ಸೌದಿ ಅರೇಬಿಯಾಸೌದಿ ಅರೇಬಿಯಾದಲ್ಲಿ ಪಡುಬಿದ್ರಿಯ 'ಮಡುಮಾನ್ ಎನ್‌ಆರ್‌ಐ ಗ್ರೂಪ್'ನಿಂದ ರಕ್ತದಾನ...

ಸೌದಿ ಅರೇಬಿಯಾದಲ್ಲಿ ಪಡುಬಿದ್ರಿಯ ‘ಮಡುಮಾನ್ ಎನ್‌ಆರ್‌ಐ ಗ್ರೂಪ್’ನಿಂದ ರಕ್ತದಾನ ಶಿಬಿರ

ಜುಬೈಲ್‌: ಪಡುಬಿದ್ರಿಯ ಹೆಮ್ಮೆಯ ಕುಟುಂಬ ‘ಮಟ್ಟು ಮಡುಮಾನ್ ಎನ್‌ಆರ್‌ಐ ಗ್ರೂಪ್’ ಸೌದಿ ಅರೇಬಿಯಾದ ಜುಬೈಲ್‌ನ ಅಲ್ ಮನಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತ್ತು.

ಮಡುಮಾನ್ ಕುಟುಂಬದ 100ಕ್ಕೂ ಹೆಚ್ಚು ಸದಸ್ಯರು ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಸದ್ಭಾವನೆಯ ಹಾದಿಯಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಈ ರಕ್ತದಾನ ಶಿಬಿರದಲ್ಲಿ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಅನೇಕ ಭಾರತೀಯರು ಉತ್ಸಾಹದಿಂದ ಭಾಗವಹಿಸಿ, ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರಕ್ತದಾನ ಮಾಡಿದರು.

ಈ ಕಾರ್ಯಕ್ರಮದ ಆಯೋಜಕರೂ ಹಾಗೂ ಮಡುಮಾನ್ ಎನ್‌ಆರ್‌ಐ ಗ್ರೂಪ್‌ನ ಪ್ರತಿನಿಧಿಯಾದ ನೌಫಲ್ ಮುಲ್ಕಿ ಈ ಸಂದರ್ಭ ಮಾತನಾಡಿ, ನಾವು ಕುಟುಂಬವಾಗಿ ಎಂದಿಗೂ ಒಟ್ಟಾಗಿ ನಿಂತು, ಮಹತ್ವಪೂರ್ಣ ಕಾರ್ಯಗಳಿಗೆ ನೆರವು ನೀಡುತ್ತೇವೆ. ರಕ್ತದಾನವು ನಮಗೆ ನೀಡಬಹುದಾದ ಅತ್ಯಂತ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದೆ, ಮತ್ತು ನಾವು ನಮ್ಮ ಸಹಾಯ, ಸಹಕಾರವನ್ನು ಮುಂದುವರಿಸುತ್ತಿದ್ದೇವೆ ಎಂದರು.

ಈ ಶಿಬಿರವನ್ನು ಅಲ್ ಮನಾ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಆಸ್ಪತ್ರೆಯ ವೈದ್ಯರು ಈ ಕಾರ್ಯಕ್ರಮವನ್ನು ಶ್ಲಾಘಿಸಿ, ‘ರಕ್ತದಾನವು ಹಲವರ ಪ್ರಾಣ ಉಳಿಸಬಲ್ಲ ದೊಡ್ಡ ಸೇವೆ. ಮಡುಮಾನ್ ಗ್ರೂಪ್ ಈ ಹಿತಕಾರ್ಯವನ್ನು ಮಾಡಿರುವುದು ಶ್ಲಾಘನೀಯ’ ಎಂದರು.

ಈ ಸೇವಾ ಕಾರ್ಯದ ಯಶಸ್ಸು ಮಡುಮಾನ್ ಎನ್‌ಆರ್‌ಐ ಗ್ರೂಪ್‌ನ ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದ್ದು, ಮುಂದಿನ ದಿನಗಳಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಪಡುಬಿದ್ರಿಯಲ್ಲಿರುವ ಕುಟುಂಬದ ಹಿರಿಯರು ಮತ್ತು ಸದಸ್ಯರು ಈ ಮಹತ್ವದ ಸೇವೆಯನ್ನು ಶ್ಲಾಘಿಸಿ, ‘ನಮ್ಮ ಕುಟುಂಬದವರು ಈ ರೀತಿಯ ಸಮಾಜ ಸೇವೆಯಲ್ಲಿ ತೊಡಗಿರುವುದು ನಮಗೆ ಹೆಮ್ಮೆಯ ವಿಚಾರ’ ಎಂದಿದ್ದಾರೆ.

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories