ಯುಎಸ್‌ಎನ್ಯೂಯಾರ್ಕ್; ಅಗ್ನಿಶಾಮಕ ವೀರರಿಗೆ ವಿಶಿಷ್ಟ ನಮನ: 42 ಮಹಡಿ...

ನ್ಯೂಯಾರ್ಕ್; ಅಗ್ನಿಶಾಮಕ ವೀರರಿಗೆ ವಿಶಿಷ್ಟ ನಮನ: 42 ಮಹಡಿ ಏರಿದ ಕನ್ನಡತಿಯರು ಉಮಾ–ಸುಪ್ರಿಯಾ

ಬೆಂಕಿ ಬಸಣ್ಣ, ನ್ಯೂಯಾರ್ಕ್

ಆಲ್ಬನಿ, ನ್ಯೂಯಾರ್ಕ್: ಆಲ್ಬನಿ ಪ್ರದೇಶದ ಕ್ಯಾಪಿಟಲ್ ಡಿಸ್ಟ್ರಿಕ್ಟ್ ಕನ್ನಡ ಕೂಟ (KKCD) ಸದಸ್ಯರಾದ ಉಮಾ ಬೆಂಕಿ ಮತ್ತು ಸುಪ್ರಿಯಾ ವಾಳ್ವೇಕರ್ ಅವರು ರವಿವಾರ ಆಲ್ಬನಿಯ ಕಾರ್ನಿಂಗ್ ಟವರ್‌ನಲ್ಲಿ ನಡೆದ Tunnel to Towers Capital Region Tower Climb ಕಾರ್ಯಕ್ರಮದಲ್ಲಿ ಭಾಗವಹಿಸಿ, 42ನೇ ಮಹಡಿಯವರೆಗೆ 809 ಮೆಟ್ಟಿಲುಗಳನ್ನು ಯಶಸ್ವಿಯಾಗಿ ಏರಿದರು.

ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಇತರ ವೀರರ ಸ್ಮರಣಾರ್ಥ ನಡೆಯುವ ಈ ಕಾರ್ಯಕ್ರಮವು ಮೊದಲ ಪ್ರತಿಕ್ರಿಯೆದಾರರು, ಸೇನಾ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಬೆಂಬಲ ನೀಡುವ ಉದ್ದೇಶ ಹೊಂದಿದೆ.

ಉಮಾ ಮತ್ತು ಸುಪ್ರಿಯಾ ಇಬ್ಬರೂ ನ್ಯೂಯಾರ್ಕ್ ರಾಜ್ಯದ Office of Information Technology Services (ITS) ಉದ್ಯೋಗಿಗಳಾಗಿದ್ದು, Public Employees Federation (PEF) ತಂಡವನ್ನು ಪ್ರತಿನಿಧಿಸಿ ಈ ಸಾಹಸದಲ್ಲಿ ಪಾಲ್ಗೊಂಡರು.

ವಿಶೇಷವೆಂದರೆ, ಹಿಂದಿನ ದಿನವಿಡೀ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಿದ್ದ ಉಮಾ, ಫೈನಲ್ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಸಾಹಸ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಉಮಾ, 2025ರ ಏಪ್ರಿಲ್‌ನಲ್ಲಿ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್‌ನ್ನೂ ಯಶಸ್ವಿಯಾಗಿ ತಲುಪಿದ್ದರು.

ಉಮಾ ಬೆಂಕಿ ಮತ್ತು ಸುಪ್ರಿಯಾ ವಾಳ್ವೇಕರ್ ಅವರ ಈ ಸಾಧನೆಗೆ ಕ್ಯಾಪಿಟಲ್ ಡಿಸ್ಟ್ರಿಕ್ಟ್ ಕನ್ನಡ ಕೂಟದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಕೊನೆಯದಾಗಿ ಒಂದು ತಮಾಷೆ — ಉಮಾ ನಿಜಕ್ಕೂ ಅನುಭವಿ “ಫೈರ್‌ಫೈಟರ್”; ಏಕೆಂದರೆ ಅವರು ಮನೆಯಲ್ಲಿ ಬೆಂಕಿ (ಬಸಣ್ಣ) ಜೊತೆ ಸದಾ ಫೈಟ್ ಮಾಡುತ್ತಾರೆ!

Hot this week

ಅಮೇರಿಕದ ಆಲ್ಬನಿಯಲ್ಲಿ ಕನ್ನಡ ರಾಜ್ಯೋತ್ಸವದ ವೈಭವ: ಕನ್ನಡ ಸಂಸ್ಕೃತಿಯ ಸೊಬಗಿಗೆ ಮನಸೋತ ಕನ್ನಡಿಗರು!

ವಿಜಯ್–ಬೃಂದಾ ಸಂಗೀತ ಸಂಭ್ರಮ, 38 ಕಲಾವಿದರ ಭವ್ಯ ಫ್ಯಾಷನ್ ಶೋ; ಚೊಚ್ಚಲ...

ಶಾರ್ಜಾ; ನವೆಂಬರ್ 15ರಂದು ‘ಶಾರ್ಜಾ ಕರ್ನಾಟಕ ಸಂಘ’ದ ರಾಜ್ಯೋತ್ಸವ; ಸುಂದರ್ ಶೆಟ್ಟಿಗೆ 2026ರ ‘ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ’

ಶಾರ್ಜಾ: ಸಮಾಜಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ, ಕರ್ನಾಟಕ ಸಂಘ...

KCWA holds Extra Ordinary General Body Meeting in Kuwait

Kuwait: The Kuwait Canara Welfare Association (KCWA) held its...

ನವೆಂಬರ್ 6ರಂದು ಕರ್ನಾಟಕ ಸಂಘ ಖತರ್‌ನ 71ನೇ ರಾಜ್ಯೋತ್ಸವ ‘ಕರುನಾಡ ವೈಭವ-2026’ 

ದೋಹಾ: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ...

ದುಬೈ; ಯುಎಇ ಬಂಟ್ಸ್‌ನ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನ

ದುಬೈ : ಅರಬ್ ಸಂಯುಕ್ತ ಸಂಸ್ಥಾನದ ಜಾತಿ ಸಂಘಟನೆಗಳಲ್ಲಿ ಹಿರಿಯ ಸಂಘಟನೆಯಾದ...

Related Articles

Popular Categories