ಇಟಲಿ: ಯುರೋಪ್ ಪ್ರವಾಸದಲ್ಲಿರುವ ಕರ್ನಾಟಕ ವಿಧಾನ ಪರಿಷತ್ ಸದಸ್ಯೆ, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ಇಟಲಿ ಕನ್ನಡ ಸಂಘದ ಅಧ್ಯಕ್ಷ ಹೇಮೇಗೌಡ ಮತ್ತು ಐಒಸಿ ಯುರೋಪ್‌ನ ಕಾರ್ಯದರ್ಶಿ ಇರ್ಷತ್ ಅವರೊಂದಿಗೆ ಟುರಿನ್‌ನ ಉಪ ಮೇಯರ್ ಮೈಕೆಲಾ ಫವಾರೊ ಅವರನ್ನು ಭೇಟಿಯಾಗಿ ಕರ್ನಾಟಕ- ಇಟಲಿಯ ಸಂಬಂಧಗಳ ಪ್ರಮುಖ ಅಂಶಗಳನ್ನು ಚರ್ಚಿಸಿದರು.




ಇಟಲಿಯಲ್ಲಿ ಭಾರತೀಯ ಶುಶ್ರೂಶಕರ ನೇಮಕಾತಿಗೆ ಅವಕಾಶಗಳು, ಭಾರತೀಯ ವಿದ್ಯಾರ್ಥಿಗಳಿಗೆ ಯುರೋಪಿಯನ್- ಇಟಾಲಿಯನ್ ಭಾಷಾ ತರಬೇತಿ ಕಾರ್ಯಕ್ರಮಗಳು ಮತ್ತು ಎರಡೂ ದೇಶಗಳ ನಡುವಿನ ಶೈಕ್ಷಣಿಕ ಮತ್ತು ವೃತ್ತಿಪರ ಸಹಯೋಗಕ್ಕಾಗಿ ವಿಶಾಲ ಮಾರ್ಗಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮಾಡೆರಾಟಿ ಕೌನ್ಸಿಲ್ ಅಧ್ಯಕ್ಷ ಸಿಮೋನ್ ಫಿಸ್ಸೊಲೊ, ಮಾರಿಯಾ ಬೊಟೊಗ್ಲಿಯೇರಿ ಮತ್ತು ಫ್ರಾನ್ಸೆಸ್ಕೊ ಟೋರ್ಟೊರೆಲ್ಲಾ ಕೂಡ ಭಾಗವಹಿಸಿದ್ದರು.


