ಬಹರೈನ್: ಭಾರತೀಯ ಉದ್ಯಮಿ ಡಾ. ರವಿ ಪಿಳ್ಳೈ ಅವರಿಗೆ ಬಹರೈನ್ ನ ಪ್ರತಿಷ್ಠಿತ ರಾಷ್ಟ್ರೀಯ ಗೌರವ, ʼಮೆಡಲ್ ಆಫ್ ಎಫಿಶಿಯನ್ಸಿʼ ನೀಡಿ ಗೌರವಿಸಲಾಗಿದೆ.
ಬಹರೈನ್ ನ ಪ್ರಗತಿ ಮತ್ತು ಅಭಿವೃದ್ಧಿಗೆ ಅವರು ಸಲ್ಲಿಸಿದ ಕೊಡುಗೆಗಳನ್ನು ಗುರುತಿಸಿ ಈ ಗೌರವ ಪ್ರದಾನಿಸಲಾಗಿದೆ. ಈ ಗೌರವಕ್ಕೆ ಪಾತ್ರರಾದ ಏಕಮಾತ್ರ ವಿದೇಶಿಗರಾಗಿದ್ದಾರೆ ಡಾ. ಪಿಳ್ಳೈ.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಆರ್ ಪಿ ಗ್ರೂಪ್ ನ ಅಧ್ಯಕ್ಷ ಪಿಳ್ಳೈ ಅವರಿಗೆ ಬಹರೈನ್ ರಾಜ ಹಾಮದ್ ಬಿನ್ ಈಸಾ ಅಲ್ ಖಲೀಫಾ ಅವರು ಈ ಪ್ರಶಸ್ತಿ ನೀಡಿ ಗೌರವಿಸಿದರು.
” ದೇಶಕ್ಕೆ ಡಾ. ರವಿ ಪಿಳ್ಳೈ ಅವರು ನೀಡಿರುವ ಅಸಾಧಾರಣ ಸೇವೆ ಮತ್ತು ಕೊಡುಗೆಗಳಿಗಾಗಿ ನಾವು ಅವರನ್ನು ಶ್ಲಾಘಿಸುತ್ತೇವೆ ಮತ್ತು ನಮ್ಮ ಕೃತಜ್ಞತೆಯ ಸಂಕೇತವಾಗಿ ಅವರಿಗೆ ಈ ವಿಶಿಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದೇವೆʼʼ ಎಂದು ರಾಜ ರಾಜಮನೆತನದ ಘೋಷಣೆಯಲ್ಲಿ ತಿಳಿಸಲಾಗಿದೆ.
ಪಿಳ್ಳೈ ಅವರು ಭಾರತದ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗಿದ್ದು, ಭಾರತದಲ್ಲಿ ಆರು ಪಂಚತಾರಾ ಹೋಟೆಲ್‌ಗಳು, ಎರಡು ಆಸ್ಪತ್ರೆಗಳು ಮತ್ತು ಮೂರು ಶಾಪಿಂಗ್ ಮಾಲ್‌ಗಳನ್ನು ಹೊಂದಿದ್ದಾರೆ ಮತ್ತು ಭಾರತದಲ್ಲಿ ಮುಂದಿನ ಎರಡು ವರ್ಷಗಳಲ್ಲಿ 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದ್ದಾರೆ ಎನ್ನಲಾಗಿದೆ.