ಸಂದೇಶʼಗ್ಲೋಬಲ್‌ ಕನ್ನಡಿಗʼಗೆ ಶುಭಕೋರಿದ ಅನಿವಾಸಿ ಕನ್ನಡಿಗ ಕೆ.ಆರ್.ಶ್ರೀನಾಥ್

ʼಗ್ಲೋಬಲ್‌ ಕನ್ನಡಿಗʼಗೆ ಶುಭಕೋರಿದ ಅನಿವಾಸಿ ಕನ್ನಡಿಗ ಕೆ.ಆರ್.ಶ್ರೀನಾಥ್

ವಾರ್ತಾಭಾರತಿ ಸುದ್ದಿ ಸಂಸ್ಥೆಯು ಅನಿವಾಸಿ ಕನ್ನಡಿಗರಿಗಾಗಿಯೇ ಜಾಗತಿಕ ವೇದಿಕೆಯಾಗಿ ‘globalkannadiga.com’ ವೆಬ್ ಸೈಟ್ ಪ್ರಾರಂಭಿಸುತ್ತಿರುವುದು ಅತಿ ಸಂತೋಷದ ಸಮಾಚಾರ. ಇದು ಕನ್ನಡ ಪತ್ರಿಕೋದ್ಯಮದಲ್ಲಿ ವಿನೂತನ ಪ್ರಯತ್ನ.

‘ವಾರ್ತಾಭಾರತಿ’ ಕನ್ನಡ ದಿನಪತ್ರಿಕೆ ಕರ್ನಾಟಕದ ಜನಪ್ರಿಯ ಪತ್ರಿಕೆಗಳಲ್ಲೊಂದು.  ಪ್ರತಿದಿನದ ತತ್ ಕ್ಷಣದ ಸುದ್ದಿಯನ್ನು Varthabharati.in ನಲ್ಲಿ ಕನ್ನಡದಲ್ಲಿ ಓದಬಹುದು. ಯೂಟ್ಯೂಬ್ ನಲ್ಲೂ ವಾರ್ತಾಭಾರತಿ ಚಾನಲ್ ನಲ್ಲಿ ವೀಡಿಯೊಗಳನ್ನು ನೋಡಬಹುದು. ಇಂಗ್ಲಿಷ್ ಭಾಷೆಯಲ್ಲಿ english.varthabharati.in ನಲ್ಲಿ ಓದಬಹುದು.

ಜಾಗತೀಕರಣ ಪ್ರಪಂಚದಲ್ಲಿ ತಮ್ಮ ವೃತ್ತಿ ಹಾಗೂ ವ್ಯಾಪಾರಗಳನ್ನು ಅರಸಿ ಅಸಂಖ್ಯಾತ ಕನ್ನಡಿಗರು ಇಂದು ವಿದೇಶಗಳಲ್ಲಿ ನೆಲಸಿದ್ದಾರೆ. ಅವರೆಲ್ಲರಿಗೂ ಎಂದೆಂದೂ ತಮ್ಮ ಮಾತೃಭಾಷೆ ಹಾಗೂ ತಾಯ್ನಾಡಿನ ಮೇಲಿನ ಪ್ರೇಮ ಪ್ರತಿಕ್ಷಣವೂ ಮಿಡಿಯುತ್ತಿರುತ್ತದೆ. ಇಂತಹ ಅನಿವಾಸಿ ಕನ್ನಡಿಗರ ಹಂಬಲವನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಲು globalkannadiga.com ವೆಬ್ ಸೈಟ್ ಕೊಂಡಿಯಾಗಲಿದೆ.

ಅಮೇರಿಕಾದ ಅಟ್ಲಾಂಟ ನಗರದ ಬಹು ವರ್ಷದ ನಿವಾಸಿಯಾಗಿ ಹಾಗೂ ವಾರ್ತಾಭಾರತಿಯ ಪ್ರಾರಂಭದ ದಿನಗಳಿಂದಲೂ ಓದುಗನಾಗಿ ನಾನು globalkannadiga.com ವೆಬ್ ಸೈಟ್ ಪ್ರಾರಂಭಕ್ಕೆ ನನ್ನ ಹೃತ್ಪೂರ್ವಕ ಶುಭಕಾಮನೆಗಳನ್ನು ಹರಸುತ್ತಿದ್ದೇನೆ. ನಿಮ್ಮ ಈ ಹೊಸ ಪ್ರಯತ್ನ ಅನಿವಾಸಿ ಕನ್ನಡಿಗರ ಮುಖವಾಣಿಯಾಗಲೆಂದು ಕೋರುತ್ತಿದ್ದೇನೆ.

ಕೆ.ಆರ್.ಶ್ರೀನಾಥ್

ಅಟ್ಲಾಂಟ, ಯು ಎಸ್ ಎ

Hot this week

ಭಾರತದ ನೂತನ ಕಾನ್ಸುಲ್ ಜನರಲ್ ಡಾ.ವಿಷ್ಣುವರ್ಧನ ರೆಡ್ಡಿಗೆ ಕನ್ನಡಿಗರ ಕೂಟ ದುಬೈಯಿಂದ ಸ್ವಾಗತ

ದುಬೈ: ಯುಎಇಯ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲಿ ಒಂದಾಗಿರುವ ಕನ್ನಡಿಗರ ಕೂಟ, ದುಬೈ...

ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ರಕ್ತದಾನದಿಂದ ಮಾನವೀಯತೆಯ ಸಂದೇಶ ಸಾರಿದ ಕರ್ನಾಟಕ ಸಂಘ ಶಾರ್ಜಾ

ದುಬೈ: ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ಕರ್ನಾಟಕ ಸಂಘ ಶಾರ್ಜಾ ಮತ್ತು...

ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಸಲಾಲ(ಒಮಾನ್): ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್ ನಲ್ಲಿ ಬ್ಯಾರೀಸ್ ಕಮ್ಯುನಿಟಿ...

ಭಾರತದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಕರ್ನಾಟಕ ಸಂಘ ಖತರ್‌ನ ಅದ್ದೂರಿ ಭಾಗವಹಿಸುವಿಕೆ

ದೋಹಾ(ಖತರ್): ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತೀಯ ರಾಯಭಾರ ಕಚೇರಿ ದೋಹಾ...

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

Related Articles

Popular Categories