ದುಬೈ: ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟವಾಗಿ ಮಾರ್ಪಡಲಿ ಎಂದು ಚಂದನವನದ ಸಂಗೀತ ನಿರ್ದೇಶಕ ಗುರುಕಿರಣ್ ಹಾರೈಸಿದ್ದಾರೆ.





ಬಂಟ್ಸ್ ಪ್ರೀಮಿಯರ್ ಲೀಗ್ ಸೀಸನ್ -4 ದಿವಂಗತ ದಿವೇಶ್ ಆಳ್ವರ ಸ್ಮರಣಾರ್ಥವಾಗಿ ಶಾರ್ಜಾದ ರಹ್ಮಾನಿಯಾದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ದಿವೇಶ್ ಶಾಲಾ ಜೀವನದ ಸಮಯದಿಂದ ಆತ್ಮೀಯ ಸ್ನೇಹಿತರು. ಅವನಿಗೆ ಕ್ರೀಡೆಯ ಬಗ್ಗೆ ಅತಿಯಾದ ಆಸಕ್ತಿ ಇತ್ತು. ನನ್ನ ಆತ್ಮೀಯನ ಕನಸಿನ ಕೂಸೆ ಈ ಬಂಟ್ಸ್ ಪ್ರೀಮಿಯರ್ ಲೀಗ್. ಈ ವರ್ಷದ ಸೀಸನ್ ಗೆ ಖತರ್’ನ ರವಿ ಅಣ್ಣನ ತಂಡವು ಸೇರ್ಪಡೆಯಾದುದರಿಂದ ಮುಂದೆ ಗಲ್ಫ್ ರಾಷ್ಟ್ರದ ಎಲ್ಲಾ ತಂಡಗಳು ಸೇರ್ಪಡೆಗೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟವಾಗಲಿ ಎಂದು ಹಾರೈಸಿದರು.
ಯುಎಇ ಬಂಟ್ಸ್ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಮಾತನಾಡುತ್ತಾ, ಈ ಕ್ರಿಕೆಟ್ ಪಂದ್ಯಾಟದಲ್ಲಿ ಹತ್ತು ತಂಡದಲ್ಲಿ ಇನ್ನೂರಕ್ಕೂ ಅಧಿಕ ಮಂದಿ ಕ್ರೀಡಾ ಪಟುಗಳಾಗಿ ಭಾಗವಹಿದಸಿದ್ದಿರಿ, ನಿಮಗೆ ಅಭಿನಂದನೆಗಳು. ನೀವೆಲ್ಲ ಕೇವಲ ಕ್ರಿಕೆಟ್ ಗೆ ಮಾತ್ರ ಸೀಮಿತವಲ್ಲ ಯುಎಇ ಬಂಟ್ಸ್ ನ ಪ್ರತಿಯೊಂದು ಕಾರ್ಯಕ್ರಮಕ್ಕೆ ನೀವು ಬರಬೇಕು. ಮುಂದೆ ನಡೆಯುವ ರಕ್ತದಾನ ಶಿಬಿರ, ಸತ್ಯನಾರಾಯಣ ಪೂಜೆ, ವಿಹಾರಕೂಟ ಕಾರ್ಯಕ್ರಮಕ್ಕೆ ನೀವು ಪಾಲ್ಘೊಳ್ಳಬೇಕೆಂದು ವಿನಂತಿಯನ್ನು ಮಾಡಿ ಶುಭವನ್ನು ಹಾರೈಸಿದರು.








