ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿ ದುಬೈ ಇದರ ವತಿಯಿಂದ ನಡೆದ 11ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ರವಿವಾರ ಅಜ್ಮಾನ್ ನ ಇಂಡಿಯನ್ ಅಸೋಸಿಯೇಷನ್ ಹಾಲ್ ನಲ್ಲಿ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.










ಪುರೋಹಿತರಾದ ಸಂತೂರ್ ಲಕ್ಷ್ಮಿಕಾಂತ್ ಭಟ್ ಹಾಗೂ ರಾಜೇಶ್ ಅಡಿಗರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿತು. ಬೆಳಗ್ಗೆ ಗಣಹೋಮದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ ಮಹಾ ಅನ್ನದಾನದಲ್ಲಿ ಸಹಸ್ರ ಭಕ್ತಾದಿಗಳು ಪಾಲ್ಗೊಂಡು ಸಂಜೆ ವಿಸರ್ಜನಾ ಮೆರವಣಿಗೆ ನಡೆಯಿತು.
ಈ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ವಾನ್ ಡಾ.ಸತ್ಯ ಕೃಷ್ಣ ಭಟ್, ಉದ್ಯಮಿ ಡಾ.ಬಿ.ಆರ್.ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಮೂಡಬಿದ್ರೆ ಶಾಸಕ ಉಮನಾಥ್ ಕೋಟ್ಯಾನ್, ಉದ್ಯಮಿ ರಾಘವೇಂದ್ರ ಕುಡ್ವ, KNRIಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಮಾರ್ಗದೀಪ ಸಮಿತಿಯ ಅಧ್ಯಕ್ಷ ಮಹೇಶ್ ಚಂದ್ರಗಿರಿ, ಉಪಾಧ್ಯಕ್ಷ ಪ್ರವೀಣ್ ಉಪ್ಪೂರು, ಜೊತೆ ಕಾರ್ಯದರ್ಶಿ ಬಿಪಿನ್ ಚಂದ್ರ ನಾಯಕ್, ಕೋಶಾಧಿಕಾರಿ ರಾಜೇಶ್ ರಾವ್, ಕಾರ್ಯಕ್ರಮದ ಸಂಚಾಲಕರಾದ ಸುಗಂಧರಾಜ ಬೇಕಲ್ ಉಪಸ್ಥಿತರಿದ್ದರು.










ಮಾರ್ಗದೀಪ ಸಾಂಸ್ಕೃತಿಕ ಸಮಿತಿ, ರಾಮಕ್ಷತ್ರಿಯ ಮಹಿಳಾ ವೃಂದ, ಶ್ರೀ ಗುರು ರಾಘವೇಂದ್ರ ಬಳಗ, ಓಂ ಶ್ರೀ ಭಜನಾ ತಂಡ ಶಾರ್ಜಾ, ರಾಜರಾಜೇಶ್ವರಿ ಭಜನಾ ಮಂಡಳಿ, ಮೊಗವೀರ ಭಜನಾ ತಂಡದವರಿಂದ ಭಕ್ತಿ ಪೂರ್ವಕ ಭಜನಾ ಸೇವೆ ನೆರವೇರಿತು.
ಕುಮಾರಿ ದಿವ್ಯನಿಧಿ ರೈ ಎರುಂಬು, ಕು.ಸನ್ನಿಧಿ ವಿಶ್ವನಾಥ ಶೆಟ್ಟಿ, ಲೋಕೆಶ್ ಶೆಟ್ಟಿ, ರಾಜೇಶ್ ಅಡಿಗ, ಸಂಗೀತಾ ರಾಜೇಶ್ ಅಡಿಗ ಮತ್ತು ಆಶೀಕ್ ಹರೀಶ್ ಕೋಡಿ ತಂಡದವರಿಂದ “ಸ್ವರ ಸಮರ್ಪಣಾ” ಸಂಗೀತ ಕಾರ್ಯಕ್ರಮ ಹಾಗೂ ಸ್ಮೈಲ್ ಕ್ರೀಯೇಷನ್ ನ ಜಶ್ಮೀತ ವಿವೇಕ್, ನೃತ ಶಕ್ತಿ ರೂಪಕಿರಣ್ ಮತ್ತು ಬಳಗ, ವಾಗ್ ದೇವಿ ಮ್ಯೂಸಿಕ್ ಸ್ಕೂಲ್ ದುಬೈ, ವಿದುಷಿ ಸೋನಿಯಾ ಲೋಬೊರವರಿಂದ ಭರತನಾಟ್ಯ ಮತ್ತು ಸೂರ್ಯ ಕೇಶವನ್, ರಾಮಚಂದ್ರ ಬೆದ್ರಡ್ಕ, ಡಾ.ಸಂತೋಷ್ ಕೆಮ್ಮಿಂಜೆರವರಿಂದ ಭಕ್ತಿ ಸ್ವರ ಸಂಭ್ರಮ ಕಾರ್ಯಕ್ರಮ ನಡೆಯಿತು.










ಕಾರ್ಯಕ್ರಮವನ್ನು ಹರಿಪ್ರಸಾದ್ ಕೋಟೆ, ವಿಘ್ನೇಶ್ ಕುಂದಾಪುರ, ಆರತಿ ಅಡಿಗ ನಿರೂಪಿಸಿದರು. ಸತೀಶ್ ಹಂಗ್ಳೂರು ಮತ್ತು ಅಜಿತ್ ಕೊರಕ್ಕೋಡು ಸಹಕರಿಸಿದರು.
ಹನ್ನೊಂದನೇ ವರ್ಷದ ಈ ಗಣೇಶೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರಿಸಿದ ಭಕ್ತಾದಿಗಳಿಗೆ, ದಾನಿಗಳಿಗೆ, ಯುಎಇಯ ಕನ್ನಡ ತುಳು ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳಿಗೆ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಸಮಿತಿಯ ಎಲ್ಲಾ ಸದಸ್ಯರುಗಳಿಗೂ ಅಧ್ಯಕ್ಷರಾದ ಮಹೇಶ್ ಚಂದ್ರಗಿರಿ ಧನ್ಯವಾದವಿತ್ತರು. ಸಂಜೆ ನಡೆದ ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ಕೇರಳದ ಚಂಡೆ, ನಾಸಿಕ್ ಬ್ಯಾಂಡ್ ಭಕ್ತರ ನೃತ್ಯ ಹೆಜ್ಜೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.







