ್ ಕಾರ್ಡ್, ಟಿಕೆಟಿನೊಂದಿಗೆ ಹಿಂದಿರುಗುವ ಟಿಕೆಟನ್ನು ಕೂಡ ಪರಿಶೀಲಿಸುತ್ತಾರೆ. ಜೊತೆಗೆ ನಿಮ್ಮ ವಾಸ್ತವ್ಯದ ಹೋಟೆಲ್ ಬುಕ್ಕಿಂಗ್ ಅಥವಾ ಸಂಬಂಧಿಕರ, ಸ್ನೇಹಿತರ ಜೊತೆ ಇರಲು ಹೋಗುವುದಾದರೆ ಅವರ ಮನೆಯ ಬಾಡಿಗೆ ಒಪ್ಪಂದ(Tenancy Contract), ಎಮಿರೇಟ್ಸ್ ಐಡಿ ಮಾಹಿತಿಯ ದಾಖಲಾತಿಗಳನ್ನೂ ಕೂಡ ಪಡೆದು ಬಳಿಕವಷ್ಟೇ ನಿಮ್ಮ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಾರೆ. ಈ ಕಟ್ಟುನಿಟ್ಟಿನ ಕಾರ್ಯ ನಡೆಯುವುದು ನೀವು ಪ್ರಯಾಣಿಸುವ ಭಾರತದ ವಿಮಾನ ನಿಲ್ದಾಣಗಳಲ್ಲಿ.

ದುಬೈ ಫೆಸ್ಟಿವಲ್’ನಂತಹ ಕಾರ್ಯಕ್ರಮಗಳಿರುವುದರಿಂದ ದುಬೈಯಲ್ಲಿ ಪ್ರವಾಸಿಗರ ಸಂಖ್ಯೆ ಶೇ.20ರಿಂದ 25ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 2024ರ ಮೊದಲ 11 ತಿಂಗಳುಗಳಲ್ಲಿ ದುಬೈ 16.79 ಮಿಲಿಯನ್ ಪ್ರವಾಸಿಗರ ವೀಸಾವನ್ನು ಅನುಮೋದಿಸಿದೆ. ಜೊತೆಗೆ ಈಗ ಸರಿಯಾದ ದಾಖಲಾತಿ ಒದಗಿಸುತ್ತಿರುವುದರಿಂದ ಯುಎಇ ಭೇಟಿ ವೀಸಾಗಳ ಅನುಮೋದನೆಯನ್ನು ಹೆಚ್ಚಿಸುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ವೀಸಾ ಅನುಮೋದನೆಯಲ್ಲಿ ಶೇಕಡ 9 ರಷ್ಟು ಹೆಚ್ಚಳವಾಗಿದೆ.

ಆದರೆ ಈ ಹಿಂದೆ ವಿಸಿಟಿಂಗ್ ವೀಸಾಗಳ ದರ ಕಡಿಮೆಯಾಗಿತ್ತು. ಈಗ ದರವನ್ನು ಕೂಡಾ ಯುಎಇ ಸರಕಾರ ಹೆಚ್ಚಿಸಿದೆ. ಜೊತೆಗೆ ಕಾಲಾವಧಿಯನ್ನು ಕೂಡ ಕಡಿತ ಗೊಳಿಸಿದೆ. 2024ರ ಕೊನೆಯ ತ್ರೈಮಾಸಿಕದಲ್ಲಿ ವಿಸಿಟಿಂಗ್ ವೀಸಾಗಳ ಅನುಮೋದನೆ ದರವು ಸುಮಾರು 5-6 ಪ್ರತಿಶತದಷ್ಟು ಹೆಚ್ಚಾಗಿದೆ.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories