ಯುಕೆಮಹಿಳೆಯ ಮೇಲೆ ಹಲ್ಲೆ: ಭಾರತ ಮೂಲದ ವ್ಯಕ್ತಿಗೆ ಬ್ರಿಟನ್‌ನಲ್ಲಿ...

ಮಹಿಳೆಯ ಮೇಲೆ ಹಲ್ಲೆ: ಭಾರತ ಮೂಲದ ವ್ಯಕ್ತಿಗೆ ಬ್ರಿಟನ್‌ನಲ್ಲಿ ಜೈಲು ಶಿಕ್ಷೆ

ಲಂಡನ್: ಮಹಿಳೆಯೋರ್ವಳ ಮೇಲೆ ತೀವ್ರ ಹಲ್ಲೆ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಲಂಡನ್‌ನ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

40 ವರ್ಷದ ಮಹಿಳೆಗೆ ತೀವ್ರ ಹಲ್ಲೆ ನಡೆಸಿದ ಆರೋಪದಲ್ಲಿ ಜನವರಿ 29ರಂದು ಭಾರತ ಮೂಲದ ಫರ್ವೇಝ್ ಪಟೇಲ್‌ನನ್ನು ಮೆಟ್ರೊಪಾಲಿಟನ್ ಪೊಲೀಸರು ವೆಸ್ಟ್‌ಮಿನ್‌ಸ್ಟರ್‌ನಲ್ಲಿ ಬಂಧಿಸಿದ್ದರು. ಜನವರಿ 29ರಂದು ಫರ್ವೇಝ್ ಲೈಂಗಿಕ ಕಾರ್ಯಕರ್ತೆಯನ್ನು ಬುಕ್ ಮಾಡಿ ಆಕೆಯ ಮನೆಗೆ ಬಂದಿದ್ದ. ಬಳಿಕೆ ಆಕೆಯ ಮನೆಯಲ್ಲೇ ಮಹಿಳೆಗೆ ತೀವ್ರ ಹಲ್ಲೆ ನಡೆಸಿದ್ದ. ಹಲ್ಲೆಯ ಪರಿಣಾಮ ಮಹಿಳೆಯ ಗಂಭೀರವಾಗಿ ಗಾಯಗೊಂಡಿದ್ದಳು. ಮಹಿಳೆಯ ಆಕ್ರಂದನ ಕೇಳಿದ ನೆರೆಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಫರ್ವೇಝ್‌ನನ್ನು ಬಂಧಿಸಿದ್ದರು.

ಮಹಿಳೆ ತನ್ನ ಸ್ವಂತ ಮನೆಯಲ್ಲೇ ಅಬಲೆಯಾಗಿದ್ದಳು. ಆಕೆಯ ಮೇಲೆ ತೀವ್ರ ತರದ ಗಾಯಗಳಾಗಿದ್ದವು. ಸ್ಥಳೀಯರ ಶೀಘ್ರ ಸ್ಪಂದನೆಯಿಂದಾಗಿ ಆರೋಪಿಯ ಬಂಧನ ಸಾಧ್ಯವಾಯಿತು ಎಂದು ಪೊಲೀಸ್ ಕಾನ್‌ಸ್ಟೇಬಲ್ ಲೋಯ್ಡ್ ಲೀಚ್ ತಿಳಿಸಿದ್ದಾರೆ.

ಲೈಂಗಿಕ ಕಾರ್ಯಕರ್ತರು ಹೆಚ್ಚಿನ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಅವರ ಸುರಕ್ಷತೆಯನ್ನು ನಾವು ಖಾತರಿ ಪಡಿಸುತ್ತೇವೆ. ಇಂತಹ ಸಂದರ್ಭದಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ದೂರು ನೀಡಿ. ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಲೋಯ್ಡ್ ಲೀಚ್ ಹೇಳಿದ್ದಾರೆ.

ಪಟೇಲ್ ವಿರುದ್ಧ ಜನವರಿ 30ರಂದು ದೋಷಾರೋಪ ಸಲ್ಲಿಸಲಾಗಿತ್ತು. ಲಂಡನ್‌ನ ಸೌತ್‌ವಾರ್ಕ್ ಕ್ರೌನ್ ಕೋರ್ಟ್‌ನಲ್ಲಿ ಕಳೆದ 3 ವಾರಗಳಲ್ಲಿ ನಡೆದ ವಿಚಾರಣೆಯಲ್ಲಿ ಅಪರಾಧ ಸಾಬೀತಾಗಿದ್ದು, 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪೊಲೀಸ್ ಕಾನ್‌ಸ್ಟೇಬಲ್ ಪ್ರೀತ್ ಬ್ರಾರ್ ತಿಳಿಸಿದ್ದಾರೆ.

Hot this week

ಕನ್ನಡ ಸಂಘ ಬಹರೈನ್; ಸೆಪ್ಟೆಂಬರ್ 5ರಂದು ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ

ಬಹರೈನ್: ಬಹರೈನ್‌ನಲ್ಲಿರುವ ಕನ್ನಡ ಸಮುದಾಯವನ್ನು ಕನ್ನಡ ಸಂಘ ಬಹರೈನ್‌ನ ನೂತನ ಕಾರ್ಯಕಾರಿ...

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

Related Articles

Popular Categories