ಯುಎಇಯಕ್ಷಗಾನ ಕಲಾವಿದ ವಾಸು ಬಾಯರುಗೆ 'ವಿಶೇಷ ಯಕ್ಷ ಶ್ರೀ...

ಯಕ್ಷಗಾನ ಕಲಾವಿದ ವಾಸು ಬಾಯರುಗೆ ‘ವಿಶೇಷ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ’

ಅಗಸ್ಟ್ 8ರಂದು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯಿಂದ ಪ್ರದಾನ

ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ (YAKU)ಯು ತವರೂರು ತಿರುಗಾಟದಲ್ಲಿ ವರ್ಷಂಪ್ರತಿ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ ನೀಡುತ್ತಾ ಬಂದಿರುವಂತೆ 2025-2026ರ ಸಾಲಿನ ‘ವಿಶೇಷ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ’ಯನ್ನು ಈ ಬಾರಿ ಗಡಿನಾಡಿನ ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದ ವಾಸು ಬಾಯರು ಅವರಿಗೆ ನೀಡಲಾಗುವುದೆಂದು ಸಂಸ್ಥೆಯ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತಂಡದ ತವರೂರಿನ ತಿರುಗಾಟದ ಸಂದರ್ಭದಲ್ಲಿ ಅಗಸ್ಟ್ 8ರಂದು ಮಂಗಳಾದೇವಿ ದೇವಾಲಯದ ಆವರಣದಲ್ಲಿ ಪ್ರದರ್ಶನಗೊಳ್ಳಲಿರುವ ಯಕ್ಷಗಾನದ ಸಭಾ ಕಾರ್ಯಕ್ರಮದಲ್ಲಿ ವಾಸು ಬಾಯರು ಅವರಿಗೆ ‘ವಿಶೇಷ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ 2026’ಯನ್ನು ನೀಡಿ ಗೌರವಿಸಲಾಗುವುದು ತಿಳಿಸಿದರು.

ತಂಡದ ಗುರುಗಳಾದ ಶೇಖರ್ ಶೆಟ್ಟಿಗಾರ್ ಮಾತನಾಡಿ, ಈ ವರ್ಷದ ನಮ್ಮ ತಂಡ ಊರಿನ ಯಕ್ಷ ಪಯಣದಲ್ಲಿ aagast 2ರಂದು ಮಧ್ಯಾಹ್ನ 1.30ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತಿ ಸದನದಲ್ಲಿ ಕೀರ್ತಿಶೇಷ ಹಿರಿಯ ಬಲಿಪ ನಾರಾಯಣ ಭಾಗವತರ ರಚನೆಯ “ದಶಾವತಾರ”, ಆಗಸ್ಟ್ 4ರಂದು ಸಂಜೆ 6ರಿಂದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಡಾ.ವಿ.ಎಸ್.ಆಚಾರ್ಯ ಸಭಾಂಗಣ ವಿದ್ಯಾಗಿರಿ ಮೂಡುಬಿದಿರೆಯಲ್ಲಿ ಶೇಖರ್ ಶೆಟ್ಟಿಗಾರ್ ವಿರಚಿತ “ಮೋಹಿನಿ ಏಕಾದಶಿ”, ಆಗಸ್ಟ್ 8ರಂದು ಮಧ್ಯಾಹ್ನ 1.30ರಿಂದ ಮಂಗಳಾದೇವಿ ದೇವಾಲಯದ ಸನ್ನಿಧಿಯಲ್ಲಿ ಯಕ್ಷ ಕವಿ ಬೋಳೂರು ಮಧುಕುಮಾರ್ ಮತ್ತು ಕವಿ ತಿರುಮಲ ವಿರಚಿತ “ಸುದರ್ಶನೋಪಖ್ಯಾನ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಈ ಮೂರು ಯಕ್ಷಗಾನ ಪ್ರದರ್ಶನಗಳಲ್ಲಿ ಊರಿನ ಪ್ರಸಿದ್ಧ ಹಿಮ್ಮೇಳಗಾರರಾದ ಸತೀಶ್ ಶೆಟ್ಟಿ ಪಟ್ಲ, ರವಿಚಂದ್ರ ಕನ್ನಡಿಕಟ್ಟೆ, ಬಲಿಪ ಶಿವಶಂಕರ ಭಟ್, ದೇವಿಪ್ರಸಾದ್ ಆಳ್ವ ತಲಪಾಡಿ, ಚಿನ್ಮಯ ಭಟ್ ಕಲ್ಲಡ್ಕ, ದೇವರಾಜ ಆಚಾರ್ಯ ಐಕಳ, ದಯಾನಂದ ಶೆಟ್ಟಿಗಾರ್ ಮಿಜಾರು,ಆನಂದ ಪಡ್ರೆ, ಮಯೂರ್ ನಾಯ್ಕ್, ರಾಜೇಶ್ ಬಿ ಕಟೀಲು, ಯಜ್ಞೇಶ್ ರೈ ಕಟೀಲು,ವಿಘ್ನೇಶ್ ಶೆಟ್ಟಿಗಾರ್ ಕಿನ್ನಿಗೋಳಿ,ಮನ್ವಿತ್ ಎಸ್ ಪದ್ಮಶಾಲಿ, ರಾಜೇಶ್ ಕುಂಪಲ ಮೊದಲಾದವರು ಸಹಕರಿಸಲಿದ್ದಾರೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಯಾನಂದ ಪಕ್ಕಳ, ಯಕ್ಷಗುರುಗಳಾದ ಶರತ್ ಕುಡ್ಲ, ಸವಿನಯ ನೆಲ್ಲಿತೀರ್ಥ, ಗಿರೀಶ್ ನಾರಾಯಣ್, ವಸಂತ ಶೆಟ್ಟಿ, ಪ್ರಕಾಶ ಪಕಳ,ರಾಜೇಶ್ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯಕುಮಾರ್ ಶೆಟ್ಟಿ ಗಾಣದಮೂಲೆ(ದುಬೈ)

