ಯುಎಇದುಬೈ; ಡಿಸೆಂಬರ್ 14ರಂದು 'ಯುಎಇ ಬಂಟ್ಸ್'ನ 48ನೇ ವರ್ಷದ...

ದುಬೈ; ಡಿಸೆಂಬರ್ 14ರಂದು ‘ಯುಎಇ ಬಂಟ್ಸ್’ನ 48ನೇ ವರ್ಷದ ‘ಭಾವೈಕ್ಯ’ ಬಂಟರ ಮಹಾಸಮಾಗಮ; ಭಾಗಿಯಾಗಲಿದ್ದಾರೆ ರಿಷಭ್ ಶೆಟ್ಟಿ, ವಿವೇಕ್ ಒಬೆರಾಯ್, ಬ್ರಿಜೇಶ್ ಚೌಟ

ದುಬೈ: ಯುಎಇ ಬಂಟ್ಸ್ ನ 48ನೇ ವರ್ಷದ ‘ಭಾವೈಕ್ಯ’ ಬಂಟರ ಮಹಾಸಮಾಗಮವು ಡಿಸೆಂಬರ್ 14ರಂದು ನಗರದ ಶೇಖ್ ಝಾಯೀದ್ ರಸ್ತೆಯ ಮಿಲೆನಿಯಂ ಪ್ಲಾಝ ಹೋಟೆಲ್ ಡೌನ್ ಟೌನ್ (ಹಳೆಯ ಕ್ರೌನ್ ಪ್ಲಾಝ) ನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಯುಎಇ ಬಂಟರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ‘ಬಂಟ ವಿಭೂಷಣ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ: ಯುಎಇ ಬಂಟ ಬಾಂಧವರಿಂದ ತುಳುನಾಡ ಮಣ್ಣ್ ದ ಮಹಿಮೆ, ಭಾರತದ‌ ಸಂಸ್ಕೃತಿಯ ಪಯಣ, ಬಂಟೆರ್ನ ಐಸಿರ, ಕಿರುಚಿತ್ರ ಸ್ಪರ್ಧೆ ಸೇರಿದಂತೆ ಇತರ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.

‘ಬಂಟ ವಿಭೂಷಣ ಪ್ರಶಸ್ತಿ’ ಪ್ರದಾನ: ವರ್ಷಂಪ್ರತಿ ಕೊಡಮಾಡುವ ಯುಎಇ ಬಂಟರ ಪ್ರತಿಷ್ಠಿತ ‘ಬಂಟ ವಿಭೂಷಣ ಪ್ರಶಸ್ತಿ’ಯನ್ನು ಮಂಗಳೂರು ಕಂಬಳದ ರೂವಾರಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಚಿತ್ರರಂಗದ ನಟ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಚಿತ್ರನಟ ಸಾಯಿಲ್ ರೈ ಮತ್ತು ನಯನ ಶೆಟ್ಟಿಯವರು ಮಾಡಲಿದ್ದಾರೆ.

ಯುಎಇಯಲ್ಲಿ ಇರುವ ಎಲ್ಲಾ ಬಂಟ ಬಾಂಧವರು 48ನೇ ವರ್ಷದ ಬಂಟರ ಮಹಾಸಮಾಗಮದಲ್ಲಿ ಭಾಗವಹಿಸಬೇಕೆಂದು ಹಾಗೂ ಬೆಳಗ್ಗೆ 10 ಗಂಟೆಯ ಒಳಗೆ ಆಗಮಿಸಿದವರಿಗೆ ಉಚಿತ ಪ್ರವೇಶ ಮತ್ತು 8 ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಇದೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಯುಎಇ ಬಂಟ್ಸ್ ನ ಪೋಷಕರಾದ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು 2025ನೇ ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Hot this week

ದುಬೈಯಲ್ಲಿ ಸಂಪನ್ನಗೊಂಡ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವೈಭವ

ದುಬೈ: ಅರಬ್ ಸಂಯುಕ್ತ ಸಂಸ್ಥಾನ ವಾಣಿಜ್ಯ ನಗರಿ ದುಬೈಯಲ್ಲಿ ಸಾಮೂಹಿಕ ಶ್ರೀ...

ಸಲಾಲದಲ್ಲಿ ಅದ್ದೂರಿಯಾಗಿ ನಡೆದ ಕನ್ನಡಿಗರ ‘ಸ್ನೇಹ ಸಂಗಮ’ ಕಾರ್ಯಕ್ರಮ

ಸಲಾಲ(ಒಮಾನ್): ಇಲ್ಲಿನ ಅನಿವಾಸಿ ಕನ್ನಡಿಗರ ಅನ್ನೂರ್ ಎಜುಕೇಶನಲ್ ಸೆಂಟರ್ ವತಿಯಿಂದ 'ಸ್ನೇಹ...

ವಿಶ್ವದಲ್ಲೇ ಮೊದಲ ಬಾರಿ ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಕರಾವಳಿ ಕರ್ನಾಟಕದ ಜನಪ್ರಿಯ ಕಲೆಯಾಗಿರುವ ಯಕ್ಷಗಾನವು...

ಫೆಬ್ರವರಿ 1ರಂದು ಶಾರ್ಜಾದಲ್ಲಿ ‘ಮಾರ್ಗದೀಪ ಪ್ರೀಮಿಯರ್ ಲೀಗ್-4’ ಕ್ರಿಕೆಟ್ ಟೂರ್ನಮೆಂಟ್; ಜರ್ಸಿ ಬಿಡುಗಡೆ

ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿವಂಗತ ವಸಂತ್ ಬೇಕಲ್ ಸ್ಮರಣಾರ್ಥ...

ದುಬೈ; ‘ಗಲ್ಫ್ ಫುಡ್ 2026’ ಮೇಳದಲ್ಲಿ ಮಿಂಚಿದ ‘ನಂದಿನಿ’

ದುಬೈ: ಯುಎಇಯಲ್ಲಿ 31 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವದ ಅತಿದೊಡ್ಡ...

Related Articles

Popular Categories