ದೋಹಾ: ಕರ್ನಾಟಕ ಸಂಘ ಖತರ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು, ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಖಾತೆಯ ಮಾನ್ಯ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರನ್ನು ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡರು.
ಖತರ್‌ಗೆ ಭೇಟಿ ನೀಡಿದ ಕೇಂದ್ರ ಸಚಿವರ ಗೌರವಾರ್ಥವಾಗಿ ಖತರ್‌ನಲ್ಲಿರುವ ಭಾರತದ ಮಾನ್ಯ ರಾಯಭಾರಿಗಳಾದ ಡಾ. ಕೆ. ಶ್ರೀಕರ ರೆಡ್ಡಿ ಅವರು ಆಯೋಜಿಸಿದ್ದ ವಿಶೇಷ ಔತಣಕೂಟದಲ್ಲಿ ಈ ಭೇಟಿಯು ನಡೆಯಿತು.

