ಸೌದಿ ಅರೇಬಿಯಾಮಕ್ಕಾದಲ್ಲಿ ಈ ಬಾರಿ 98 ಭಾರತೀಯ ಹಜ್ ಯಾತ್ರಿಗಳು...

ಮಕ್ಕಾದಲ್ಲಿ ಈ ಬಾರಿ 98 ಭಾರತೀಯ ಹಜ್ ಯಾತ್ರಿಗಳು ಮೃತ್ಯು : ಕೇಂದ್ರ ಸರಕಾರ

ಹೊಸದಿಲ್ಲಿ : ಈ ವರ್ಷ ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆಯ ಸಂದರ್ಭ 98 ಭಾರತೀಯ ಹಜ್ ಯಾತ್ರಿಗಳು ಮೃತಪಟ್ಟಿದ್ದಾರೆ. ಈ ಎಲ್ಲಾ ಸಾವುಗಳು ಸಹಜ ಕಾಯಿಲೆ ಹಾಗೂ ವೃದ್ಧಾಪ್ಯದಿಂದ ಸಂಭವಿಸಿವೆ ಎಂದು ಕೇಂದ್ರ ಸರಕಾರ ಶುಕ್ರವಾರ ಹೇಳಿದೆ.

‘‘ಪ್ರತಿ ವರ್ಷ ಹಲವು ಭಾರತೀಯ ಯಾತ್ರಿಗಳು ಹಜ್‌ಗೆ ಭೇಟಿ ನೀಡುತ್ತಾರೆ. ಈ ವರ್ಷ ಇದುವರೆಗೆ 1,75,000 ಭಾರತೀಯ ಯಾತ್ರಿಗಳು ಹಜ್‌ಗೆ ಭೇಟಿ ನೀಡಲು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಜುಲೈ 9ರಿಂದ 22ರ ವರೆಗೆ ಇದುವರೆಗೆ 98 ಭಾರತೀಯ ಹಜ್ ಯಾತ್ರಿಗಳು ಸಾವನ್ನಪ್ಪಿದ್ದಾರೆ. ಸಹಜ ಕಾಯಿಲೆ ಹಾಗೂ ವೃದ್ಧಾಪ್ಯ ಈ ಸಾವುಗಳಿಗೆ ಕಾರಣ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ 187 ಹಜ್ಜ್ ಯಾತ್ರಿಗಳು ಮೃತಪಟ್ಟಿದ್ದರು ಎಂದು ಅದು ಹೇಳಿದೆ.

Hot this week

ಅನಿವಾಸಿ ಕನ್ನಡಿಗರ ಟ್ವಿಟ್ಟರ್ ಅಭಿಯಾನ ನಂ.1 ಟ್ರೆಂಡಿಂಗ್: ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಕನ್ನಡಿಗಾಸ್ ಫೆಡರೇಶನ್

ದುಬೈ: ಅನಿವಾಸಿ ಕನ್ನಡಿಗರ ಸಚಿವಾಲಯ ಸ್ಥಾಪನೆಗೆ ಒತ್ತಾಯಿಸಿ ವಿಶ್ವದಾದ್ಯಂತದ ಕನ್ನಡಿಗರು ನಡೆಸಿದ...

ಅನಿವಾಸಿ ಕನ್ನಡಿಗರ ಸಚಿವಾಲಯ, ಸಚಿವರ ನೇಮಕಕ್ಕೆ ಆಗ್ರಹ; ಟ್ವಿಟ್ಟರ್ ಅಭಿಯಾನ ಭಾರತದಲ್ಲಿ ನಂ.1 ಟ್ರೆಂಡಿಂಗ್

ದುಬೈ: ಅನಿವಾಸಿ ಕನ್ನಡಿಗರ ಬಹುಕಾಲದ ಬೇಡಿಕೆಯಾಗಿರುವ ಎನ್‌ಆರ್‌ಐ ಸಚಿವಾಲಯವನ್ನು ಕೂಡಲೇ ಆರಂಭಿಸಿ,...

ಶಾಲೆಯ ಕ್ರೀಡಾಂಗಣದಿಂದ ಮುಖ್ಯಮಂತ್ರಿ ಕಚೇರಿವರೆಗೆ; ತಮ್ಮ ವಿದ್ಯಾರ್ಥಿ ಡಿ.ಕೆ. ಶಿವಕುಮಾರ್ ಕುರಿತು ನಿವೃತ್ತ ಶಿಕ್ಷಕ ಪಾಂಡು ಅವರ ನೆನಪುಗಳು

ಲೇಖನ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಇತಿಹಾಸವು ಮಹಾನ್ ನಾಯಕರನ್ನು ನೆನಪಿಸಿಕೊಳ್ಳುತ್ತದೆ. ಆದರೆ ಪ್ರತಿಯೊಬ್ಬ...

ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ವಾರ್ಷಿಕ ಮಹಾಸಭೆ

ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ಇದರ 28ನೇ ವಾರ್ಷಿಕ ಮಹಾಸಭೆ...

ದುಬೈಯಲ್ಲಿ ಕನ್ನಡ ಭಾಷೆಯನ್ನು ಎತ್ತಿ ಹಿಡಿದ ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ.ಕೆ.ಗಣೇಶ್ ರೈ

ಜಗತ್ತಿನ ನಾನಾ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆಗಾಗಿ...

Related Articles

Popular Categories