ಯುಎಇದುಬೈ; 'ಮಾರ್ಗದೀಪ ಪ್ರೀಮಿಯರ್ ಲೀಗ್' ಕ್ರಿಕೆಟ್ ಪಂದ್ಯಾಟ: 'ಬೇಕಲ್...

ದುಬೈ; ‘ಮಾರ್ಗದೀಪ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟ: ‘ಬೇಕಲ್ ಫೋರ್ಟ್ ರೈಡರ್ಸ್’ಗೆ ಚಾಂಪಿಯನ್ಸ್ ಪಟ್ಟ; ‘ಕೋಟೆ ಹೀರೋಸ್’ ರನ್ನರ್ ಅಪ್

ದುಬೈ: ಮಾರ್ಗ ದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿವಂಗತ ವಸಂತ ಬೇಕಲ್ ಅವರ ಸವಿನೆನಪಿಕಾಗಿ ‘ಮಾರ್ಗದೀಪ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟ ಇತ್ತೀಚೆಗೆ ಶಾರ್ಜಾದ NASS ಕ್ರಿಕೆಟ್ ಸ್ಟೇಡಿಯಂನಲ್ಲಿ ಅದ್ಧೂರಿಯಿಂದ ಜರುಗಿತು.

ಪಂದ್ಯಾಟದಲ್ಲಿ ಮಂಜುನಾಥ ಕಾಸರಗೋಡು ಹಾಗೂ ದಾಮೋದರ ರಾವ್ ಅವರ ಮಾಲಕತ್ವದ ‘ಗಡಿನಾಡು ಸ್ಟ್ರೈಕರ್’, ರಘುನಾಥ್ ಎಂ ಹಾಗೂ ಬಿಪಿನ್ ಚಂದ್ರ ನಾಯಕ್ ಮಾಲಕತ್ವದ ‘ಬೇಕಲ್ ಫೋರ್ಟ್ ರೈಡರ್ಸ್’, ಶ್ರೀಪತಿ ಕೆ ಹಾಗೂ ಕಮಲಾಕ್ಷ ಕೆ ಮಾಲಕತ್ವದ ‘ಕ್ಷತ್ರಿಯ ಲೆಜೆಂಡ್ಸ್’ ಹಾಗೂ ನರೇಶ್ ಸಿ ಹೆಚ್ ಹಾಗೂ ಧನಂಜಯ ಸಿ ಹೆಚ್ ಮಾಲಕತ್ವದ ‘ಕೋಟೆ ಹೀರೋಸ್’ ನಾಲ್ಕು ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ಮುಖ್ಯ ಸಂಘಟಕರರಾಗಿ ಸುಧೀರ್ ಎಸ್ ಹಾಗೂ ಸುಬ್ರಹ್ಮಣ್ಯ ಬಿ.ಕೆ.ಯವರು ಕಾರ್ಯ ನಿರ್ವಹಿಸಿದರು.

ಸಂಘದ ಅಧ್ಯಕ್ಷರಾದ ಮಹೇಶ್ ಚಂದ್ರಗಿರಿ, ಕಾರ್ಯದರ್ಶಿ ಸುನಿಲ್ ರಾವ್ ಹೇರೂರು, ಉಪಾಧ್ಯಕ್ಷರಾದ ಪ್ರವೀಣ್ ಉಪ್ಪೂರು,ಕೋಶಾಧಿಕಾರಿಯಾದ ರಾಜೇಶ್ ರಾವ್, ಜೊತೆ ಕಾರ್ಯದರ್ಶಿ ಬಿಪಿನ್ ಚಂದ್ರ ನಾಯಕ್ ಹಾಗೂ ಕ್ರೀಡಾ ಕಾಯದರ್ಶಿ ಸುಬ್ರಹ್ಮಣ್ಯ ಬಿ. ಕೆ.ರವರು ಉಪಸ್ಥಿತರಿದ್ದರು.

ಪಂದ್ಯಾಟದ ಚಾಂಪಿಯನ್ಸ್ ತಂಡವಾಗಿ ‘ಬೇಕಲ್ ಫೋರ್ಟ್ ರೈಡರ್ಸ್’ ಹಾಗೂ ರನ್ನರ್ಸ್ ಅಪ್ ಆಗಿ ‘ಕೋಟೆ ಹೀರೋಸ್’ ತಂಡ ಹೊರಹೊಮ್ಮಿತು. ಸುಗಂಧರಾಜ ಬೇಕಲ್ ರವರು ಸ್ವಾಗತಿಸಿದರು. ಅಜಿತ್ ಕೊರಕೋಡು ಹಾಗೂ ಸತೀಶ್ ಹಂಗಳೂರು ಮುಖ್ಯ ಸಲಹೆಗಾರರಾಗಿದ್ಹರು. ಹರಿಪ್ರಸಾದ್ ಕೋಟೆ ಕಾರ್ಯಕ್ರಮ ನಿರೂಪಿಸಿದರು.

Hot this week

ಶಾಲೆಯ ಕ್ರೀಡಾಂಗಣದಿಂದ ಮುಖ್ಯಮಂತ್ರಿ ಕಚೇರಿವರೆಗೆ; ತಮ್ಮ ವಿದ್ಯಾರ್ಥಿ ಡಿ.ಕೆ. ಶಿವಕುಮಾರ್ ಕುರಿತು ನಿವೃತ್ತ ಶಿಕ್ಷಕ ಪಾಂಡು ಅವರ ನೆನಪುಗಳು

ಲೇಖನ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಇತಿಹಾಸವು ಮಹಾನ್ ನಾಯಕರನ್ನು ನೆನಪಿಸಿಕೊಳ್ಳುತ್ತದೆ. ಆದರೆ ಪ್ರತಿಯೊಬ್ಬ...

ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ವಾರ್ಷಿಕ ಮಹಾಸಭೆ

ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ಇದರ 28ನೇ ವಾರ್ಷಿಕ ಮಹಾಸಭೆ...

ದುಬೈಯಲ್ಲಿ ಕನ್ನಡ ಭಾಷೆಯನ್ನು ಎತ್ತಿ ಹಿಡಿದ ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ.ಕೆ.ಗಣೇಶ್ ರೈ

ಜಗತ್ತಿನ ನಾನಾ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆಗಾಗಿ...

ಜರ್ಮನಿ; ನಾಟ್ಯಫೆಸ್ಟ್ 2026: ಸಂಸ್ಕೃತಿ ಮತ್ತು ಸೃಜನಾತ್ಮಕತೆಯ ರಂಜಕ ವೇದಿಕೆ

ಫ್ರಾಂಕ್‌ಫರ್ಟ್‌ (ಜರ್ಮನಿ): ಇತ್ತೀಚೆಗೆ ಮ್ಯೂನಿಕ್‌ನ ಐನ್‌ಸ್ಟೈನ್ ಕಲ್ಚರ್ ವೇದಿಕೆ ನಾಟ್ಯಫೆಸ್ಟ್ 2026...

ಕರ್ನಾಟಕ ಸಂಘ ಖತರ್‌ನಿಂದ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ದೋಹಾ(ಖತರ್‌): ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಭಾರತೀಯ ರಾಯಭಾರ ಕಚೇರಿ...

Related Articles

Popular Categories