ಯುಎಇದುಬೈ; ಫೆಬ್ರವರಿ 28ರಂದು 'ಬ್ಯಾರೀಸ್ ಕಲ್ಚರಲ್ ಫೋರಮ್( BCF)'ನಿಂದ...

ದುಬೈ; ಫೆಬ್ರವರಿ 28ರಂದು ‘ಬ್ಯಾರೀಸ್ ಕಲ್ಚರಲ್ ಫೋರಮ್( BCF)’ನಿಂದ ‘ಇಫ್ತಾರ್ ಮೀಟ್ 2026’

ದುಬೈ: ಕಳೆದ 28 ವರ್ಷಗಳಿಂದ ಸಾಮುದಾಯಿಕ ಸೇವಾ ಕಾರ್ಯದಲ್ಲಿ ತೊಡಗಿ ಕೊಂಡಿರುವ ಅತೀ ಜನಪ್ರಿಯ ಸೇವಾ ಸಂಸ್ಥೆಯಾಗಿರುವ ‘ಬ್ಯಾರೀಸ್ ಕಲ್ಚರಲ್ ಫೋರಮ್( BCF)’ ವತಿಯಿಂದ ‘ಗ್ರ್ಯಾಂಡ್ BCF ಇಫ್ತಾರ್ ಮೀಟ್ 2026’ ಇಫ್ತಾರ್ ಕಾರ್ಯಕ್ರಮ ಫೆಬ್ರವರಿ 28ರಂದು ದುಬೈಯ ಮಂಝರ್ ನಲ್ಲಿರುವ ಝಹಿಯ್ಯಾ ಸಭಾಂಗಣದಲ್ಲಿ ನಡೆಯಲಿದೆ.

BCF ಅಧ್ಯಕ್ಷರಾದ ಡಾ.ಬಿ.ಕೆ.ಯೂಸುಫ್ ಅವರ ಮುಂದಾಳುತನದಲ್ಲಿ BCF ಸ್ಥಾಪಕ ಗೌರವ ಪೋಷಕರಾದ ಡಾ.ತುಂಬೆ ಮೊಹಿದಿನ್ ಅವರ ಸಹಯೋಗದೊಂದಿಗೆ, BCF ಗೌರವ ಸಲಹೆಗಾರರಾದ ಇಬ್ರಾಹಿಂ ಗಡಿಯಾರ್ ಮತ್ತು ಅಬೂಸಾಲಿಹ್ ಮತ್ತು ಇತರ BCF ನಾಯಕರು ಮತ್ತು ಹಿತೈಷಿಗಳ ಸಹಕಾರದೊಂದಿಗೆ ನೆರವೇರಲಿದೆ.

UAEಯಿಂದ, ಇತರ GCC ದೇಶಗಳಿಂದ ಮತ್ತು ಕರ್ನಾಟಕದ ಹಲವಾರು ವಿಶೇಷ ಅತಿಥಿಗಳು, ಉಲೇಮಾಗಳು, ಇಲಾಖಾ ಪ್ರತಿನಿಧಿಗಳು, ಮಂತ್ರಿಗಳು ಮತ್ತು UAE ಯಿಂದ ವಿಶೇಷ ಆಮಂತ್ರಿತ ಅತಿಥಿಗಳು ಭಾಗವಹಿಸಲಿದ್ದಾರೆ.

