ಒಮಾನ್ಕರ್ನಾಟಕ ಜಾನಪದ ಪರಿಷತ್ತು ಓಮಾನ್ ಘಟಕದಿಂದ ರಾಷ್ಟ್ರೀಯ ದಿನಾಚರಣೆ...

ಕರ್ನಾಟಕ ಜಾನಪದ ಪರಿಷತ್ತು ಓಮಾನ್ ಘಟಕದಿಂದ ರಾಷ್ಟ್ರೀಯ ದಿನಾಚರಣೆ ಸಂಭ್ರಮ

ಒಮಾನ್ ಮಸ್ಕತ್ ಸುಲ್ತಾನೇಟ್ ಆಫ್ ಓಮಾನ್‌ನ ರಾಷ್ಟ್ರೀಯ ದಿನಾಚರಣೆಯನ್ನು ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಒಮಾನ್ ಘಟಕದ ವತಿಯಿಂದ ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಶಿವಾನಂದ ಕೋಟ್ಯಾನ್ ಹಾಗೂ ಲಹೂಬ್ ಗ್ರೂಪ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಸಲಾಂ ಅಲ್ ರಹಾಬಿ ಅವರು ಜಂಟಿಯಾಗಿ ಕೇಕ್ ಕತ್ತರಿಸಿ ಒಮಾನ್ ಸುಲ್ತಾನರಿಗೆ ಹಾಗೂ ದೇಶದ ಸಮಸ್ತ ನಾಗರಿಕರಿಗೆ ಶುಭಾಶಯಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಕೋಟ್ಯಾನ್ ಅವರು, ಒಮಾನ್ ನಮ್ಮ ಕರ್ಮಭೂಮಿ. ಅನಿವಾಸಿ ಭಾರತೀಯರಿಗೆ ಶಾಂತಿ, ನೆಮ್ಮದಿ ಹಾಗೂ ಸಮೃದ್ಧ ಬದುಕಿನೊಂದಿಗೆ ತಮ್ಮ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅವಕಾಶ ನೀಡಿದ ಈ ರಾಷ್ಟ್ರಕ್ಕೆ ನಾವು ಸದಾ ಕೃತಜ್ಞರು. ದೇಶದ ಕಾನೂನು, ಸಂಪ್ರದಾಯ ಹಾಗೂ ಮೌಲ್ಯಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ಒಮಾನ್ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದರು.

ಇಮ್ರಾನ್ ಶೇಖ್ ಹಾಗೂ ವಿಶ್ವನಾಥ್ ಅವರು ರಾಷ್ಟ್ರೀಯ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿ, ಭಾರತ, ಒಮಾನ್ ನಡುವಿನ ಐತಿಹಾಸಿಕ ಸ್ನೇಹ ಹಾಗೂ ಸಾಂಸ್ಕೃತಿಕ ಬಾಂಧವ್ಯ ಮತ್ತಷ್ಟು ಬಲಗೊಳ್ಳಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಸದಸ್ಯರು ಹಾಗೂ ಹಿತೈಷಿಗಳು ಭಾಗವಹಿಸಿ ಒಮಾನ್ ದೇಶದ ಶಾಂತಿ, ಏಕತೆ ಮತ್ತು ಸಮೃದ್ಧಿಗಾಗಿ ಶುಭ ಹಾರೈಸಿದರು.

Hot this week

ದುಬೈನ ಸಮುದ್ರ ವಿಹಾರ ಕ್ರೂಸ್‌ನಲ್ಲಿ ಲೇಖಕಿ ಎಹ್ಸಾಸ್ ನಯಾಬ್‍ರ ‘ಪ್ರಜಾಪ್ರಭುತ್ವದ ಶೋಕ’ ಕೃತಿ ಬಿಡುಗಡೆ

ದುಬೈ: ಭಾರತದ ರಾಜಕೀಯ, ಸಾಮಾಜಿಕ ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆಗಳ ಕುರಿತು ವೈಚಾರಿಕ...

ಒಮಾನ್‌; ಸಲಾಲದಲ್ಲಿ ಅನ್ನೂರ್ ಎಜುಕೇಶನ್ ಸೆಂಟರ್‌ನಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ; ವಾರ್ಷಿಕೋತ್ಸವ ಅದ್ದೂರಿಯಾಗಿ ಆಚರಣೆ

ಸಲಾಲ: ಒಮಾನ್‌ನ ಸಲಾಲದಲ್ಲಿರುವ ಅನಿವಾಸಿ ಕನ್ನಡಿಗರು ತಮ್ಮ ಮಕ್ಕಳಲ್ಲಿ ಕನ್ನಡ ಭಾಷೆ...

Related Articles

Popular Categories