ಮುಖ್ಯ ಅತಿಥಿಗಳಾಗಿ ಯುಎಇ ಬಂಟ್ಸ್’ನ ಪೋಷಕರಾದ ಬಿ.ಆರ್. ಶೆಟ್ಟಿ, ರತ್ನಾಕರ ಶೆಟ್ಟಿ, ಯುಎಇ ಬಂಟ್ಸ್’ನ ಉಪಾಧ್ಯಕ್ಷ ಪ್ರೇಮ್ ನಾಥ್ ಶೆಟ್ಟಿ ಉಪಸ್ಥಿತರಿದ್ದರು.
ರವಿವಾರ ಶಾರ್ಜಾದ ಡಿ.ಸಿ.ಎಸ್ ಸೆಲೆಕ್ಟ್ ಅರೇನಾ ಮೈದಾನದಲ್ಲಿ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡ ಪಂದ್ಯಾಟದಲ್ಲಿ ಗುಣಶೀಲ್ ಶೆಟ್ಟಿಯವರ ACE ಅವೇಂಜರ್ಸ್, ರವಿ ಶೆಟ್ಟಿ ಮೂಡಂಬೈಲ್ ಖತರ್ ಅವರ ಎ.ಟಿ.ಎಸ್ ಗ್ರೂಪ್, ಪ್ರದೀಪ್ ಶೆಟ್ಟಿಯವರ ಕಾನ್ಸೆಪ್ಟ್ ವಾರಿಯರ್ಸ್, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಫಾರ್ಚೂನ್ ಗ್ಲಾಡಿಯೇಟರ್ಸ್, ದಿನೇಶ್ ಶೆಟ್ಟಿ ಕೊಟ್ಟಿಂಜರವರ ನವ ಚೇತನ ಫ್ರೆಂಡ್ಸ್, ರೇಷ್ಮ ದಿವೇಶ್ ಆಳ್ವರವರ ಪಿಯೋನೀರ್ ಮರಿನಾರ್, ಉದಯ ಶೆಟ್ಟಿಯವರ ರೇಂಜರ್, ಶರತ್ ಶೆಟ್ಟಿಯವರ ಸೋಮ ಅರಸ ವಾರಿಯರ್ಸ್, ಪ್ರವೀಣ್ ಶೆಟ್ಟಿಯವರ ವರಾಹ ರೂಪ ಮಂಗಳೂರು, ವಿದ್ಯಾನಂದ ಶೆಟ್ಟಿಯವರ ವಿಡ್ ಒನ್ ವಿಕ್ಟರ್ಸ್ ಎಂಬ ಹತ್ತು ತಂಡಗಳು ಭಾಗವಹಿಸಿದ್ದು, ಭರ್ಜರಿಯಾಗಿ ಆಟ ಆಡುತ್ತ ಕ್ರೀಡಾ ಪಟುಗಳು ತಮ್ಮ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.









ಕೊನೆಗೆ ಪ್ರದೀಪ್ ಶೆಟ್ಟಿಯವರ ಕಾನ್ಸೆಪ್ಟ್ ವಾರಿಯರ್ಸ್ ತಂಡವು ಪ್ರಥಮ ಸ್ಥಾನ ಮತ್ತು ಉದಯ ಶೆಟ್ಟಿಯವರ ರೇಂಜರ್ ತಂಡವು ದ್ವಿತೀಯ ಸ್ಥಾನ ತನ್ನದಾಗಿಸಿತ್ತು. ಗುಣಶೀಲ್ ಶೆಟ್ಟಿಯವ ಎಂ.ಸಿಈ ಅವೇಂಜರ್ಸ್ ತ್ರತೀಯ, ಪ್ರವೀಣ್ ಕುಮಾರ್ ಶೆಟ್ಟಿಯವರ ಫಾರ್ಚೂನ್ ಗ್ಲಾಡಿಯೇಟರ್ಸ್ ಚತುರ್ಥ ಸ್ಥಾನಕ್ಕೆ ತೃಪ್ತಿಪಟ್ಟರು.
ಉತ್ತಮ ದಾಂಡಿಗನಾಗಿ ಹಾಗೂ ಪೂರ್ಣ ಟೂರ್ನಮೆಂಟ್ ನ ಉತ್ತಮ ಆಟಗಾರನಾಗಿ ಶಿವ ಪ್ರಸಾದ್ ಶೆಟ್ಟಿ, ಅತ್ಯುತ್ತಮ ಕ್ಷೇತ್ರ ರಕ್ಷಕನಾಗಿ ಪ್ರಥಮ್ ರೈ, ಅತ್ಯುತ್ತಮ ಎಸೆತಗಾರ, ಪಂದ್ಯ ಶ್ರೇಷ್ಠ ಮತ್ತು ಟೂರ್ನಮೆಂಟ್ ನ ಅತ್ಯುತ್ತಮ ಆಟಗಾರನಾಗಿ ಕೀರ್ತನ್ ಶಂಕರ್ ಶೆಟ್ಟಿ ಅವರಿಗೆ ಟ್ರೋಫಿ ನೀಡಿ ಗೌರವಿಸಲಾಯಿತು.































