Top Newsಭಾರತೀಯ ಉದ್ಯಮಿ ಡಾ. ರವಿ ಪಿಳ್ಳೈಗೆ ಬಹರೈನ್‌ ನ...

ಭಾರತೀಯ ಉದ್ಯಮಿ ಡಾ. ರವಿ ಪಿಳ್ಳೈಗೆ ಬಹರೈನ್‌ ನ ಪ್ರತಿಷ್ಠಿತ ಗೌರವ

ಬಹರೈನ್‌: ಭಾರತೀಯ ಉದ್ಯಮಿ ಡಾ. ರವಿ ಪಿಳ್ಳೈ ಅವರಿಗೆ ಬಹರೈನ್‌ ನ ಪ್ರತಿಷ್ಠಿತ ರಾಷ್ಟ್ರೀಯ ಗೌರವ, ʼಮೆಡಲ್‌ ಆಫ್‌ ಎಫಿಶಿಯನ್ಸಿʼ ನೀಡಿ ಗೌರವಿಸಲಾಗಿದೆ.

ಬಹರೈನ್‌ ನ ಪ್ರಗತಿ ಮತ್ತು ಅಭಿವೃದ್ಧಿಗೆ ಅವರು ಸಲ್ಲಿಸಿದ ಕೊಡುಗೆಗಳನ್ನು ಗುರುತಿಸಿ ಈ ಗೌರವ ಪ್ರದಾನಿಸಲಾಗಿದೆ. ಈ ಗೌರವಕ್ಕೆ ಪಾತ್ರರಾದ ಏಕಮಾತ್ರ ವಿದೇಶಿಗರಾಗಿದ್ದಾರೆ ಡಾ. ಪಿಳ್ಳೈ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಆರ್‌ ಪಿ ಗ್ರೂಪ್‌ ನ ಅಧ್ಯಕ್ಷ ಪಿಳ್ಳೈ ಅವರಿಗೆ ಬಹರೈನ್‌ ರಾಜ ಹಾಮದ್‌ ಬಿನ್‌ ಈಸಾ ಅಲ್‌ ಖಲೀಫಾ ಅವರು ಈ ಪ್ರಶಸ್ತಿ ನೀಡಿ ಗೌರವಿಸಿದರು. 

” ದೇಶಕ್ಕೆ ಡಾ. ರವಿ ಪಿಳ್ಳೈ ಅವರು ನೀಡಿರುವ ಅಸಾಧಾರಣ ಸೇವೆ ಮತ್ತು ಕೊಡುಗೆಗಳಿಗಾಗಿ ನಾವು ಅವರನ್ನು ಶ್ಲಾಘಿಸುತ್ತೇವೆ ಮತ್ತು ನಮ್ಮ ಕೃತಜ್ಞತೆಯ ಸಂಕೇತವಾಗಿ ಅವರಿಗೆ ಈ ವಿಶಿಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದೇವೆʼʼ ಎಂದು ರಾಜ ರಾಜಮನೆತನದ ಘೋಷಣೆಯಲ್ಲಿ ತಿಳಿಸಲಾಗಿದೆ.

ಪಿಳ್ಳೈ ಅವರು ಭಾರತದ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗಿದ್ದು, ಭಾರತದಲ್ಲಿ ಆರು ಪಂಚತಾರಾ ಹೋಟೆಲ್‌ಗಳು, ಎರಡು ಆಸ್ಪತ್ರೆಗಳು ಮತ್ತು ಮೂರು ಶಾಪಿಂಗ್ ಮಾಲ್‌ಗಳನ್ನು ಹೊಂದಿದ್ದಾರೆ ಮತ್ತು ಭಾರತದಲ್ಲಿ ಮುಂದಿನ ಎರಡು ವರ್ಷಗಳಲ್ಲಿ  2 ಬಿಲಿಯನ್ ಅಮೆರಿಕನ್‌ ಡಾಲರ್ ಹೂಡಿಕೆ ಮಾಡಲು ಯೋಜಿಸಿದ್ದಾರೆ ಎನ್ನಲಾಗಿದೆ.

Hot this week

ಕನ್ನಡಿಗರ ಕೂಟ ದುಬೈ ವತಿಯಿಂದ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್‌ಗೆ ಸನ್ಮಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ತಂಡವು ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ...

ಫ್ಲೋರಿಡಾ ತುಳು ಕೂಟದ 2ನೇ ವಾರ್ಷಿಕ ಪೊಟ್ಲಕ್ ಪಿಕ್ನಿಕ್ ಸಂಭ್ರಮ

ಅಮೇರಿಕದ ಫ್ಲೋರಿಡಾ ತುಳು ಕೂಟವು ಇತ್ತೀಚೆಗೆ ಕ್ಯಾಸೆಲ್‌ಬೆರ್ರಿ ಒರ್ಲಾಂಡೊದಲ್ಲಿ ತನ್ನ ಎರಡನೇ...

ಭಾರತದ ನೂತನ ಕಾನ್ಸುಲ್ ಜನರಲ್ ಡಾ.ವಿಷ್ಣುವರ್ಧನ ರೆಡ್ಡಿಗೆ ಕನ್ನಡಿಗರ ಕೂಟ ದುಬೈಯಿಂದ ಸ್ವಾಗತ

ದುಬೈ: ಯುಎಇಯ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲಿ ಒಂದಾಗಿರುವ ಕನ್ನಡಿಗರ ಕೂಟ, ದುಬೈ...

ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ರಕ್ತದಾನದಿಂದ ಮಾನವೀಯತೆಯ ಸಂದೇಶ ಸಾರಿದ ಕರ್ನಾಟಕ ಸಂಘ ಶಾರ್ಜಾ

ದುಬೈ: ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ಕರ್ನಾಟಕ ಸಂಘ ಶಾರ್ಜಾ ಮತ್ತು...

ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಸಲಾಲ(ಒಮಾನ್): ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್ ನಲ್ಲಿ ಬ್ಯಾರೀಸ್ ಕಮ್ಯುನಿಟಿ...

Related Articles

Popular Categories