ಯುಎಇಯುಎಇಯ ಬಿಸಿಸಿಐ ಅಧ್ಯಕ್ಷರಾಗಿ ಹಿದಾಯತ್‌ ಅಡ್ಡೂರು ಪುನರಾಯ್ಕೆ; ಪ್ರಧಾನ...

ಯುಎಇಯ ಬಿಸಿಸಿಐ ಅಧ್ಯಕ್ಷರಾಗಿ ಹಿದಾಯತ್‌ ಅಡ್ಡೂರು ಪುನರಾಯ್ಕೆ; ಪ್ರಧಾನ ಕಾರ್ಯದರ್ಶಿಯಾಗಿ ಮುಷ್ತಾಕ್ ಕದ್ರಿ ಆಯ್ಕೆ

ದುಬೈ: ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(BCCI) ಅಧ್ಯಕ್ಷರಾಗಿ ಹಿದಾಯತ್‌ ಅಡ್ಡೂರು ಪುನರಾಯ್ಕೆ ಆಗಿದ್ದಾರೆ.

ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯಿದೀನ್ ಮುಖ್ಯ ಪೋಷಕರಾಗಿರುವ BCCIಯ ವಾರ್ಷಿಕ ಮಹಾಸಭೆಯು ರವಿವಾರ ದುಬೈಯ ಜುಮೈರಾದ ಕ್ರೌನ್ ಪ್ಲಾಝಾ ಹೊಟೇಲಿನಲ್ಲಿ ನಡೆಯಿತು.

ಈ ವಾರ್ಷಿಕ ಮಹಾಸಭೆಯಲ್ಲಿ 2026–2028ರ ಅವಧಿಗೆ ಹಿದಾಯತ್‌ ಅಡ್ಡೂರು ಅವರನ್ನು ಎರಡನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಯಿತು. ಅವರ ನೇತೃತ್ವದಲ್ಲಿ 2025ರ ಫೆಬ್ರವರಿಯಲ್ಲಿ ದುಬೈಯಲ್ಲಿ ನಡೆದ ‘ಬ್ಯಾರಿ ಸಮ್ಮೇಳನ’ವು ಇತಿಹಾಸವನ್ನು ಸೃಷ್ಟಿಸಿತ್ತು.

ಇದೇ ವೇಳೆ ಪ್ರಧಾನ ಕಾರ್ಯದರ್ಶಿ(General Secretary)ಯಾಗಿ ಮುಷ್ತಾಕ್ ಕದ್ರಿ, ಖಜಾಂಚಿ(Treasurer)ಯಾಗಿ ಹಂಝಾ ಎ. ಖಾದರ್, ಸಂಚಾಲಕ (Convener) ಆಗಿ ಅಶ್ರಫ್ ಶಾ ಮಾಂತೂರು ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷ(Vice President)ರಾಗಿ ಬಶೀರ್ ಕಿನ್ನಿಂಗಾರ್ ಹಾಗು ಅಬ್ದುಲ್ ರೌಫ್ ಅಬುಧಾಬಿ, ಕಾರ್ಯದರ್ಶಿ(Secretary)ಯಾಗಿ ಅನ್ಸಾಫ್ ಆಯ್ಕೆಯಾಗಿದ್ದಾರೆ.

ಮಾಧ್ಯಮ ಮತ್ತು ಸಂವಹನ(Media & Communication)ಕರಾಗಿ ಅಲ್ತಾಫ್ ಎಂ., ಸಲಹೆಗಾರ(Advisor)ರಾಗಿ ಮೊಹಮ್ಮದ್ ಅಲಿ ಉಚ್ಚಿಲ್ ಹಾಗು ಅಶ್ರಫ್ ಬಾಳೆಹೊನ್ನೂರು ಅವರನ್ನು ಆಯ್ಕೆ ಮಾಡಲಾಯಿತು.

ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(BCCI) ಯುಎಇ ಘಟಕದ ಕಾರ್ಯಕಾರಿಣಿ ಸಮಿತಿಗೆ ಅನ್ವರ್ ಹುಸೈನ್ ಅಡ್ಡೂರು, ಸಲೀಂ ಮೂಡಬಿದ್ರೆ, ಸೂಫಿ ಅನ್ವರ್ ಹಾಗು ಶೋಯೆಬ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯು ಅಶ್ರಫ್ ಅವರ ಕಿರಾತ್ ಪಠಣದೊಂದಿಗೆ ಆರಂಭಗೊಂಡಿತು. ಅಶ್ರಫ್ ಶಾ ಮಾಂತೂರು ಸಭೆಯಲ್ಲಿದ್ದವರೆನ್ನೆಲ್ಲಾ ಆತ್ಮೀಯವಾಗಿ ಸ್ವಾಗತಿಸಿದರು. ಅನ್ವರ್ ಹುಸೈನ್ ಅಡ್ಡೂರು ಅವರು ಸಭೆಯಲ್ಲಿ ವಾರ್ಷಿಕ ವರದಿಯನ್ನು ವಾಚಿಸಿದರು. ಹಂಝಾ ಎ. ಖಾದರ್ ಅವರು ಲೆಕ್ಕ ಪತ್ರ ಮಂಡನೆ ಮಾಡಿದರು.

ಬ್ಯಾರಿ ಉದ್ಯಮಿಗಳ ನೋಂದಾವಣೆಗೆ ಅವಕಾಶ: BCCI

ಯುಎಇಎಯಲ್ಲಿ ಉದ್ಯಮ ನಡೆಸುತ್ತಿರುವ ಬ್ಯಾರಿ ಸಮುದಾಯದ ಉದ್ಯಮಿಗಳು ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(BCCI)ಯಲ್ಲಿ ನೋಂದಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಸೇರಲು ಬಯಸುವ ಉದ್ಯಮಿಗಳು BCCIಯನ್ನು ಸಂಪರ್ಕಿಸಬಹುದು.

ಹೊಸದಾಗಿ BCCI ಸೇರಲು ಬಯಸುವವರು ಈ ಈಮೈಲ್ ಮೂಲಕ ನೋಂದಾವಣೆ ಮಾಡಿಕೊಳ್ಳಬಹುದು: [email protected]

ಹೊಸದಾಗಿ ಸೇರ್ಪಡೆಯಾಗುವ ಉದ್ಯಮಿಗಳ Business (ಉದ್ಯಮ) ಬೆಳವಣಿಗೆಗೆ ಬೇಕಾದ ಎಲ್ಲ ರೀತಿಯ ಶಕ್ತಿ ತುಂಬುವ, ಪ್ರೋತ್ಸಾಹ ನೀಡುವ ಕೆಲಸ ಕಾರ್ಯವನ್ನು BCCI ಮಾಡಲಿದೆ. Business Empowerment(ವ್ಯಾಪಾರ ಸಬಲೀಕರಣ), ಅದಕ್ಕೆ ಸಂಬಂಧಿಸಿದ ಈವೆಂಟ್ಸ್, ಸೆಮಿನಾರ್ಸ್, Business Promote (ವ್ಯವಹಾರ ಪ್ರೋತ್ಸಾಹ, ಪ್ರಚಾರ), ಹೊಸ ಉದ್ಯಮ(New Start-up) ಆರಂಭಿಸಲು ಬೇಕಾದ ಕಾರ್ಯ ತಂತ್ರವನ್ನು ಕೂಡ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಬ್ಯಾರಿ ಸಮುದಾಯದ ಉದ್ಯಮಿಗಳಿಗೆ ನೀಡಲು BCCI ಮುಂದಾಗಿದೆ.

