ಕುವೈತ್: ‘ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಶನ್’ ಇದರ 22ನೇ ವರ್ಷದ ಹಾಗೂ 2025ರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವು ಸಂಘದ ಸ್ಥಾಪಕ ಗೌರವಾಧ್ಯಕ್ಷರಾದ ಸೈಯದ್ ಅಹಮದ್ ಅವರ ಸಭಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಫರ್ವಾನಿಯ ದವಾಯಿ ಪ್ಯಾಲೆಸ್ ನಲ್ಲಿ ನಡೆಯಿತು.





ಪ್ರಸ್ತುತ ಕಾರ್ಯಕ್ರಮದಲ್ಲಿ ಕಾಸಿಂ ಉಸ್ತಾದ್ ಕಿರಾಅತ್ ಪಠಿಸಿ ಚಾಲನೆಯನ್ನು ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿರುವ ಗಣ್ಯ ಅತಿಥಿಗಳನ್ನು ಶಾರೂಖ್ ಮಣಿಪುರ ಸಂಘದ ಪರವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಸಂಘದ ಅಧ್ಯಕ್ಷರಾದ ಝುಬೈರ್ ಮೈಲಾರ್ ಅವರು ನೆರವೇರಿಸಿದರು. 2025ರ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ CH ರವರು ಮಂಡಿಸಿದರು. 2025ರ ಲೆಕ್ಕಚಾರದ ವರದಿಯನ್ನು ಖಜಾಂಜಿ ಜಮಾಲ್ ಮಣಿಪುರ ವಿವರಿಸಿದರು.
ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಯೂಸುಫ್ ಮುನಿಯಾಮ್ (ಅಧ್ಯಕ್ಷರು, KKMA ಕರ್ನಾಟಕ ಬ್ರಾಂಚ್), ಶೈಖ್ ಮುಹಮ್ಮದ್ ಜಮಾಯಿ (ಖತೀಬ್ ರಿವಿವಲ್ ಇಸ್ಲಾಮಿಕ್ ಸೂಸೈಟಿ ಕುರ್ತುಬಾ), ಶಾಹುಲ್ ಹಮೀದ್ ಸಅದಿ (ಅಧ್ಯಕ್ಷರು, ಅಲ್ ಮದೀನಾ ಕುವೈಟ್ ಕಮಿಟಿ), ಯೂಸುಫ್ ಮಂಚಕಲ್ (ಅಧ್ಯಕ್ಷರು, DKSC ಕುವೈತ್), ಬಹು ಹುಸೈನ್ ಎರ್ಮಾಡ್ KCF ಅಂತರಾಷ್ಟ್ರೀಯ ಅಡ್ಮಿನ್ ಆಡಳಿತ ಅಧ್ಯಕ್ಷರು, BM ಇಕ್ಬಾಲ್ (ಪ್ರಧಾನ ಕಾರ್ಯದರ್ಶಿ KKMA ಸೆಂಟ್ರಲ್ ಕಮಿಟಿ), ಅಬ್ದುಲ್ ರಝಾಕ್ (ಛೇರ್ಮನ್ ಬದರ್ ಅಲ್ ಸಮ), ಅಬ್ದುಲ್ ಖಾದರ್ ಸಖಾಫಿ (ಅಧ್ಯಕ್ಷರು, ಮಸ್ದರ್ ಕುವೈತ್ ಕಮಿಟಿ) ಉಪಸ್ಥಿತರಿದ್ದರು.
ಸಂಘದ ಸ್ಥಾಪನೆಗೆ ಶ್ರಮಿಸಿದ ಸ್ಥಾಪಕ ಸದಸ್ಯರಾದ ಅಬ್ದುಲ್ ರಹೀಂ ಕೃಷ್ಣಾಪುರ ಮತ್ತು ಸಂಘಕ್ಕಾಗಿ ಉತ್ತಮ ಕಾರ್ಯನಿರ್ವಹಿಸಿದ ಮುಹಮ್ಮದ್ ಹನೀಫ್ ಕೋಡಿ ಹಾಗೂ ಅಬ್ದುಲ್ ರಹ್ಮಾನ್ ಕೋಟ ಹಾಗೂ ಕುವೈತ್’ನಲ್ಲಿ ನೆಲೆಸಿರುವ ಭಾರತೀಯ ಅನಿವಾಸಿಗಳ ಎಲ್ಲಾ ರೀತಿಯ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಿ ಸಹಕರಿಸುತ್ತಿದ್ದ BM ಇಕ್ಬಾಲ್ ಅವರನ್ನು ಕೂಡ ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕರೀಂ ಬಿರಾಲಿ ಉಚ್ಚಿಲ ಅವರ ನೇತೃತ್ವದಲ್ಲಿ ಗೌರವ ಫಲಕ ನೀಡಿ ಗೌರವಿಸಲಾಯಿತು.



2026ರ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಸೈಯದ್ ಅಹಮದ್, ಅಧ್ಯಕ್ಷರಾಗಿ ಝುಬೇರ್ ಶಾಬಾನ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ CH, ಕೋಶಾಧಿಕಾರಿ ಜಮಾಲ್ ಮಣಿಪುರ ಹಾಗೂ 18 ಮಂದಿ ಸದಸ್ಯರನ್ನಾಗಿ ನೇಮಿಸಲಾಯಿತು.
ಯೂಸುಫ್ ರಶೀದ್, ಲತೀಫ್ ಸೇದಿಯಾ, ಇಸ್ಮಾಯಿಲ್ ಅಯ್ಯಂಗೇರಿ, ಶರೀಫ್ ಅವರು ಸಂಘದ ಬಗ್ಗೆ ಸಭಿಕರ ಪರವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ಕೊನೆಯದಾಗಿ ಸ್ಥಾಪಕ ಗೌರವಾಧ್ಯಕ್ಷರಾದ ಸೈಯದ್ ಅಹಮದ್ ಅವರು ಸಂಘದ ಕುರಿತು ಸವಿಸ್ತಾರವಾಗಿ ವಿವರಿಸಿದರು.
KFC ಕುವೈತ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಹಿತನುಡಿ ಮತ್ತು ದುವಾ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಹೈದರ್ ಉಚ್ಚಿಲ ನಿರ್ವಹಿಸಿದರು. ಸಂಘದ ಲೆಕ್ಕ ಪರಿಶೋಧಕ ಸುಲೈಮಾನ್ ಉಚ್ಚಿಲ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಸಂಘದ ಪರವಾಗಿ ಧನ್ಯವಾದಗೈದರು.


