ಕನ್ನಡ ಭಾಷೆಯ ಓದುಗರಲ್ಲಿ ‘ವಾರ್ತಾಭಾರತಿ’ ಬಹಳ ಜನಪ್ರಿಯ ಸುದ್ದಿಸಂಸ್ಥೆಯಾಗಿದೆ. ದಿಟ್ಟ, ನೇರ, ನಿಶ್ಪಕ್ಷ ಹಾಗೂ ನಂಬಿಕೆಯ ಸುದ್ದಿಗಾಗಿ ಕನ್ನಡಿಗರ ಮನ ಮುಟ್ಟುತ್ತಿದೆ. ‘ವಾರ್ತಾಭಾರತಿ’ ಕನ್ನಡ ಪತ್ರಿಕೋದ್ಯಮದಲ್ಲಿ ಬಹು ಬೇಗ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿ ಇನ್ನೂ ಹೊಸ ವಿನೂತನ ಪ್ರಯೋಗಗಳನ್ನು ಆವಿಷ್ಕರಿಸುತ್ತಿದೆ.
ಭಾರತದಲ್ಲಿ ಅಲ್ಲದೇ ವಿದೇಶದಲ್ಲಿಯೂ ಸಹ ತನ್ನ ಓದುಗರ ಬಳಗವನ್ನು ಹೆಚ್ಚಿಸಿಕೊಂಡಿದೆ. ಈಗ ಇದರ ವಿಸ್ತರಣೆಯಾಗಿ ಅನಿವಾಸಿ ಕನ್ನಡಿಗರಿಗಾಗಿ globalkannadiga.com ಪ್ರಾರಂಭಿಸುವುದಕ್ಕೆ ಅಮೆರಿಕದ ಅಟ್ಲಾಂಟ ನಗರದ ಕನ್ನಡಿಗರ ಸಂಸ್ಥೆಯಾದ ನೃಪತುಂಗ ಕನ್ನಡ ಕೂಟದ ಪರವಾಗಿ ವಾರ್ತಾಭಾರತಿ ಮಾಧ್ಯಮ ಸಮೂಹಕ್ಕೆ globalkannadiga.com ವೆಬ್ ಸೈಟ್ ಪ್ರಾರಂಭದ ಶುಭಸಂದರ್ಭದಲ್ಲಿ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತಿದ್ದೇನೆ.
ಭರತ್ ತೇಜಸ್ವಿ
ನಿರ್ದೇಶಕರು,
ನೃಪತುಂಗ ಕನ್ನಡ ಕೂಟ, ಅಟ್ಲಾಂಟ