ಸಂಜೆ ದಿ.ದಿವೇಶ್ ಆಳ್ವರವರ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬಿಕರ ಬಾಲೆ ಬಾಯ್ಸ್ ಮತ್ತು ಗಲ್ಲಿ ಬಾಯ್ಸ್ ತಂಡದಿಂದ ವಿಶೇಷ ಆಕರ್ಷಣೆಯ ಕ್ರಿಕೆಟ್ ಪಂದ್ಯಾಟ ನಡೆಯಿತು.
ಮುಖ್ಯ ಅತಿಥಿಗಳಾಗಿ ಯುಎಇ ರತ್ನಾಕರ ಶೆಟ್ಟಿ, ಯುಎಇ ಬಂಟ್ಸ್ ನ ಉಪಾಧ್ಯಕ್ಷ ಪ್ರೇಮ್ ನಾಥ್ ಶೆಟ್ಟಿ, ಪಂದ್ಯಾಟಕ್ಕೆ ಪ್ಲಾಟಿನಂ ಪ್ರಾಯೋಜಕರಾಗಿ ಸಹಕರಿಸಿದ ಪಿಯೋನೀರ್ ಮರೀನ್ ನ ಅರವಿಂದ್ ಕಾಮತ್, ಗೊಲ್ಡ್ ಪ್ರಾಯೋಜಕರಾಗಿ ಸಹಕರಿಸಿದ ಕ್ರವೀನ್ ನ ಡಾ.ಪುಷ್ಪರಾಜ್ ಶೆಟ್ಟಿ, ದೇಶಿ ವಸ್ತ್ರದ ಶ್ರೀಮತಿ ಭಾಗ್ಯ ಪ್ರೆಂನಾಥ್ ಶೆಟ್ಟಿ, ಇಂಜಿಪಿಲಿ ಟ್ರೇಡಿಂಗ್ ಅಶ್ವಿಥ್ ಶೆಟ್ಟಿ, ಗನ್ ತೂಥ್ ನ ಸುಜತ್ ಶೆಟ್ಟಿ, ಕಿಂಗ್ ಅ್ಯಂಡ್ ಜೋನಿ ಜಾಲಿ ಬಾರ್ ನ ರಾಘವೇಂದ್ರ ಕಾಮತ್, ಓರ್ಕಿಡ್ ನೆಟ್ ವರ್ಕ್ ನ ಸಾಯಿರಾಮ್ ಶೆಟ್ಟಿ, ಸಿಲ್ವರ್ ಪ್ರಾಯೋಜಕರಾಗಿ ಸಹಕರಿಸಿದ ಫಿಸರ್ಮ್ಯಾನ್ ಹಬ್ ನ ಸಂದೀಪ್ ಶೆಟ್ಟಿ, ಹೀಡಾನ್ ನ ದಿನಕರ ಶೆಟ್ಟಿ, ಮಹಮ್ಮದ್ ಆಶೀಫ್, ಇಂಡಿಯನ್ ಕಾರ್ನಾರ್ ನ ಶೇಖರ್ ಶೆಟ್ಟಿ, ನಿಹಲ್ ರೆಸ್ಟೋರೆಂಟ್ ಅಬುಧಾಬಿಯ ಸುಂದರ್ ಶೆಟ್ಟಿ, ರೋಯಲ್ ಗ್ಲಾಸ್ ನ ದಿವಾಕರ ಶೆಟ್ಟಿ, ತುಂಬೆ ಗ್ರೂಪ್ ನ ವಿಘ್ನೇಶ್, ದೀನಾತ್ ಶೆಟ್ಟಿ, ಗುರುಚರಣ್ ರೈ, ನಿಶೀಥ್ ಶೆಟ್ಟಿ, ಸುನಿಲ್ ಶೆಟ್ಟಿ, ಸಾಗರ್ ಶೆಟ್ಟಿ, ಸಜನ್ ಶೆಟ್ಟಿಯವರು ಉದ್ಘಾಟನ ಮತ್ತು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.




ಕೊನೆಗೆ ಪಂದ್ಯಾಟದ ಯಶಸ್ವಿಗೆ ಕಾರಣಕರ್ತರಾದ ತೀರ್ಪುಗಾರರನ್ನು, ಪ್ರಾಯೋಜಕರನ್ನು, ಹತ್ತು ತಂಡದ ಹತ್ತು ಮಾಲೀಕರನ್ನು ಮತ್ತು ಬೆಳಗ್ಗೆಯಿಂದ ರಾತ್ರಿಯವರೆಗೆ ದುಡಿದ ಕಾರ್ಯಕರ್ತರನ್ನು ಗೌರವಿಸಲಾಯಿತು. ವೈಷ್ಣವಿ ಶೆಟ್ಟಿ ಪ್ರಾರ್ಥನೆ ಹಾಡಿದರು, ಅಶ್ವಿಥ್ ಶೆಟ್ಟಿಯವರು ಸ್ವಾಗತಿಸಿದರು. ಸಭಾ ಕಾರ್ಯಕ್ರಮವನ್ನು ಶಿವ ಪ್ರಸಾದ್ ಶೆಟ್ಟಿ ಮತ್ತು ವಿನೋದ್ ಶೆಟ್ಟಿ ಅಚ್ಚುಕಟ್ಟಾಗಿ ನಿರೂಪಿಸಿದರು.
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)