ನ್ಯೂಯಾರ್ಕ್: ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡೊನಾಲ್ಡ್ ಟ್ರಂಪ್ ಇದೀಗ ಯೂರೋಪ್ ಗೆ ಬೆದರಿಕೆ ಹಾಕಿದ್ದಾರೆ. ನೀವು ತೈಲ ಮತ್ತು ಗ್ಯಾಸ್ ಅನ್ನು ಬೇರೆಯವರಿಂದ ಖರೀದಿಸುವುದನ್ನು ಬಿಟ್ಟು ನಮ್ಮಿಂದಲೇ ಖರೀದಿಸಬೇಕು ಎಂದು ಅವರು ಸಾಮಾಜಿಕ ಮಾಧ್ಯಮದ ಮೂಲಕ ಯುರೋಪ್ ಗೆ ಬೆದರಿಕೆ ಹಾಕಿದ್ದಾರೆ.
ಯುರೋಪ್ ತನ್ನ ಹೆಚ್ಚಿನ ತೈಲ ಮತ್ತು ಅನಿಲವನ್ನು ಯುಎಸ್ ನಿಂದ ಖರೀದಿಸಬೇಕೆಂದು ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ. ಹಾಗೆ ಮಾಡದಿದ್ದರೆ, “ಟ್ಯಾರಿಫ್ಸ್ ಎಲ್ಲಾ ರೀತಿಯಲ್ಲಿ” ಇರುತ್ತದೆ ಎಂದು ಅವರು ಹೇಳಿದರು. ಅಂದರೆ, ಎಲ್ಲದರಲ್ಲಿಯೂ ಹೆಚ್ಚಿನ ಸುಂಕ ವಿಧಿಸುವುದನ್ನು ನೀವು ಎದುರಿಸಬೇಕಾಗುತ್ತದೆ ಎಂದಾಗಿದೆ.
ತಮ್ಮ ಪ್ಲಾಟ್‌ಫಾರ್ಮ್ ಟ್ರೂತ್ ಸೋಷಿಯಲ್‌ನಲ್ಲಿ ಬರೆದುಕೊಂಡಿರುವ ಟ್ರಂಪ್, “ನಮ್ಮ ತೈಲ ಮತ್ತು ಅನಿಲವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ತಮ್ಮ ವ್ಯಾಪಾರ ಕೊರತೆಯನ್ನು ತುಂಬಬೇಕು ಇಲ್ಲದಿದ್ದಲ್ಲೆ ಹೆಚ್ಚಿನ ಮಟ್ಟದ ಸುಂಕವನ್ನು ಎದುರಿಸಬೇಕಾದೀತು” ಎಂದು ಹೇಳಿದ್ದಾರೆ.
ಅವರ ಹಿಂದಿನ ಅವಧಿಯಲ್ಲೂ, ಡೊನಾಲ್ಡ್ ಟ್ರಂಪ್ “ಬಹಳ ಕಾಲದಿಂದ ಯುರೋಪ್ ಯುಎಸ್ ಬೆನ್ನಿನ ಮೇಲೆ ಸವಾರಿ ಮಾಡುತ್ತಿದೆ. ಅದು ನಡೆಯಲು ನಾವು ಅವಕಾಶ ಮಾಡಿಕೊಟ್ಟಿದ್ದೇವೆ” ಎಂದು ಹೇಳಿದ್ದರು.