ಯುಎಇದುಬೈ: 'ಪ್ರವಾಸಿ ನಾಖುದಾ ಶಿರೂರು' ಸಂಘಟನೆಯಿಂದ ದುಬೈಯ ಅಲ್...

ದುಬೈ: ‘ಪ್ರವಾಸಿ ನಾಖುದಾ ಶಿರೂರು’ ಸಂಘಟನೆಯಿಂದ ದುಬೈಯ ಅಲ್ ರಶೀದಿಯಾ ಪಾರ್ಕ್‌ನಲ್ಲಿ ‘ರಮಝಾನ್ ಕುಟುಂಬ ಸ್ನೇಹ ಸಮ್ಮಿಲನ ಕೂಟ’

ದುಬೈ: ಉಡುಪಿ ಜಿಲ್ಲೆಯ ಶಿರೂರು ಮೂಲದ ನಾಖುದಾ ಸಮುದಾಯದವರ “ಪ್ರವಾಸಿ ನಾಖುದಾ ಶಿರೂರು” ಸಂಘಟನೆಯು ಪ್ರಥಮ ವಾರ್ಷಿಕೋತ್ಸವ ಹಾಗೂ ಮರಹಬಾ ರಮಝಾನ್ ಕುಟುಂಬ ಸ್ನೇಹ ಸಮ್ಮಿಲನ ಕೂಟವನ್ನು ರವಿವಾರ ದುಬೈಯ ಅಲ್ ರಶೀದಿಯಾ ಪಾರ್ಕ್‌ನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವು ನಾಖುದಾ ಸಾಂಸ್ಕೃತಿಕ ಪರಂಪರೆಯನ್ನು ಮರುಕಳಿಸುವಂತೆ ಮಾಡಿತು. ಸ್ನೇಹ ಸಮ್ಮಿಲನ ಕೂಟದಲ್ಲಿ ನಾಖುದಾ ಸಮುದಾಯದ ಸಾಂಸ್ಕೃತಿಕ, ಮನರಂಜನೆ, ವಿವಿಧ ಕ್ರೀಡೆಗಳು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸರಿಸುಮಾರು 200 ನಾಖುದಾ ಸಮುದಾಯದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಾಂಸ್ಕೃತಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಪುರುಷರಿಗಾಗಿ, ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ಕ್ರೀಡೆ ಮತ್ತು ಮನೋರಂಜನೆ, ಮೋಜಿನ ಚಟುವಟಿಕೆಗಳಿಂದ ತುಂಬಿತ್ತು. ಎಲ್ಲಾ ವಿಜೇತರರಿಗೆ ಮತ್ತು ಭಾಗವಹಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು ಮತ್ತು ಮಕ್ಕಳಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಯಿತು.

ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್’ನ ನಾಯಕರು ಮತ್ತು ಶಿರೂರು ಅಸೋಸಿಯೇಷನ್ ನಾಯಕರು ಹಾಗು ಮುರ್ಡೇಶ್ವರ ಮತ್ತು ತೆಂಗಿನಗುಂಡಿ ಜಮಾಅತಿನ ನಾಯಕರು ಭಾಗವಹಿಸಿದ್ದರು. ಅತಿಥಿಗಣ್ಯರು ಪ್ರವಾಸಿ ನಾಖುದಾ ಸಮುದಾಯದ ಕಾರ್ಯಕ್ರಮದ ಕಾರ್ಯ ವೈಖರಿ ಮತ್ತು ಶಿಸ್ತುನ್ನು ಶ್ಲಾಘಿಸಿದರು.

ಭಾರತದ 78ನೇ ಸ್ವಾತಂತ್ರ್ಯ ದಿವಸ ಆಚರಣೆದಂದು ” Solidarity is in our blood – ಒಗ್ಗಟ್ಟು ನಮ್ಮ ರಕ್ತದಲ್ಲಿದೆ” ಎಂದು ಪ್ರಮಾಣ ವಚನ ಸ್ವೀಕರಿಸಿದವರು ಹಾಗು ಕರ್ನಾಟಕ ರಾಜ್ಯೋತ್ಸವದಂದು ರಕ್ತದಾನ ಮಾಡಿ ಮಾನವೀಯತೆ ಮೆರೆದವರಿಗೆ ಕಾರ್ಯಕ್ರಮದಲ್ಲಿ ಅತಿಥಿಗಳಿಂದ ಸನ್ಮಾನಿಸಲಾಯಿತು.

ನಾಖುದಾ ಸಮುದಾಯದ ಸದಸ್ಯರು ಸಾಮಾಜಿಕ-ಕಲ್ಯಾಣ, ಸಂಪರ್ಕಗಳನ್ನು ಬೆಳೆಸುವ ಮತ್ತು ಸಹೋದರ ಸಂಬಂಧಗಳನ್ನು ಬಲಪಡಿಸುವ ಆಲೋಚನೆಗಳು ಚರ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಸಮುದಾಯದ ಎಲ್ಲಾ ಸದಸ್ಯರು ವಿಶೇಷವಾಗಿ ಹಿರಿಯ ಸದಸ್ಯರು ತಮ್ಮ ಸಂತೋಷ ಭಾವನೆಗಳನ್ನು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

Hot this week

DKSC ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಅನ್ವರ್ ಸಾಹೇಬ್ ಕುಂಜಾಲ್ ಆಯ್ಕೆ

ಕುವೈತ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC), ಇದರ ಕುವೈತ್ ರಾಷ್ಟ್ರೀಯ...

ಕರ್ನಾಟಕ ಸಂಘ ಖತರ್‌ನಿಂದ ರಮಝಾನ್‌ ಸೇವಾ ಕಾರ್ಯ: ಇಫ್ತಾರ್ ಆಹಾರ ಕಿಟ್‌ಗಳ ವಿತರಣೆ

ಕರ್ನಾಟಕ ಸಂಘ ಖತರ್‌ (KSQ), ರಮಝಾನ್‌ ಮಾಸದ ಪವಿತ್ರ ಚಟುವಟಿಕೆಗಳ ಭಾಗವಾಗಿ...

ಅಟ್ಲಾಂಟ ಒಕ್ಕಲಿಗರ ಕೂಟದಿಂದ ಪ್ರಥಮ ಸಮಾವೇಶ

ಕೆ. ಆರ್. ಶ್ರೀನಾಥ್, ಅಟ್ಲಾಂಟ ಅಟ್ಲಾಂಟ: ಫೆಬ್ರವರಿ 22ರ ರವಿವಾರದಂದು ಅಟ್ಲಾಂಟದಲ್ಲಿ ನೆಲಸಿರುವ...

AIM India Forum Delegation Meets Indian Ambassador to UAE

Abu Dhabi: A delegation from AIM India Forum met...

Konkani movie ‘My Dear Father’ thrills audience in Kuwait with double premiere shows

Kuwait: The Konkani film My Dear Father was screened...

Related Articles

Popular Categories