ಯುಎಸ್‌ಎನಾವಿಕ ವಿಶ್ವ ಕನ್ನಡ ಸಮಾವೇಶಕ್ಕೆ ಮೆರಗು ತಂದ ಅಟ್ಲಾಂಟ...

ನಾವಿಕ ವಿಶ್ವ ಕನ್ನಡ ಸಮಾವೇಶಕ್ಕೆ ಮೆರಗು ತಂದ ಅಟ್ಲಾಂಟ ಕನ್ನಡಿಗರು; ಕನ್ನಡಿಗರ ಮೆಚ್ಚುಗೆಗೆ ಪಾತ್ರವಾದ ‘ಶಂಭೋ, ಶಿವ ಶಂಭೋ’ ನಾಟಕ ಪ್ರದರ್ಶನ

ಕೆ.ಆರ್.ಶ್ರೀನಾಥ್, ಅಟ್ಲಾಂಟ

ಅಮೆರಿಕದ ಫ್ಲೋರಿಡಾ ರಾಜ್ಯದ ಟ್ಯಾಂಪಾ ನಗರದಲ್ಲಿ ನಡೆಯುತ್ತಿರುವ ‘8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025’ರಲ್ಲಿ ಅಟ್ಲಾಂಟದ ನೃಪತುಂಗ ಕನ್ನಡ ಕೂಟದ ಸದಸ್ಯರು ಶನಿವಾರದಂದು “ಶಂಭೋ, ಶಿವ ಶಂಭೋ” ನಾಟಕ ಪ್ರದರ್ಶನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕಿಕ್ಕಿರಿದು ನೆರೆದಿದ್ದ ಸಭಾಂಗಣದಲ್ಲಿ ಅಟ್ಲಾಂಟ ಕನ್ನಡಿಗರ ಈ ಹಾಸ್ಯ ನಾಟಕವು ಬೃಹತ್ ಕರತಾಡನದೊಂದಿಗೆ ಸಭಿಕರಿಂದ ಬಹಳ ಮೆಚ್ಚುಗೆ ಪಡೆಯಿತು.

ಕಾರ್ಲೊ ಗೋಲ್ಡೊನಿಯವರ ಇಟಾಲಿಯನ್ ನಾಟಕ “ದಿ ಸರ್ವೆಂಟ್ ಆಫ್ ಟು ಮಾಸ್ಟರ್ಸ್” ಮೂಲವನ್ನು ಆಧರಿಸಿದ ಈ ನಾಟಕವನ್ನು ಖ್ಯಾತ ರಂಗಕರ್ಮಿ, ಚಲನಚಿತ್ರ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಬಿ.ಸುರೇಶ್ ಅವರು ನಿರ್ದೇಶಿಸಿದ್ದರು.

ಅಟ್ಲಾಂಟ ಕನ್ನಡಿಗರ ಪ್ರೀತಿ, ಸ್ನೇಹದ ಒತ್ತಾಸೆಗೆ ಮಣಿದು ಕೆಲವು ದಿನ ಇಲ್ಲಿಯೇ ಉಳಿದು ಈ ನಾಟಕವನ್ನು ಬಿ. ಸುರೇಶ್ ಅವರು ನಿರ್ದೇಶಿಸಿದ್ದರು. ಒಂದು ದಿನ ಬಿಡುವು ಮಾಡಿಕೊಂಡು ಅಟ್ಲಾಂಟ ಕನ್ನಡಿಗರಿಗೆ ಚಲನಚಿತ್ರದ ಕಥಾ ರಚನೆಯಿಂದ ಇತರ ವಿವಿಧ ಆಯಾಮಗಳನ್ನು ಒಂದು ಶಿಬಿರದಲ್ಲಿ ವಿವರಿಸಿದರು.

ಕನ್ನಡ ಚಿತ್ರ ನಟ ಶ್ರೀನಾಥ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ರಮ್ಯಾ, ಸಿಹಿ ಕಹಿ ಚಂದ್ರು ಹಾಗೂ ಇನ್ನಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಂದಿನ ನಾವಿಕ-2027 ವಿಶ್ವ ಕನ್ನಡ ಸಮಾವೇಶವನ್ನು ಅಟ್ಲಾಂಟ ನಗರದಲ್ಲಿ 2027ರಲ್ಲಿ ವಿಜೃಂಭಣೆಯಿಂದ ಆಯೋಜಿಸಲು ತೀರ್ಮಾನಿಸಲಾಗಿದೆ. ನೃಪತುಂಗ ಕನ್ನಡ ಕೂಟವು ಈ ಸಮ್ಮೇಳನಕ್ಕೆ ಈಗಾಗಲೆ ಬೃಹತ್ ಸಭಾಂಗಣವನ್ನು ಬುಕ್ ಮಾಡಿ ತಯಾರಿ ನಡೆಸಿದೆ.

Hot this week

ದುಬೈನಲ್ಲಿ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ವತಿಯಿಂದ ರಕ್ತದಾನ ಶಿಬಿರ; 194 ಮಂದಿಯಿಂದ ರಕ್ತದಾನ

ದುಬೈ: ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್...

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

Related Articles

Popular Categories