ಯುಎಸ್‌ಎನ್ಯೂಯಾರ್ಕ್; ಅಗ್ನಿಶಾಮಕ ವೀರರಿಗೆ ವಿಶಿಷ್ಟ ನಮನ: 42 ಮಹಡಿ...

ನ್ಯೂಯಾರ್ಕ್; ಅಗ್ನಿಶಾಮಕ ವೀರರಿಗೆ ವಿಶಿಷ್ಟ ನಮನ: 42 ಮಹಡಿ ಏರಿದ ಕನ್ನಡತಿಯರು ಉಮಾ–ಸುಪ್ರಿಯಾ

ಬೆಂಕಿ ಬಸಣ್ಣ, ನ್ಯೂಯಾರ್ಕ್

ಆಲ್ಬನಿ, ನ್ಯೂಯಾರ್ಕ್: ಆಲ್ಬನಿ ಪ್ರದೇಶದ ಕ್ಯಾಪಿಟಲ್ ಡಿಸ್ಟ್ರಿಕ್ಟ್ ಕನ್ನಡ ಕೂಟ (KKCD) ಸದಸ್ಯರಾದ ಉಮಾ ಬೆಂಕಿ ಮತ್ತು ಸುಪ್ರಿಯಾ ವಾಳ್ವೇಕರ್ ಅವರು ರವಿವಾರ ಆಲ್ಬನಿಯ ಕಾರ್ನಿಂಗ್ ಟವರ್‌ನಲ್ಲಿ ನಡೆದ Tunnel to Towers Capital Region Tower Climb ಕಾರ್ಯಕ್ರಮದಲ್ಲಿ ಭಾಗವಹಿಸಿ, 42ನೇ ಮಹಡಿಯವರೆಗೆ 809 ಮೆಟ್ಟಿಲುಗಳನ್ನು ಯಶಸ್ವಿಯಾಗಿ ಏರಿದರು.

ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಇತರ ವೀರರ ಸ್ಮರಣಾರ್ಥ ನಡೆಯುವ ಈ ಕಾರ್ಯಕ್ರಮವು ಮೊದಲ ಪ್ರತಿಕ್ರಿಯೆದಾರರು, ಸೇನಾ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಬೆಂಬಲ ನೀಡುವ ಉದ್ದೇಶ ಹೊಂದಿದೆ.

ಉಮಾ ಮತ್ತು ಸುಪ್ರಿಯಾ ಇಬ್ಬರೂ ನ್ಯೂಯಾರ್ಕ್ ರಾಜ್ಯದ Office of Information Technology Services (ITS) ಉದ್ಯೋಗಿಗಳಾಗಿದ್ದು, Public Employees Federation (PEF) ತಂಡವನ್ನು ಪ್ರತಿನಿಧಿಸಿ ಈ ಸಾಹಸದಲ್ಲಿ ಪಾಲ್ಗೊಂಡರು.

ವಿಶೇಷವೆಂದರೆ, ಹಿಂದಿನ ದಿನವಿಡೀ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಿದ್ದ ಉಮಾ, ಫೈನಲ್ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಸಾಹಸ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಉಮಾ, 2025ರ ಏಪ್ರಿಲ್‌ನಲ್ಲಿ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್‌ನ್ನೂ ಯಶಸ್ವಿಯಾಗಿ ತಲುಪಿದ್ದರು.

ಉಮಾ ಬೆಂಕಿ ಮತ್ತು ಸುಪ್ರಿಯಾ ವಾಳ್ವೇಕರ್ ಅವರ ಈ ಸಾಧನೆಗೆ ಕ್ಯಾಪಿಟಲ್ ಡಿಸ್ಟ್ರಿಕ್ಟ್ ಕನ್ನಡ ಕೂಟದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಕೊನೆಯದಾಗಿ ಒಂದು ತಮಾಷೆ — ಉಮಾ ನಿಜಕ್ಕೂ ಅನುಭವಿ “ಫೈರ್‌ಫೈಟರ್”; ಏಕೆಂದರೆ ಅವರು ಮನೆಯಲ್ಲಿ ಬೆಂಕಿ (ಬಸಣ್ಣ) ಜೊತೆ ಸದಾ ಫೈಟ್ ಮಾಡುತ್ತಾರೆ!

Hot this week

ಖತರ್‌ನಲ್ಲಿ ಕನ್ನಡಿಗ ಶಿಕ್ಷಕರಿಗೆ ಸನ್ಮಾನ; ಕರ್ನಾಟಕ ಸಂಘ ಖತರ್‌ನಿಂದ ವಿಜೃಂಭಣೆಯ ಶಿಕ್ಷಕರ ದಿನಾಚರಣೆ

ದೋಹಾ: ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಹಾಗೂ ಶಿಕ್ಷಣತಜ್ಞರ ಪಾತ್ರವನ್ನು ಸ್ಮರಿಸುವ ನಿಟ್ಟಿನಲ್ಲಿ...

ಮುತ್ತುಗಳ ದ್ವೀಪದಲ್ಲಿ ಮತ್ತೆ ವಿಜೃಂಭಿಸಲಿರುವ ಕರಾವಳಿಯ ಗಂಡು ಕಲೆ: ಸೆ.25ರಂದು ‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ -2026’

ಬಹರೈನ್: ಯಕ್ಷಗಾನಕ್ಕೂ ಹಾಗು ಬಹರೈನ್ ಕನ್ನಡ ಸಂಘಕ್ಕೂ ಸುಮಾರು ನಾಲ್ಕೂವರೆ ದಶಕಗಳ...

ಅಮೇರಿಕದ ಪಿಜ್ಜಾ ಅಂಗಡಿಯಲ್ಲಿ ಇಲಿ ಪ್ರತ್ಯಕ್ಷ!

ಆಲ್ಬನಿ, ನ್ಯೂಯಾರ್ಕ್: ಭಾರತದ ಹೋಟೆಲ್ ಅಥವಾ ಆಹಾರ ಮಳಿಗೆಯಲ್ಲಿ ಇಲಿ ಕಾಣಿಸಿಕೊಂಡರೆ,...

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಸಂದ ಗೌರವ, ಅಮೇರಿಕದ ತುಳುವರಲ್ಲಿ ಸಂಭ್ರಮ!

ಅಮೇರಿಕ: ತುಳುನಾಡಿನ ಜನರ ಬಹುದಶಕಗಳ ಕನಸು ನನಸಾಗಿದೆ. ಸೆಪ್ಟೆಂಬರ್ 18, 2026ರಂದು...

ನ್ಯೂಯಾರ್ಕ್‌ನ ಆಲ್ಬನಿಯ ಸುಪ್ರಿಯಾ ಶೆಟ್ಟಿಗೆ ‘ಮಿಸ್ಸೆಸ್ ಅಕ್ಕ- 2026’ ಕಿರೀಟ

ಫಿಲಡೆಲ್ಫಿಯಾ: ಫಿಲಡೆಲ್ಫಿಯಾದಲ್ಲಿ ನಡೆದ ಅಕ್ಕ (AKKA) ರಜತ ಮಹೋತ್ಸವ ವಿಶ್ವ ಕನ್ನಡ...

Related Articles

Popular Categories