ಇಫ್ತಾರ್ ಗೆ ಮೊದಲು, ಧಾರ್ಮಿಕ ಪಂಡಿತರುಗಳಿಂದ ದೀನೀ ಉಪನ್ಯಾಸಗಳು, ದುವಾ, ಮತ್ತು ವಿಶೇಷವಾಗಿ ಮಕ್ಕಳಿಗೆ ಮತ್ತು ಇತರರಿಗೆ ಇಸ್ಲಾಮ್ ರಸ ಸ್ಪರ್ಧೆ, ಕಿರಾತ್ ಸ್ಪರ್ಧೆ ಕೂಡಾ ಇದೆ. ಈ ಇಫ್ತಾರಿಗೆ ಆಗಮಿಸುವ ಎಲ್ಲ BCF ಅಭಿಮಾನಿಗಳು ಈ ಎಲ್ಲ ಸ್ಪರ್ಧಾವಳಿಯಲ್ಲಿ ಪಾಲ್ಗೊಳ್ಳಲು ಅಥವಾ ವೀಕ್ಷಿಸಲು ಸಂಜೆ 4.30ಕ್ಕೆ ಆಗಮಿಸುವಂತೆ BCF IFTAAR COMMITEEಯ ಚೇರ್ಮ್ಯಾನ್ ಅಬ್ದುಲ್ ಲತೀಫ್ ಮುಲ್ಕಿ ಮತ್ತು ಸಹ ಚೇರ್ಮ್ಯಾನ್ ಅಫೀಕ್ ಹುಸೈನ್ BCF ಕಾರ್ಯಕಾರಿ ಸಮಿತಿಯ ಪರವಾಗಿ ವಿನಂತಿಸಿದ್ದಾರೆ.

Hot this week

ಶಾರ್ಜಾ ರೋಲ್ಲಾದಲ್ಲಿ ‘ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್’ನ ಹೊಸ ಶಾಖೆ ಆರಂಭ; ಕಡಿಮೆ ವೆಚ್ಚದ ಆರೋಗ್ಯ ಸೇವೆಗೆ ಹೆಚ್ಚಿನ ಪ್ರವೇಶ

ಶಾರ್ಜಾ: ಯುಎಇಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಾಥಮಿಕ ಆರೋಗ್ಯ ಸೇವಾ ಸಂಸ್ಥೆಗಳಲ್ಲೊಂದಾದ ಮ್ಯಾಕ್ಸ್‌ಕೇರ್...

ಯುಎಇ ಕುಲಾಲ ಫ್ಯಾಮಿಲಿಯಿಂದ ಶ್ರೀಸತ್ಯನಾರಾಯಣ ಪೂಜೆ

ದುಬೈ: ಇಲ್ಲಿನ ಗ್ಲೆಂಡೆಲ್ ಅಂತಾರಾಷ್ಟ್ರೀಯ ಶಾಲಾ ಸಭಾಂಗಣದಲ್ಲಿ ರವಿವಾರ ಸುಬ್ರಹ್ಮಣ್ಯ ಭಟ್...

ಮಸ್ಕತ್ ನಲ್ಲಿ ತುಳು ಚಿತ್ರರಸಿಕರ ಮನಗೆದ್ದ ‘ಬೆಲ್ಲದ ಗಟ್ಟಿ’ ತುಳು ಸಿನೆಮಾ!

ಒಮಾನ್: ಕೌಟುಂಬಿಕ, ಸಾಮಾಜಿಕ, ಕುತೂಹಲ ಮೂಡಿಸುವ ಥ್ರಿಲ್ಲರ್ ಅಂಶಗಳನ್ನೊಳಗೊಂಡ ತುಳು ಚಲನಚಿತ್ರ...

ಅಟ್ಲಾಂಟ ಕನ್ನಡಿಗರಿಂದ ಸಂಕ್ರಾಂತಿ ಹಬ್ಬದ ಸಂಭ್ರಮಾಚರಣೆ

ಕೆ.ಆರ್. ಶ್ರೀನಾಥ್, ಅಟ್ಲಾಂಟ ಅಟ್ಲಾಂಟ: ಶನಿವಾರ ಅಟ್ಲಾಂಟದ ನೃಪತುಂಗ ಕನ್ನಡ ಕೂಟದ ಸದಸ್ಯರು...

KCWA celebrates Konkani Diwas 2026, Vodle Fest in grandeur

Kuwait: The Konkani-speaking community in Kuwait came together in...

Related Articles

Popular Categories