ಯುಎಇದುಬೈ; 'ಬ್ಯಾರೀಸ್ ಪ್ರೀಮಿಯರ್ ಲೀಗ್-2026' ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ...

ದುಬೈ; ‘ಬ್ಯಾರೀಸ್ ಪ್ರೀಮಿಯರ್ ಲೀಗ್-2026’ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕ್ರೌನ್ ಹೊನ್ನಾವರ; ನಫೀಸ್ ಗ್ರೂಪ್ ರನ್ನರ್ ಅಪ್

ದುಬೈ: ಶಾರ್ಜಾದ ಬಿಜೋಯ್ಸ್ ಕ್ರಿಕೆಟ್ ಕ್ರೀಡಾಗಂಣದಲ್ಲಿ ರವಿವಾರ ನಡೆದ ‘ಬ್ಯಾರೀಸ್ ಪ್ರೀಮಿಯರ್ ಲೀಗ್ ಸೀಸನ್ 1 – 2026’ ಕ್ರಿಕೆಟ್ ಪಂದ್ಯಾಟದಲ್ಲಿ ‘ಕ್ರೌನ್ ಹೊನ್ನಾವರ’ ತಂಡವು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ನಫೀಸ್ ಗ್ರೂಪ್ ತಂಡವನ್ನು ಸೋಲಿಸುವ ಮೂಲಕ ಕ್ರೌನ್ ಹೊನ್ನಾವರ ತಂಡವು ‘ಬ್ಯಾರೀಸ್ ಪ್ರೀಮಿಯರ್ ಲೀಗ್ ಸೀಸನ್ 1 – 2026’ ನ್ನು ತನ್ನದಾಗಿಸಿಕೊಂಡಿತು.

ಬಿಜಾಯ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಟೂರ್ನಮೆಂಟ್‌ನಲ್ಲಿ ಹಲವು ಬಲಿಷ್ಠ ತಂಡಗಳು ಕಪ್ ಗಾಗಿ ಸೆಣಸಾಟ ನಡೆಸಿದವು. ಫೈನಲ್ ತಲುಪಿದ ಕ್ರೌನ್ ಹೊನ್ನಾವರ ಹಾಗು ನಫೀಸ್ ಗ್ರೂಪ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಸಿದ್ದು, ಕೊನೆಯಲ್ಲಿ, ಉತ್ತಮ ಪ್ರದರ್ಶನದೊಂದಿಗೆ ಕ್ರೌನ್ ಹೊನ್ನಾವರ ತಂಡ ಜಯಶಾಲಿಯಾಗಿ ಹೊರಹೊಮ್ಮಿತು.

ಇಡೀ ಪಂದ್ಯಾಟದಲ್ಲಿ ಕ್ರೌನ್ ಹೊನ್ನಾವರ ತಂಡದ ಹಮ್ದಾನ್ ಉಡುಪಿ ತನ್ನ ಆಲ್‌ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದರು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ — ಎಲ್ಲಾ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಅವರಿಗೆ ‘ಶ್ರೇಷ್ಠ ಆಟಗಾರ(Most Valuable Player)’ ಪ್ರಶಸ್ತಿಯೊಂದಿಗೆ ಬೈಕನ್ನು ಬಹುಮಾನವಾಗಿ ನೀಡಿ ಅಭಿನಂದಿಸಲಾಯಿತು.

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories