ವಾರ್ತಾಭಾರತಿ ಅನಿವಾಸಿ ಕನ್ನಡಿಗರಿಗಾಗಿಯೇ ಮೀಸಲಾದ globalkannadiga.com ಎಂಬ ಹೊಸ ವೆಬ್ ಸೈಟ್ ತಂದಿರುವುದು ಬಹಳ ಹೆಮ್ಮೆಯ, ಖುಷಿಯ ವಿಷಯ. ಇದು ಅತ್ಯಂತ ಸೂಕ್ತ ಹಾಗು ಸಕಾಲಿಕವಾಗಿದೆ. ಅನಿವಾಸಿ ಕನ್ನಡಿಗರ ಧ್ವನಿಯಾಗಿ ಈ ವೆಬ್ ಸೈಟ್ ಎಲ್ಲೆಡೆ ಮೊಳಗಲಿ. ಜಗತ್ತಿನ ಎಲ್ಲ ದೇಶಗಳ ಕನ್ನಡಿಗರ ವೇದಿಕೆಯಾಗಿ ಈ ವೆಬ್ ಸೈಟ್ ಬೆಳೆಯಲಿ. ವಾರ್ತಾಭಾರತಿ ಪ್ರಾರಂಭದಿಂದಲೂ ಅನಿವಾಸಿ ಕನ್ನಡಿಗರ ಬಗ್ಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ಈಗ ಅನಿವಾಸಿಗಳಿಗಾಗಿಯೇ ವಿಶೇಷ ವೆಬ್ ಸೈಟ್ ತಂದಿರುವುದು ಅದರ ಕಾಳಜಿಗೆ ಸಾಕ್ಷಿಯಾಗಿದೆ. ಇಂತಹ ಒಳ್ಳೆಯ ಕೆಲಸಕ್ಕೆ ಎಲ್ಲ ಅನಿವಾಸಿ ಕನ್ನಡಿಗರಿಂದ ತುಂಬು ಪ್ರೋತ್ಸಾಹ ಸಿಗಲಿ. ಅನಿವಾಸಿ ಕನ್ನಡಿಗರ ಧ್ವನಿಯಾಗಿ ಈ ಹೊಸ ವೆಬ್ ಸೈಟ್ ಬೆಳೆಯಲಿ. ವಾರ್ತಾಭಾರತಿ ಬಳಗಕ್ಕೆ ಅಭಿನಂದನೆಗಳು
ಶೇಕ್ ಕರ್ನಿರೆ
ಉಪಾಧ್ಯಕ್ಷರು, ಎಕ್ಸ್ ಪರ್ಟೈಸ್ ಗ್ರೂಪ್, ಜುಬೈಲ್, ಸೌದಿ ಅರೇಬಿಯಾ