Top Newsಪ್ರಧಾನಿ ಮೋದಿಗೆ ಕುವೈತ್‌ನ ಅತ್ಯುನ್ನತ ಗೌರವ ʼದಿ ಆರ್ಡರ್‌...

ಪ್ರಧಾನಿ ಮೋದಿಗೆ ಕುವೈತ್‌ನ ಅತ್ಯುನ್ನತ ಗೌರವ ʼದಿ ಆರ್ಡರ್‌ ಆಫ್‌ ಮುಬಾರಕ್‌ ಅಲ್‌ ಕಬೀರ್‌ʼ ಪ್ರಶಸ್ತಿ

ಕುವೈತ್‌ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕುವೈತ್‌ ನ ಅತ್ಯುನ್ನತ ಗೌರವ ʼದಿ ಆರ್ಡರ್‌ ಆಫ್‌ ಮುಬಾರಕ್‌ ಅಲ್‌ ಅಲ್‌ ಕಬೀರ್‌ʼ ನೀಡಿ ಗೌರವಿಸಲಾಯಿತು.

ಕುವೈತ್‌ ನ ಅಮೀರ್‌ ಶೇಖ್‌ ಮಿಶಾಲ್‌ ಅಲ್‌ ಅಹ್ಮದ್‌ ಅಲ್‌ ಜಾಬಿರ್‌ ಅಲ್‌ ಸಬಾಹ್‌ ಅವರು ಈ ಗೌರವ ಪ್ರದಾನಿಸಿದರು. ಇದು ಪ್ರಧಾನಿ ಮೋದಿಯವರಿಗೆ ದೇಶವೊಂದು ನೀಡುತ್ತಿರುವ 20ನೇ ಅಂತಾರಾಷ್ಟ್ರೀಯ ಗೌರವವಾಗಿದೆ.

ಇದನ್ನು ದೇಶವೊಂದರ ನಾಯಕರು, ವಿದೇಶಿ ಸಾರ್ವಭೌಮರು ಮತ್ತು ವಿದೇಶಿ ರಾಜಮನೆತನದ ಸದಸ್ಯರಿಗೆ ಸ್ನೇಹದ ಸಂಕೇತವಾಗಿ ನೀಡಲಾಗುತ್ತದೆ. ಈ ಮೊದಲು ʼದಿ ಆರ್ಡರ್‌ ಆಫ್‌ ಮುಬಾರಕ್‌ ಅಲ್‌ ಕಬೀರ್‌ʼ ಗೌರವವನ್ನು ಬಿಲ್ ಕ್ಲಿಂಟನ್, ಪ್ರಿನ್ಸ್ ಚಾರ್ಲ್ಸ್ ಮತ್ತು ಜಾರ್ಜ್ ಬುಷ್‌ರಂತಹ ನಾಯಕರಿಗೆ ನೀಡಲಾಗಿತ್ತು.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಕುವೈತ್‌ನ ಅಮೀರ್, ಶೇಖ್ ಮಿಶಾಲ್‌ ಅಲ್‌ ಅಹ್ಮದ್‌ ಅಲ್‌ ಜಾಬಿರ್‌ ಅಲ್‌ ಸಬಾಹ್‌ ಅವರಿಂದ ʼಮುಬಾರಕ್ ಅಲ್-ಕಬೀರ್ʼ ಸ್ವೀಕರಿಸಿರುವುದು ನನಗೆ ಗೌರವವಾಗಿದೆ. ನಾನು ಈ ಗೌರವವನ್ನು ಭಾರತದ ಜನರಿಗೆ ಮತ್ತು ಭಾರತ ಮತ್ತು ಕುವೈತ್ ನಡುವಿನ ಸ್ನೇಹಕ್ಕೆ ಸಮರ್ಪಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Hot this week

ನಾಳೆ ಒಮಾನಿನಲ್ಲಿ ‘ಮಸ್ಕತ್ ಗಡಿನಾಡ ಉತ್ಸವ-2025’ ಸಾಂಸ್ಕೃತಿಕ ಕಾರ್ಯಕ್ರಮ; ಆಮಂತ್ರಣ ಪತ್ರಿಕೆ ಅನಾವರಣ

ಮಸ್ಕತ್: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್...

ತವರು ಪ್ರೇಮ ಮೆರೆದ ಹುಬ್ಬಳ್ಳಿ ಮೂಲದ ಕನ್ನಡಿಗ; ಲಂಡನಿನಲ್ಲಿ ತನ್ನ ಹೊಸ ‘ಟೆಸ್ಲಾ’ ಕಾರಿಗೆ ಧಾರವಾಡ ರಿಜಿಸ್ಟ್ರೇಷನ್ ಸಂಖ್ಯೆ!

ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ...

Veteran expat Abdulaziz Kushalnagar passes away in Riyadh

Riyadh: Abdulaziz Kushalnagar, a long-time Indian expatriate from Kushalnagar...

ನಾಳೆ ದುಬೈನಲ್ಲಿ ‘ಗ್ಲೋಬಲ್ ಮೀಡಿಯಾ ಐಕನ್ ಪ್ರಶಸ್ತಿ 2025’ ಪ್ರದಾನ; ಭಾಗವಹಿಸಲಿರುವ ಸಚಿವರು-ಸ್ಯಾಂಡಲ್‌ವುಡ್ ತಾರೆಯರ ದಂಡು

ದುಬೈ: ಕರ್ನಾಟಕ ಮೀಡಿಯಾ ಜರ್ನಲಿಸ್ಟ್‌ ಯೂನಿಯನ್‌(KMJU) ಆಶ್ರಯದಲ್ಲಿ 'ಗ್ಲೋಬಲ್ ಮೀಡಿಯಾ ಐಕನ್...

Related Articles

Popular Categories