ಯುಎಇದುಬೈಯಲ್ಲಿ 'ಭುವನಂ ಗಗನಂ' ಚಿತ್ರದ ಪ್ರೀಮಿಯರ್ ಪ್ರದರ್ಶನ

ದುಬೈಯಲ್ಲಿ ‘ಭುವನಂ ಗಗನಂ’ ಚಿತ್ರದ ಪ್ರೀಮಿಯರ್ ಪ್ರದರ್ಶನ

ದುಬೈ: ದುಬೈಯ ಕನ್ನಡಿಗರು ಒಂದು ಒಳ್ಳೆಯ ಚಿತ್ರವನ್ನು ನೋಡಿ, ಚಿತ್ರವು ಕರುನಾಡಿನಲ್ಲಿ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಶುಭವನ್ನು ಹಾರೈಸಿ ಚಿತ್ರ ತಂಡಕ್ಕೆ ಬೆನ್ನು ತಟ್ಟಿ ಪೋತ್ಸಾಹಿಸಿದ ಘಟನೆ ಶನಿವಾರ ರವಿವಾರ ನಡೆಯಿತು.

ದುಬೈಯ ಅಲ್ ಘುರೈರ್ ಮಾಲ್ ನಲ್ಲಿ ಪೃಥ್ವಿ ಅಂಬಾರ್ ಮತ್ತು ಪ್ರಮೋದ್ ಪ್ರಮುಖ ಪಾತ್ರಗಳಲ್ಲಿ ನಟನೆಯ “ಭುವನಂ ಗಗನಂ” ಚಿತ್ರದ ಪ್ರೀಮಿಯರ್ ಪ್ರದರ್ಶನ ಫೆ.1 ಮತ್ತು 2ರಂದು ಯಶಸ್ವಿ ಪ್ರದರ್ಶನ ಕಂಡಿತ್ತು. ದುಬೈಯ ಹಲವಾರು ಮಂದಿ ಈ ಚಿತ್ರವನ್ನು ನೋಡಿ, ಚಿತ್ರ ತಂಡಕ್ಕೆ ಬೆನ್ನು ತಟ್ಟಿ ಪೋತ್ಸಾಹಿಸಿದಲ್ಲದೆ ಮತ್ತೊಮ್ಮೆ ಈ ಚಿತ್ರವನ್ನು ನೋಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

‘ಭುವನಂ ಗಗನಂ’ ಒಂದು ಸುಂದರ ಪ್ರೇಮ ಕಹಾನಿ ತುಂಬಿರುವ‌ ಚಿತ್ರದಲ್ಲಿ ಕಾಲೇಜು ಜೀವನ, ತಂದೆ ತಾಯಿಯ ವಾತ್ಸಲ್ಯ, ಗಂಡ ಹೆಂಡತಿ ಪ್ರೀತಿ, ಸ್ವಲ್ಪ ನಗು, ಸ್ವಲ್ಪ ಅಳು ಎಲ್ಲವೂ ಅಡಗಿರುವ ಒಂದು ಸುಂದರ ಕಥೆಯನ್ನು ಒಳಗೊಂಡ ಚಿತ್ರವಾಗಿದೆ.

ರವಿವಾರ ಅಲ್ ಘುರೈರ್ ಚಿತ್ರ ಮಂದಿರದಲ್ಲಿ ಸರಳ ರೀತಿಯಲ್ಲಿ ನಡೆದ ಚಿತ್ರದ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕರು, ದುಬೈಯ ಯಶಸ್ವಿ ಉದ್ಯಮಿ ಹರೀಶ್ ಶೇರಿಗಾರ್ ಪ್ರೀಮಿಯರ್ ಪ್ರದರ್ಶನವನ್ನು ಉದ್ಘಾಟಿಸಿ ಚಿತ್ರಕ್ಕೆ ಶುಭವನ್ನು ಹಾರೈಸಿದರು.

ಒಕ್ಕಲಿಗರ ಸಂಘ ಯುಎಇಯ ಅಧ್ಯಕ್ಷರಾದ ಕಿರಣ್ ಗೌಡ, ಮಾರ್ಗದೀಪ ಸಮಾಜದ ಸುಗಂದರಾಜ್ ಬೇಕಲ್ ಉಪಸ್ಥಿತರಿದ್ದರು. ಚಿತ್ರದ ನಾಯಕ ನಟರಾದ ಪೃಥ್ವಿ ಅಂಬಾರ್, ಪ್ರಮೋದ್, ಚಿತ್ರದ ನಿರ್ಮಾಪಕರಾದ ಎಂ.ಮುನೇಗೌಡ, ಚಿತ್ರದ ನಿರ್ದೇಶಕ ಗಿರೀಶ್ ಮೂಲಿಮನಿ, ಮಹೇಶ್ ಗೌಡ ಉಪಸ್ಥಿತರಿದ್ದು, ಯುಎಇಯ ಚಿತ್ರ ಪ್ರೇಮಿಗಳೊಂದಿಗೆ ಕುಳಿತು ಚಿತ್ರ ವೀಕ್ಷಿಸಿದರು. OMG ಸಂಸ್ಥೆಯ ಸೆಂತಿಲ್ ಬೆಂಗಳೂರು ತಂಡವು ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಸಾಥ್ ನೀಡಿತ್ತು. ಸಂತೋಷ್ ಶೆಟ್ಟಿ ಪೊಳಲಿಯವರು ಸರಳ ರೀತಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ನಿರೂಪಿಸಿದರು.

ಫೆಬ್ರವರಿ 14 ರಂದು ಕರ್ನಾಟಕ ಹಾಗೂ ಗಲ್ಫ್ ದೇಶಗಳಲ್ಲಿ ಏಕಕಾಲದಲ್ಲಿ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರದ ತಾರಾಗಣದಲ್ಲಿ ನಾಯಕಿಯರಾಗಿ ರೆಸೆಲ್ ಡೇವಿಡ್, ಅಶ್ವತಿ, ಅಚ್ಯುತ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತೂಮಿನಾಡು ಹಾಗೂ ಕರುನಾಡಿನ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

Hot this week

ದುಬೈ; ಅ.11ರಂದು ‘ಗಮ್ಮತ್ ಕಲಾವಿದೆರ್ ದುಬೈ’ ತಂಡದಿಂದ ‘ಪೋನಗ ಕೊನೊಪರಾ..?’ ನಾಟಕ

ದುಬೈ: ಯುಎಇಯಲ್ಲಿರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತಾ...

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

Related Articles

Popular Categories