ಬಹರೈನ್ಬಹರೈನ್; ಆಗಸ್ಟ್ 21ರಂದು 'ಕೆಸಿಎಫ್'ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಆಗಸ್ಟ್ 21ರಂದು ಮನಾಮದ ಕನ್ನಡ ಭವನದಲ್ಲಿ ‘ಪ್ರವಾದಿ ﷺ ಅವರ ಜೀವನ ಮಾನವತೆಗೆ ಮಾದರಿ’ ಎಂಬ ಸಂದೇಶದೊಂದಿಗೆ ಬೃಹತ್ ಮೀಲಾದ್ ಸಮ್ಮೇಳನ ನಡೆಯಲಿದೆ.

ಈ ಬಗ್ಗೆ ಬಹರೈನ್ ನ ಕೆಸಿಎಫ್ ಸೆಂಟರ್ ನಲ್ಲಿ ಆಟೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘಟಕರು, ಸಮಾರಂಭವು ಆಗಸ್ಟ್ 21 ಶುಕ್ರವಾರ ಸಂಜೆ 6.30ಕ್ಕೆ ಕನ್ನಡ ಭವನ, ಮನಾಮದಲ್ಲಿ ನಡೆಯಲಿದೆ. ಪ್ರಸಿದ್ದ ವಾಗ್ಮಿ ಝಿಕ್ರಾ ಥಿಯಾಲಾಜಿಕಲ್ ಅಕಾಡೆಮಿ, ಮೂಡಬಿದ್ರಿಯ ಪ್ರಿನ್ಸಿಪಾಲ್ ನೌಫಲ್ ಸಖಾಫಿ ಕಳಸ ಉಸ್ತಾದರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದರು.

ಸಮ್ಮೇಳನದ ಉದ್ದೇಶ, ಕಾರ್ಯಕ್ರಮದ ವಿಶೇಷತೆಗಳು ಹಾಗೂ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ ﷺ ಅವರ ಮಾನವೀಯ ಆದರ್ಶಗಳ ಸಂದೇಶವನ್ನು ಸಾರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೆಸಿಎಫ್ ಬಹರೈನ್ ವತಿಯಿಂದ ಕರೆ ನೀಡಲಾಯಿತು.

ಪತ್ರಿಕಾಗೋಷ್ಟಿಯಲ್ಲಿ ಮೀಲಾದ್ ಸ್ವಾಗತ ಸಮಿತಿ ಚೇರ್ಮ್ಯಾನ್ ಕಲಂದರ್ ಮುಸ್ಲಿಯಾರ್, ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ವಿಠ್ಠಲ್ ಜಮಾಲುದ್ದೀನ್, ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ರಾಷ್ಟ್ರೀಯ ನಾಯಕರಾದ ಮನ್ಸೂರ್ ಬೆಲ್ಮ, ಅಶ್ರಫ್ ರೆಂಜಾಡಿ, ಮೂಸಾ ಪೈಬಂಚಾಲ್, ತೌಫೀಕ್ ಬೆಳ್ತಂಗಡಿ, ಲತೀಫ್ ಪೇರೋಲಿ, ಶಾಫಿ ಮಾದಾಪುರ, ಝೋನ್ ನಾಯಕರರಾದ ಅಬೂಬಕ್ಕರ್ ಪೆರುವಾಯಿ, ವೇಣೂರ್ ಮುಹಮ್ಮದ್ ಅಲಿ ಮುಸ್ಲಿಯಾರ್, ನಿಯಾಝ್ ಕೂರ್ನಾಡ್, ಮಜೀದ್ ಪೈಂಬಚಾಲ್ ಉಪಸ್ಥಿತರಿದ್ದರು.

Hot this week

ದುಬೈ; ಗಂಧರ್ವ ಗಮಕ ಶಾಲೆಯಲ್ಲಿ ವಿಶೇಷ ಗುರುಪೂರ್ಣಿಮಾ ಕಾರ್ಯಕ್ರಮ

ದುಬೈ: ಗಮಕ ಕಲೆಯ ಪ್ರಸಿದ್ಧ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ...

ಅಕ್ಟೋಬರ್ 2; ಮಸ್ಕತ್‌ನಲ್ಲಿ ‘ಜೀವಧಾರೆ’ ಬೃಹತ್ ರಕ್ತದಾನ ಶಿಬಿರ

ಮಸ್ಕತ್: ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಒಮಾನ್ ಘಟಕ ಹಾಗೂ ಮಾನ್ಯ ಸಾಂಸ್ಕೃತಿಕ...

ಅಕ್ಟೋಬರ್ 4ರಂದು ದುಬೈಯಲ್ಲಿ ‘ವಿಖಾಯ ಡೇ’ ಬೃಹತ್ ರಕ್ತದಾನ ಶಿಬಿರ

ದುಬೈ: ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ವಿಖಾಯ ವತಿಯಿಂದ, ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿದ್ದ...

ಅಭಿಯಂತರರ ದಿನಾಚರಣೆ ಆಚರಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ರಾಯಭಾರ ಕಚೇರಿ, ದೋಹಾ ಆಶ್ರಯದ ಭಾರತೀಯ ಸಾಂಸ್ಕೃತಿಕ ಕೇಂದ್ರದ...

Aim India Forum raises concerns of Indian workers with senior MEA officials in UAE

Dubai, UAE, September 2026: Aim India Forum (AIF) held...

Related Articles

Popular Categories