ಫ್ಲೋರಿಡಾ: ಆಲ್ ಅಮೇರಿಕ ತುಳು ಅಸೋಸಿಯೇಷನ್(AATA) ನಡೆಸುವ ಮೂರನೇ ವರ್ಷದ ಅಂತಾರಾಷ್ಟ್ರೀಯ ಯುವ ರಸಪ್ರಶ್ನೆ ‘AATA BEE ‘ ಸ್ಪರ್ಧೆಯು ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು.

ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಾದ್ಯಂತ 68 ಶಾಲೆಗಳನ್ನು ಪ್ರತಿನಿಧಿಸುವ ತುಳುವ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಗಮನ ಸೆಳೆದರು. ವಿಜ್ಞಾನ, ಗಣಿತ, ಇತಿಹಾಸ, ಕ್ರೀಡೆ ಮತ್ತು ಸಾಮಾನ್ಯ ಜ್ಞಾನದ ಕೌಶಲ್ಯಗಳನ್ನು ಪರೀಕ್ಷಿಸಲಾಯಿತು.
ಆಲ್ ಅಮೇರಿಕ ತುಳು ಅಸೋಸಿಯೇಷನ್ (AATA) ಆಯೋಜಿಸಿರುವ ಈ ರಸಪ್ರಶ್ನೆಯು ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಜಾಗತಿಕವಾಗಿ ಸಂರಕ್ಷಿಸುವ ಮತ್ತು ಉತ್ತೇಜಿಸುವ ಜೊತೆಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದ ತುಳುನಾಡು ಮೂಲದ ಜನರನ್ನು ಒಂದುಗೂಡಿಸುತ್ತದೆ. ಈ ಕಾರ್ಯಕ್ರಮವು ತುಳುವ ಮಕ್ಕಳ ಬೌದ್ಧಿಕ ವಿಕಸನ ಮತ್ತು ಸಂಪರ್ಕಗಳನ್ನು ಬೆಳೆಸಲು ಒಂದು ವೇದಿಕೆಯಾಗಿದೆ.

ಕಾರ್ಯಕ್ರಮವನ್ನು AATAದ ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್ ಉದ್ಘಾಟಿಸಿದರು. ಇದು ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮವಾಗಿದ್ದು, ಭಾಗವಹಿಸಿರುವ ಮಕ್ಕಳ ಉತ್ಸಾಹವನ್ನು ಶ್ಲಾಘಿಸಿದರು. AATA ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿಯಲ್ಲಿ, ಅತ್ಯುತ್ತಮ ರಸಪ್ರಶ್ನೆ ವಿಜೇತರನ್ನು ನಗದು ಪ್ರಶಸ್ತಿಗಳೊಂದಿಗೆ ಗುರುತಿಸಲಾಗುತ್ತದೆ. ಪ್ರೌಢಶಾಲಾ ವಿಭಾಗದ ವಿಜೇತರಿಗೆ $1,000, ಮಾಧ್ಯಮಿಕ ಶಾಲಾ ವಿಭಾಗದ ವಿಜೇತರಿಗೆ $500 ಮತ್ತು ಪ್ರಾಥಮಿಕ ಶಾಲಾ ವಿಭಾಗದ ವಿಜೇತರಿಗೆ $250, ಜೊತೆಗೆ ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು.
ಹೈಸ್ಕೂಲ್ ವಿಭಾಗದಲ್ಲಿ ಕ್ಯಾಲಿಫೋರ್ನಿಯಾದ ಸಿಲಿಕನ್ ವ್ಯಾಲಿ ಇಂಟರ್ನ್ಯಾಷನಲ್ ಸ್ಕೂಲ್ ನ ರಿಯಾನ್ ಶೆಟ್ಟಿ ಪ್ರಥಮ ಸ್ಥಾನ ಮತ್ತು ವರ್ಜಿನಿಯಾದ ರೊನೊಕ್ ನ ಕೇವ್ ಸ್ಪ್ರಿಂಗ್ ಹೈಸ್ಕೂಲ್ ನ ನಿಖೀಲ್ ಶೇರಿಗಾರ್ ದ್ವಿತೀಯಾ ಸ್ಥಾನ ಪಡೆದರು. ಹೈಸ್ಕೂಲ್ ವಿಭಾಗದಲ್ಲಿ ಉನ್ನತ ಹತ್ತು ರಾಂಕ್ ಪಡೆದ ವಿದ್ಯಾರ್ಥಿಗಳು-ತನಿಷ್ ಶೆಟ್ಟಿ, ಕ್ಲೇರ್ ಡಿಸೋಜಾ, ಕೃತಿಕ್ ಪುತ್ತೂರು, ವಂಶ್ ಶೆಟ್ಟಿ, ಅನ್ನಾಬೆಲ್ ಡಿಸೋಜಾ, ನೀಷ್ಮ ಶೆಟ್ಟಿ, ನೀಲ್ ಶೆಟ್ಟಿ, ಆತ್ಮಾನ್ ಕೋರ್ಸೆ, ಸಾನ್ವಿ ಅಸೈಗೋಳಿ ಮತ್ತು ನೀಲ್ ಶೆಟ್ಟಿ.

ಮಿಡ್ಲ್ ಸ್ಕೂಲ್ ವಿಭಾಗದ ಪ್ರಥಮ ಪ್ರಶಸ್ತಿಯನ್ನು ನ್ಯೂಜೆರ್ಸಿಯ WT ಕ್ಲಾರ್ಕ್ ಮಿಡ್ಲ್ ಸ್ಕೂಲ್ ನ ಹೃಧಾನ್ ಶೆಟ್ಟಿ, ದ್ವಿತೀಯ ಸ್ಥಾನವನ್ನು ಮಸ್ಸಾಚುಸ್ಸೆಟ್ಸ್ ನ ಗ್ರಾಫ್ಟನ್ ಮಿಡ್ಲ್ ಸ್ಕೂಲ್ ನ ಹೃಧಾನ್ ಗೌತಮ್ ತಮ್ಮದಾಗಿಸಿಕೊಂಡರು. ಈ ವಿಭಾಗದಲ್ಲಿ ಉನ್ನತ ಹತ್ತು ರಾಂಕ್ ಪಡೆದ ವಿದ್ಯಾರ್ಥಿಗಳು- ಸಿಡ್ ಲಾಹಾ, ಆರ್ನವ್ ಶೆಟ್ಟಿ, ವಿಹಾನ್ ಆಳ್ವ, ಡಿಲನ್ ರೇಗೊ, ನೀಲ್ ಪೂಜಾರಿ, ಇಶಾನ್ ಶೆಟ್ಟಿ, ಆನ್ಯಾ ಜೈನ್, ಅನ್ಸಿಕಾ ಶೇರಿಗಾರ್, ನೇತನ್ ಡಿಸೋಜಾ ಮತ್ತು ರಿಶಾನ್ ಶೆಟ್ಟಿ.
ಎಲಿಮೆಂಟರಿ ಸ್ಕೂಲ್ ವಿಭಾಗದಲ್ಲಿ ನಾರ್ಥ್ ಕೆರೊಲಿನಾದ ಟ್ರಯಾಂಗಲ್ ಮ್ಯಾಥ್ ಅಂಡ್ ಸೈನ್ಸ್ ಅಕಾಡೆಮಿಯ ಸಿದ್ಧಾರ್ಥ್ ರೈ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನವನ್ನು ನ್ಯೂಜೆರ್ಸಿಯ ಚೆಸ್ಟರ್ M ಸ್ಟೆಫೆನ್ಸ್ ಎಲಿಮೆಂಟರಿ ಸ್ಕೂಲ್ ನ ಹೀರಲ್ ಮೂಲ್ಯ ತಮ್ಮದಾಗಿಸಿಕೊಂಡರು. ಉನ್ನತ ಹತ್ತು ರಾಂಕ್ ಪಡೆದವರು- ಶೀವತ್ಸ ಕುಮಾರ್, ತನಯ್ ಸೋಮ್, ಅನುಷ್ ಕಿರಾಣಿ, ವಿಯಾನ್ ಶೆಟ್ಟಿ, ಸಿದ್ಧಾರ್ಥ್ ರೈ, ವಿಹಾನ್ ಶೆಟ್ಟಿ, ಅರ್ನವ್ ಅಡಿಗ, ಇನಿಕಾ ಆಚಾರ್ಯ, ಹೃಯಾನ್ ಶೆಟ್ಟಿ ಮತ್ತು ಅನಿಷ್ಕ ಶೇರಿಗಾರ್.
ಈ ಕಾರ್ಯಕ್ರಮದ ಬಹುಮಾನಗಳನ್ನು ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲಿ ವಿಶ್ವಾಸಾರ್ಹ ಹೆಸರಾದ ಉಡುಪಿಯ ಗ್ರಾಸ್ಲ್ಯಾಂಡ್ಸ್ ಡೆವಲಪರ್ಸ್ ಪ್ರಾಯೋಜಿಸಿದ್ದಾರೆ. ಸುಸ್ಥಿರ ಮತ್ತು ಉತ್ತಮ ಗುಣಮಟ್ಟದ ವಸತಿ ಮತ್ತು ವಾಣಿಜ್ಯ ಅಭಿವೃದ್ಧಿ ಯೋಜನೆಗಳಿಗೆ ಹೆಸರುವಾಸಿಯಾದ ವಿನೀತ್ ಅಮೀನ್ ಅವರ ಈ ಸಂಸ್ಥೆಯ ಬೆಂಬಲ ಮತ್ತು ಕೊಡುಗೆಗೆ AATA ಕೃತಜ್ಞತೆಯನ್ನು ವ್ಯಕ್ತಪಡಿಸಿತು.