AI (ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಹಾರ)ಆಧಾರಿತ ಎಲ್ಲ ರೀತಿಯ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಉದ್ಯಮಿದಾರರ ಉದ್ಯಮವನ್ನು ಬೆಳೆಸಲು ಬೇಕಾದ ಕಾರ್ಯತಂತ್ರವನ್ನು ಅಳವಡಿಸಲು BCCI ಯೋಜನೆಯನ್ನು ರೂಪಿಸಿಕೊಂಡಿದೆ. ಜೊತೆಗೆ ಪ್ರಸಕ್ತ ವ್ಯವಹಾರ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲು(Business Challenges Scenario)ಗಳನ್ನು ಯಾವ ರೀತಿ ಎದುರಿಸಬೇಕು, ಉದ್ಯಮಿಗಳಿಗೆ ಆಗುತ್ತಿರುವ ಬೇರೆ ಬೇರೆ ರೀತಿಯ ಸಮಸ್ಯೆ, ತೊಂದರೆ ಎಂಬಿತ್ಯಾದಿ ವಿಷಯಗಳ ಕುರಿತು ಕೂಡ ಉದ್ಯಮದಾರರಿಗೆ ಸಲಹೆ, ಸೂಚನೆಯನ್ನು BCCI ನೀಡಲಿದೆ. ಈ ಹಿನ್ನೆಲೆಯಲ್ಲಿ ಯುಎಇಯಲ್ಲಿರುವ ಬ್ಯಾರಿ ಸಮುದಾಯದ ಎಲ್ಲ ಉದ್ಯಮಿಗಳ ಸಹಾಯ, ಸಹಕಾರ ನೀಡುವಂತೆ BCCI ಮನವಿ ಮಾಡಿದೆ.

Hot this week

ಫ್ಲೋರಿಡಾ; ತ್ಯಾಗರಾಜ–ಪುರಂದರ ದಾಸರ ಆರಾಧನಾ ಉತ್ಸವ ಭಕ್ತಿಭಾವದಿಂದ ಆಚರಣೆ

ಫ್ಲೋರಿಡಾ: ಇತ್ತೀಚೆಗೆ ತ್ಯಾಗರಾಜ ಹಾಗೂ ಪುರಂದರ ದಾಸರ ಆರಾಧನಾ ಉತ್ಸವವನ್ನು ಸಾಂಸ್ಕೃತಿಕ...

ದುಬೈ; ಜನವರಿ 25ರಂದು ‘ಗುರು ಕಿರಣ್ ನೈಟ್’ ಅದ್ಧೂರಿ ಸಂಗೀತ ಕಾರ್ಯಕ್ರಮ

ದುಬೈ: ಇಲ್ಲಿನ ಅಲ್ ಖಿಸೆಸ್ಸ್ ಅಮಿಟಿ ಸ್ಕೂಲಿನ ಫುಟ್ಬಾಲ್ ಮೈದಾನದಲ್ಲಿ ಜನವರಿ...

ಉಗಾಂಡದಲ್ಲಿ ಕನ್ನಡ ಭವನವನ್ನು ನಿರ್ಮಿಸಲು ರಾಜ್ಯ ಸರಕಾರದ ಸಹಕಾರ ಅಗತ್ಯ: ಕರ್ನಾಟಕ ಸಂಘ ಅಧ್ಯಕ್ಷ ದೀಪಕ್ ಜಗದೀಶ್

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಕನ್ನಡಿಗರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಕನ್ನಡ...

ಜನವರಿ 25ರಂದು ಶಾರ್ಜಾದಲ್ಲಿ ‘ಕೆಸಿಎಫ್’ನಿಂದ ‘ಮಹಬ್ಬಾ ಫ್ಯಾಮಿಲಿ ಫೆಸ್ಟ್-2026’

ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಯುಎಇಯ ಆಶ್ರಯದಲ್ಲಿ 'ಮಹಬ್ಬಾ ಫ್ಯಾಮಿಲಿ ಫೆಸ್ಟ್...

Related Articles

Popular Categories