ಯುಎಸ್‌ಎಅಮೇರಿಕದಲ್ಲಿ ಭಾಗವತ ಕರುಣಾಕರ ಆಚಾರ್ಯರಿಂದ ಯಕ್ಷಗಾನ ತರಬೇತಿ ಕಾರ್ಯಗಾರ;...

ಅಮೇರಿಕದಲ್ಲಿ ಭಾಗವತ ಕರುಣಾಕರ ಆಚಾರ್ಯರಿಂದ ಯಕ್ಷಗಾನ ತರಬೇತಿ ಕಾರ್ಯಗಾರ; ‘ಭೀಷ್ಮೋತ್ಪತ್ತಿ’-‘ಗದಾಯುದ್ಧ’ ಯಕ್ಷಗಾನ ಪ್ರದರ್ಶನ

ಕ್ಯಾಲಿಫೋರ್ನಿಯಾ: ಇತ್ತೀಚಿಗೆ ಅಮೇರಿಕ ಪ್ರವಾಸ ಕೈಗೊಂಡ ಯಕ್ಷಗಾನ ಗುರುಗಳಾದ ಭಾಗವತ ಕರುಣಾಕರ ಆಚಾರ್ಯ ಮತ್ತು ಅವರ ಪತ್ನಿ ಶಾಂತ ಕರುಣಾಕರಾಚಾರ್ಯ ಅಮೆರಿಕದಲ್ಲಿರುವ ಭಾರತೀಯ ಹವ್ಯಾಸಿ ಕಲಾವಿದರಿಗೆ ಯಕ್ಷಗಾನ ತರಬೇತಿ ಕಾರ್ಯಗಾರವನ್ನು ನಡೆಸಿ, ಯಕ್ಷಗಾನ ಪ್ರದರ್ಶನ ನಡೆಸಿಕೊಟ್ಟರು.

ಕ್ಯಾಲಿಫೋರ್ನಿಯಾದ ಸನಾತನ ಧರ್ಮ ಕೇಂದ್ರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸ್ಥಳೀಯ ಕಲಾವಿದರಿಂದ ಫೆಬ್ರವರಿ 16ರಂದು ‘ಭೀಷ್ಮೋತ್ಪತ್ತಿ’ ಪ್ರಸಂಗ ಯಕ್ಷಗಾನ ಪ್ರದರ್ಶನಗೊಂಡಿತು.

ಭಾಗವತ ಕರುಣಾಕರ ಆಚಾರ್ಯ ಮತ್ತು ಅವರ ಪತ್ನಿ ಶಾಂತ ಕರುಣಾಕರಾಚಾರ್ಯ ಅವರು ಅಕ್ಟೋಬರ್ 2024ರಲ್ಲಿ ಕಾರ್ಯಗಾರವನ್ನು ಅಮೇರಿಕದಲ್ಲಿ ಆರಂಭಿಸಿದ್ದು, ಫೆಬ್ರವರಿ 15ರಂದು ಸ್ಯಾನ್ ಹ್ಯಾಕ್ವಿನ್ ಕನ್ನಡ ಸಂಘದವರು ಸಂಕ್ರಾಂತಿ ಕಾರ್ಯಕ್ರಮವಾಗಿ ‘ಭೀಷ್ಮೋತ್ಪತ್ತಿ’ ಪ್ರಸಂಗ ಪ್ರದರ್ಶಿಸಿದರು.

ಇದಕ್ಕೂ ಮೊದಲು ಅಮೇರಿಕದ ಡೆಲಿವೇರಾ ಹೊಯ್ಸಳ ಕನ್ನಡ ಸಂಘದ ‘ಯಕ್ಷಾಂಗಣ ಸಂಘ’ದ ಆಶ್ರಯದಲ್ಲಿ ಭಾಗವತ ಕರುಣಾಕರ ಆಚಾರ್ಯ ಮತ್ತು ಅವರ ಪತ್ನಿ ಶಾಂತ ಕರುಣಾಕರಾಚಾರ್ಯ ಸಾರಥ್ಯದಲ್ಲಿ ನವಂಬರ್ ತಿಂಗಳಲ್ಲಿ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನಗೊಂಡಿತು.

ಈ ಯಕ್ಷ ಗುರು ದಂಪತಿಗಳನ್ನು ಅಮೇರಿಕಕ್ಕೆ ಕರೆಸಿಕೊಂಡವರಲ್ಲಿ ಸಂದೀಪ್ ನಾರಾಯಣ್, ಶ್ರೀ ಪಾದ ಶಾಂತಿಕ ಹೆಗಡೆ ಪ್ರಮುಖರು. ‘ಭೀಷ್ಮೋತ್ಪತ್ತಿ’ ಹಾಗು ‘ಗದಾಯುದ್ಧ’ ಯಕ್ಷಗಾನದಲ್ಲಿ ಶಾಂತನುವಾಗಿ ಶ್ರೀಪಾದ ಹೆಗಡೆ ತನ್ನ ಮನೋಜ್ಞ ಅಭಿನಯ ಮಾತುಗಾರಿಕೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದರೆ, ದೇವ ವ್ರತನಾಗಿ ಶಶಿಧರ ಸೋಮಯಾಜಿ ಪುರೋಹಿತರು ಸಂಪ್ರದಾಯ ಶೈಲಿಯ ಕುಣಿತ, ಸಾಹಿತ್ಯ ಪೂರ್ಣ ಅರ್ಥಗರ್ಭಿತ ಮಾತುಗಾರಿಕೆಯಿಂದ ಪಾತ್ರಕ್ಕೆ ಅದ್ಭುತ ಜೀವ ತುಂಬಿದರು. ಕಂದರನಾಗಿ ಅಶ್ವಿನಿ ಬಿಕೆ ಕುಂದ ಕನ್ನಡದಲ್ಲಿ ಹಾಸ್ಯ ಚಟಾಕಿಯಿಂದ ಪ್ರೇಕ್ಷಕರನ್ನು ರಂಜಿಸಿದರು. ಸತ್ಯವತಿಯಾಗಿ ಚೇತನ ಶೆಟ್ಟಿ ಮತ್ತು ವೀಣಾ ಗಿರೀಶ್ ಇಬರಿಬ್ಬರು ಈ ಪಾತ್ರವನ್ನು ನಿರ್ವಹಿಸಿ ವೃತ್ತಿ ಕಲಾವಿದರಿಗೆ ಸರಿ ಸಮಾನರೆಂಬುದನ್ನು ಸಾಬೀತುಪಡಿಸಿದರು. ತಮಾಲ ಕೇತುವಾಗಿ ಮೇಘ ಹೇರೂರು ಅದ್ಭುತವಾಗಿ ರಕ್ಕಸ ಬಣ್ಣದ ವೇಷವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಗಾಲವ ಮುನಿಯಾಗಿ ಧರ್ಮದರ್ಶಿ ಕುಮಾರ್ ಜೋಶಿ ಪುರೋಹಿತರು ಹಾಗೂ ನರೇಶ್ ಕುಮಾರ್ ಪಾತ್ರವನ್ನು ನಿರ್ವಹಿಸಿದರು. ಶಶಾಂಕ್ ಕಾಶಿ ಚಂಡೆಗಾರರಾಗಿ ಹಾಗೂ ದೇವ ವ್ರತ ಪಾತ್ರ ದಾರಿಯಾಗಿ ಕಾಣಿಸಿಕೊಂಡರು.

ಇನ್ನು ಹಿಮ್ಮೆಳದಲ್ಲಿ ಭಾಗವತರಾಗಿ ಗುರು ಕರುಣಾಕರಾಚಾರ್ಯ, ಮದ್ದಳೆಯಲ್ಲಿ ಡಾಕ್ಟರ್ ರಮೇಶ್ ಕೆಕೂಡಾ ಸಹಕರಿಸಿದರು. ಕಾರ್ಯಕ್ರಮದಲ್ಲಿ ಯಕ್ಷ ಗುರುಗಳಾದ ಕರುಣಾಕರ ಆಚಾರ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಚ್ಯಾರ್ಮೆನ್ ರೇಣುಕಾ ಆರಾಧ್ಯ, ಸನಾತನ ಧರ್ಮ ಕೇಂದ್ರದ ಧರ್ಮದರ್ಶಿ ಕುಮಾರ ಜೋಷಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಅಮೇರಿಕದಲ್ಲಿ ಭಾರತೀಯ ಯಕ್ಷಗಾನ ಕಲೆ ನೆಲೆ ನಿಲ್ಲಲು ಶ್ರಮಿಸುತ್ತಿರುವ ಕಲಾವಿದರಲ್ಲಿ ಪ್ರಮುಖರಾದ ಸಂದೀಪ್ ನಾರಾಯಣ್. ಶ್ರೀ ಪಾದ ಶಾಂತಿಕಾ ಹೆಗಡೆ, ಶ್ವೇತಾ ಆಚಾರ್ಯ, ಶ್ರೀನಿಧಿ ಹೊಳ್ಳ, ರಾಜೇಶ್ ಕುಂದಾಪುರ, ನಂದನ್ ನಾಗಭೂಷಣ್, ಅಶೋಕ ಸತ್ರವೇ, ಪಣಿರಾಜ್ ಸಹಕರಿಸಿದರು.

ಸೌಮ್ಯಾ ಕೆ. ಕುಂದಾಪುರ

Hot this week

Prakash Godwin Pinto elected president of KCWA for 2025-27

Kuwait: The Kuwait Canara Welfare Association (KCWA) elected its...

AATA organize Tulu Script learning workshop in America

The All America Tulu Association (AATA), a nonprofit organization...

ಯುಎಇ, ಸೌದಿ, ಬಹರೈನ್, ಖತರ್, ಕುವೈತ್’ನಲ್ಲಿ ಸಂಭ್ರಮದ ಈದ್‌ ಉಲ್‌ ಫಿತ್ರ್ ಆಚರಣೆ

ದುಬೈ: ಯುಎಇ, ಸೌದಿ ಅರೇಬಿಯಾ, ಬಹರೈನ್, ಖತರ್, ಕುವೈತ್ ಸೇರಿದಂತೆ ಗಲ್ಫ್'ನಲ್ಲಿ...

ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ರವಿವಾರ ಈದ್‌ ಉಲ್‌ ಫಿತರ್‌ ಆಚರಣೆ

ರಿಯಾದ್‌ : ಸೌದಿ ಅರೇಬಿಯಾದಲ್ಲಿ ಶನಿವಾರ ಸಂಜೆ ಶವ್ವಾಲ್‌ ಚಂದ್ರ ದರ್ಶನವಾದ...

Related Articles

Popular Categories