ರಸಪ್ರಶ್ನೆಯನ್ನು ಸುರಕ್ಷಿತ, ಸುಲಭವಾದ ಅಂತರ್ಜಾಲ ವೇದಿಕೆಯಲ್ಲಿ ನಡೆಸಲಾಯಿತು. ರಸಪ್ರಶ್ನೆ ಸಂಘಟನಾ ಸಮಿತಿಯು ರಸಪ್ರಶ್ನೆಯನ್ನು ವ್ಯವಸ್ಥಿತವಾಗಿ ಯಾವುದೇ ಸಮಸ್ಯೆಗಳು ಅಥವಾ ತಾಂತ್ರಿಕ ದೋಷವಿಲ್ಲದೆ ಅತ್ಯುತ್ತಮವಾಗಿ ನಡೆಸಿತು. ವರ್ಜೀನಿಯಾದ AATA ನಿರ್ದೇಶಕರಾದ ಡಾ. ರತ್ನಾಕರ್ ಶೇರಿಗಾರ್ ಅವರ ಮುಖಂಡತ್ವದ ಸಮಿತಿಯು, ಡಾ. ರೋಷನ್ ಪಾಯಸ್ – AATA ಕೆಂಟಕಿಯಾ ನಿರ್ದೇಶಕರು, ರಂಜನಿ ಅಸೈಗೋಳಿ – ನಾರ್ತ್ ಕರೋಲಿನಾದ AATA ಜಂಟಿ ಕಾರ್ಯದರ್ಶಿ, ಟೊರೊಂಟೊ ಕೆನಡಾದ ಸಿಂಧೂ ಕುಲಾಲ್, ಕ್ಯಾಲಿಫೋರ್ನಿಯಾ AATA ಅಂಬಾಸೆಡರ್ ಡಾ. ಜಗದೀಶ್ ಕುಮಾರ್ ಮತ್ತು ಬಾಸ್ಟನ್ ನ AATA ದ ನಿರ್ದೇಶಕರಾದ ಪ್ರಸನ್ನ ಲಕ್ಷ್ಮಣ್ ಇವರನ್ನು ಒಳಗೊಂಡಿದೆ.
ಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೇರಿಗಾರ್ (ಬೋಸ್ಟನ್), ಉಪಾಧ್ಯಕ್ಷರುಗಳಾದ ಶಿರೀಶ್ ಶೆಟ್ಟಿ (ಅಟ್ಲಾಂಟಾ) ಮತ್ತು ಸುದರ್ಶನ್ ಶೆಟ್ಟಿ (ಟೊರೊಂಟೊ ಕೆನಡಾ), ಪ್ರಧಾನ ಕಾರ್ಯದರ್ಶಿ ಪೂಜಾ ಶೆಟ್ಟಿ (ಬೋಸ್ಟನ್), ಖಜಾಂಚಿ ಸಂತೋಷ್ ಶೆಟ್ಟಿ (ಅಟ್ಲಾಂಟಾ) ಜಂಟಿ ಖಜಾಂಚಿ ಸುದೀಪ್ ಹೆಬ್ಬಾರ್ (ಅಟ್ಲಾಂಟಾ) ಮತ್ತು ನಿರ್ದೇಶಕ ಮಂಡಳಿಯ ಅಧ್ಯಕ್ಷರಾದ ಡಾ. ಮೋಹನಚಂದ್ರ ಕೆ. ಪಿ. (ಕ್ಯಾಲಿಫೋರ್ನಿಯಾ) ಹಾಗೂ ಸಮಿತಿಯ ಮಾರ್ಗದರ್ಶನದೊಂದಿಗೆ ನಡೆಯಿತು.
AATA ಒಂದು ಲಾಭರಹಿತ ದತ್ತಿ ಸಂಸ್ಥೆಯಾಗಿದ್ದು, ಪ್ರತಿ ಡಿಸೆಂಬರ್ ನಲ್ಲಿ AATA BEE ಅಂತಾರಾಷ್ಟ್ರೀಯ ರಸಪ್ರಶ್ನೆಯನ್ನು ಆಯೋಜಿಸುತ್ತಿದೆ. ಇದು ತುಳುವ ಯುವಕರಲ್ಲಿ ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುವ ಧ್ಯೇಯವನ್ನು ಹೊಂದಿದೆ.
ಅಖಿಲ ಅಮೇರಿಕಾ ತುಳುವರ ಅಂಗಣ (AATA) ಎಲ್ಲಾ ವಿಜೇತರಿಗೆ, ಭಾಗವಹಿಸಿದವರಿಗೆ ಅಭಿನಂದನೆಗಳನ್ನು ಮತ್ತು ಪ್ರೋತ್ಸಾಹಿಸಿದ ಪೋಷಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ ಮುಂದಿನ ವರ್ಷ ಎಲ್ಲರೂ ಇದೇ ಉತ್ಸಾಹ ಮತ್ತು ಹುರುಪಿನಿಂದ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡಿದೆ.
ವರದಿ: ಸಿಂಧೂ ಕುಲಾಲ್, ಟೊರೊಂಟೊ ಕೆನಡಾ