Hot this week

ಕನ್ನಡ ಸಂಘ ಬಹರೈನ್ ವತಿಯಿಂದ ಯಶಸ್ವಿಯಾಗಿ ಮೂಡಿಬಂದ ‘KSB ಐಕ್ಯತಾ ಪಾದಯಾತ್ರೆ ಹಾಗೂ ನಿಷ್ಠಾ ಪ್ರತಿಜ್ಞೆ ಸಹಿ’ ಕಾರ್ಯಕ್ರಮ

ಮನಾಮ(ಬಹರೈನ್): ಕನ್ನಡ ಸಂಘ ಬಹರೈನ್ ವತಿಯಿಂದ ವಾಟರ್ ಗಾರ್ಡನ್, ಗುಫೂಲ್ ನಲ್ಲಿ...

ಖತರ್‌ನ ಸ್ಥಳೀಯ ಶಾಲೆಗಳಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಭಾರತೀಯ ರಾಯಭಾರ ಕಚೇರಿಯ ಸಂಪೂರ್ಣ ಆಡಳಿತಾತ್ಮಕ ಬೆಂಬಲ: ಹರೀಶ್ ಪಾಂಡೆ

ದೋಹಾ: ಖತರ್‌ನಲ್ಲಿರುವ ಕನ್ನಡ ಮಾತನಾಡುವ ಅನಿವಾಸಿ ಭಾರತೀಯರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ...

ದುಬೈ; ನವೆಂಬರ್ 1ರಂದು 71ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾದ ಕರ್ನಾಟಕ ಸಂಘ ದುಬೈ

ದುಬೈ: ಯುಎಇಯಲ್ಲಿರುವ ಕನ್ನಡಿಗರ ಅತಿದೊಡ್ಡ ಮತ್ತು ಅತ್ಯಂತ ಹಳೆಯ ಸಂಘಟನೆಯಾದ ಕರ್ನಾಟಕ...

ಕನ್ನಡ ಕಲಿಕೆಯ ಜೊತೆ ಖತರ್‌ನ ಸ್ಥಳೀಯ ಸಮುದಾಯದಲ್ಲಿ ಭಾರತೀಯ ಸಂಸ್ಕೃತಿ ಪ್ರಚಾರಕ್ಕೆ ಆದ್ಯತೆ ನೀಡಿ: ಭಾರತೀಯ ರಾಯಭಾರಿ ವಿಪುಲ್ ಮನವಿ

ದೋಹಾ: ಖತರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗಸಂಸ್ಥೆಯಾದ ‘ಕರ್ನಾಟಕ ಸಂಘ...

ಬಹರೈನ್‌; ‘ಕೆಸಿಎಫ್’ನಿಂದ ಈದ್ ಮಿಲಾದ್ ಸಮ್ಮೇಳನಕ್ಕೆ ಸ್ವಾಗತ ಸಮಿತಿ ರಚನೆ

ಮನಾಮ: ಕರ್ನಾಟಕ ಕಲ್ಬರಲ್ ಫೌಂಡೇಶನ್ (ಕೆಸಿಎಫ್) ಬಹರೈನ್‌ ವತಿಯಿಂದ ಪ್ರವಾದಿ ಮುಹಮ್ಮದ್‌ರವರ...

Related Articles

Popular Categories