ಕುವೈತ್ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ 'ಸಮಾಜ ಸೇವಾ ರತ್ನ...

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದ ನೇರಂಬಳ್ಳಿ ಸುರೇಶ್ ಶ್ಯಾಮ್ ರಾವ್, ಕುವೈತ್ ಅವರಿಗೆ ಕನ್ನಡ ಭವನದ ಗೌರವಾನ್ವಿತ “ಸಮಾಜ ಸೇವಾ ರತ್ನ ಪ್ರಶಸ್ತಿ – 2026” ಲಭಿಸಿದೆ.

ಗಲ್ಫ್ ರಾಷ್ಟ್ರ ಕುವೈತ್ ನಲ್ಲಿ ಕರ್ನಾಟಕ ಮೂಲದ ಹಲವಾರು ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಗಲ್ಫ್ ಕನ್ನಡಿಗರ ಒಕ್ಕೂಟ (GKO) ಕುವೈತ್ ಉಪಾಧ್ಯಕ್ಷರಾಗಿ ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (KPCC) ಕುವೈತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಾಖಲೆಯ ಸ್ವಯಂ ರಕ್ತದಾನಕ್ಕಾಗಿ ಹಾಗೂ ಕ್ವಿಝ್ ವಿಜೇತನಾಗಿ ಭಾರತೀಯ ರಾಯಭಾರಿ ಕಚೇರಿ ಕುವೈತ್ ನಿಂದ ಪ್ರಸಂಶಾ ಪತ್ರಗಳು, ಕರ್ನಾಟಕ ರಾಜ್ಯ ಸರಕಾರದಿಂದ “ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ – 2020”, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಿದ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭ – 2023 ರಲ್ಲಿ ಸನ್ಮಾನ ಸ್ವೀಕಾರ, ಕನ್ನಡ ಸಂಘ ಮಸ್ಕತ್ ಹಾಗೂ KPCCಯಿಂದ “ವಿಶ್ವಮಾನ್ಯ ಪ್ರಶಸ್ತಿ – 2025”, “ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ – 2019”, ಕನ್ನಡ ಸಂಘ ಬಹರೈನ್ ನಿಂದ ಕನ್ನಡ ಭವನ ಸ್ಮರಣಿಕೆ ಸ್ವೀಕಾರ, ದುಬೈನಲ್ಲಿ ಶ್ರೀ ಡಾ.ಬಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮರಣಾರ್ಥ ಅವರ ಸ್ಮಾರಕ ಪ್ರಶಸ್ತಿ ಸ್ವೀಕಾರ ಮಾಡಿದ ಇವರು, ಕೋರೋನಾ ಮಹಾಮಾರಿ ಕಾಲಘಟ್ಟದಲ್ಲಿ, ಕುವೈತ್ ನಲ್ಲಿ ಭಾರತೀಯರಿಗೆ ಮಾಡಿದ ಸಹಾಯ-ಸಹಕಾರ ಪ್ರಸಂಶನೀಯ.

ಕನ್ನಡ ಭವನದ ರಜತ ಸಂಭ್ರಮದ ಹಿನ್ನೆಲೆಯಲ್ಲಿ ಜನವರಿ 18ರಂದು ಕನ್ನಡ ಭವನ ಸಂಕೀರ್ಣದ “ಶ್ರೀಕೃಷ್ಣ ದೇವರಾಯ ವೇದಿಕೆ”ಯಲ್ಲಿ ನಡೆಯುವ “ನಾಡು-ನುಡಿ ಹಬ್ಬ” ಸಮಾರಂಭದಲ್ಲಿ ನೇರಂಬಳ್ಳಿ ಸುರೇಶ್ ಶ್ಯಾಮ್ ರಾವ್, ಕುವೈತ್ ರವರಿಗೆ “ಸಮಾಜ ಸೇವಾ ರತ್ನ ಪ್ರಶಸ್ತಿ – 2026”(ವಿದೇಶಿ ವಿಭಾಗದ) ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ.ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

ಯುಎಇಯಾದ್ಯಂತ ಹೊಸ ವರ್ಷ ಆಚರಣೆಗೆ ಕ್ಷಣಗಣನೆ; ಆಕಾಶವನ್ನೇ ಬೆಳಗಿಸಲು ಸಜ್ಜಾಗಿರುವ ಕಣ್ಮನ ಸೆಳೆಯುವ ಪಟಾಕಿ ಪ್ರದರ್ಶನಗಳು

ದುಬೈ: 2026ನ್ನು ಅದ್ಧೂರಿಯಾಗಿ ಸ್ವಾಗತಿಸಲು ಯುಎಇ ಸಜ್ಜಾಗಿದೆ. ಹೊಸ ವರ್ಷಕ್ಕೆ ಕ್ಷಣಗಣನೆ...

Related Articles

Popular Categories