ಯುಎಇಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ...

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆ

ದುಬೈ: ಕರ್ನಾಟಕ ಸಂಘ ಶಾರ್ಜಾ ಇದರ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಯುಎಇನಲ್ಲಿ ಕಳೆದ 23 ವರ್ಷಗಳಿಂದ ಕನ್ನಡಪರ ಸೇವೆಯನ್ನು ಮಾಡುತ್ತಾ ವಿಶೇಷ ಮತ್ತು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಅನಿವಾಸಿ ಕನ್ನಡಿಗರಿಗೆ ಆಯೋಜನೆ ಮಾಡುವ ಹೆಮ್ಮಯ ಸಂಸ್ಥೆ ಕರ್ನಾಟಕ ಸಂಘ ಶಾರ್ಜಾ.

ಈ ಸಂಸ್ಥೆಯ 2026-28ರ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಸಮಿತಿಯ ನೂತನ ಅಧ್ಯಕ್ಷರಾಗಿ ಯುಎಇನಲ್ಲಿ ಹಲವಾರು ರಂಗಭೂಮಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಗೊಳಿಸಿದ ರಂಗಸಾರಥಿ ವಿಶ್ವನಾಥ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ಅಜ್ಮಲ್ ಸಯ್ಯದ್, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ ಮತ್ತು ಕೋಶಾಧೀಕಾರಿಯಾಗಿ ಸುಂಗಧರಾಜ್ ಬೇಕಲ್ ಮರು ಆಯ್ಕೆಯಾಗಿದ್ದಾರೆ.

ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಸಾಲಿಯಾನ್ ಮತ್ತು ಜೊತೆ ಕೋಶಾಧಿಕಾರಿಯಾಗಿ ರಘುರಾಮ್ ಶೆಟ್ಟಿಗಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೀತೇಶ್ ಅಂಚನ್, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರೇಮ್ ಶ್ರಿ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಅಮರ್ ಉಮೇಶ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಜೀವನ್ ಮತ್ತು ಅಬ್ರಹಾರ್ ಅಹ್ಮದ್ ಅವರನ್ನು ಆಯ್ಕೆಮಾಡಲಾಯಿತು.

ಸಂಘದ ಸಲಹಾ ಸಮಿತಿಯ ನಿರ್ದೇಶಕರಾಗಿ ವಕ್ವಾಡಿ ಶ್ರೀಪ್ರವೀಣ್ ಶೆಟ್ಟಿ, ಉದ್ಯಮಿ ಹರೀಶ್ ಶೇರಿಗಾರ್, ಜೋಸೆಫ್ ಮಥಾಯಿಸ್, ರಾಮಚಂದ್ರ ಹೆಗ್ಡೆ ಮುಂದುವರಿಯಲಿದ್ದಾರೆ. ಸಂಘದ ಸಲಹೆಗಾರರಾಗಿ ಎಂ.ಇ.ಮೂಳುರು , ಗಣೇಶ್ ರೈ, ಸತೀಶ್ ಪೂಜಾರಿ ಮತ್ತು ನೋಯೆಲ್ ಡಿ ಅಲ್ಮೆಡಾ ಮುಂದುವರಿಯಲಿದ್ದಾರೆ.

Hot this week

ಭಾರತದ ನೂತನ ಕಾನ್ಸುಲ್ ಜನರಲ್ ಡಾ.ವಿಷ್ಣುವರ್ಧನ ರೆಡ್ಡಿಗೆ ಕನ್ನಡಿಗರ ಕೂಟ ದುಬೈಯಿಂದ ಸ್ವಾಗತ

ದುಬೈ: ಯುಎಇಯ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲಿ ಒಂದಾಗಿರುವ ಕನ್ನಡಿಗರ ಕೂಟ, ದುಬೈ...

ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ರಕ್ತದಾನದಿಂದ ಮಾನವೀಯತೆಯ ಸಂದೇಶ ಸಾರಿದ ಕರ್ನಾಟಕ ಸಂಘ ಶಾರ್ಜಾ

ದುಬೈ: ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ಕರ್ನಾಟಕ ಸಂಘ ಶಾರ್ಜಾ ಮತ್ತು...

ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಸಲಾಲ(ಒಮಾನ್): ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್ ನಲ್ಲಿ ಬ್ಯಾರೀಸ್ ಕಮ್ಯುನಿಟಿ...

ಭಾರತದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಕರ್ನಾಟಕ ಸಂಘ ಖತರ್‌ನ ಅದ್ದೂರಿ ಭಾಗವಹಿಸುವಿಕೆ

ದೋಹಾ(ಖತರ್): ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತೀಯ ರಾಯಭಾರ ಕಚೇರಿ ದೋಹಾ...

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

Related Articles

Popular Categories