ಬಹರೈನ್: ಬಹರೈನ್‌ನಲ್ಲಿರುವ ಕನ್ನಡ ಸಮುದಾಯವನ್ನು ಕನ್ನಡ ಸಂಘ ಬಹರೈನ್‌ನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ಸೆಪ್ಟೆಂಬರ್ 5ರ ಶುಕ್ರವಾರದಂದು ಬಹರೈನ್ ಕಲ್ಚರಲ್ ಹಾಲ್ ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ನೂತನವಾಗಿ ಆಯ್ಕೆಯಾದ 12 ಸಮರ್ಪಿತ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಗೆ ಅಜಿತ್ ಬಂಗೇರ ಅವರು ಅಧ್ಯಕ್ಷರಾಗಿ ಚುಕ್ಕಾಣಿಯನ್ನು ಹಿಡಿದಿದ್ದು ನಾಡಿನ ಹಾಗೂ ದ್ವೀಪದ ಗಣ್ಯ ಅತಿಥಿಗಳು ಈ ಸುಂದರ ಸಂಜೆಗೆ ವಿಶೇಷ ಮೆರುಗು ನೀಡಲಿದ್ದಾರೆ
ಮುಖ್ಯ ಅತಿಥಿಗಳಾಗಿ ಬಹರೈನ್ ದ್ವೀಪರಾಷ್ಟ್ರದ ಸಂಸದ ಯೂಸುಫ್ ಹುಸೈನ್ ಅಲ್ಹರ್ಮಿ, ಗೌರವ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಸೇರಿದಂತೆ ಬಹರೈನ್ ಮತ್ತು ಭಾರತದ ಪ್ರಮುಖ ಉದ್ಯಮಿಗಳು, ಸಮುದಾಯ ಮುಖಂಡರು ಮತ್ತು ಸಮಾಜ ಸೇವಕರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಮ್ಮ ಅದ್ಭುತ ಮ್ಯಾಜಿಕ್, ಬುದ್ಧಿಮತ್ತೆ ಮತ್ತು ನಿಗೂಢ ಕಲೆಗಳ ಪ್ರದರ್ಶನದಿಂದ ಜಗತ್ತಿನಾದ್ಯಂತ ಖ್ಯಾತಿ ಗಳಿಸಿರುವ ಕುದ್ರೋಳಿ ಗಣೇಶ್ ಅವರಿಂದ ಮೋಡಿಮಾಡುವ ಪ್ರದರ್ಶನ, ದೇವಿ ಕಿರಣ್ ಗಣೇಶಪುರ ಅವರಿಂದ ನೇರ ಕಲಾ ಪ್ರದರ್ಶನ, ಕನ್ನಡ ಸಂಘದ ಸದಸ್ಯರಿಂದ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸಾಂಪ್ರದಾಯಿಕ ನೃತ್ಯ, ಸಂಗೀತ ಮತ್ತು ಜಾನಪದ ಪ್ರದರ್ಶನಗಳು ವೇದಿಕೆಯಲ್ಲಿ ಅನಾವರಣ ಗೊಳ್ಳಲಿದೆ.
ನೂತನ ಕಾರ್ಯಕಾರಿ ಸಮಿತಿ
ಅಜಿತ್ ಬಂಗೇರ – ಅಧ್ಯಕ್ಷರು
ನಿತಿನ್ ಶೆಟ್ಟಿ – ಉಪಾಧ್ಯಕ್ಷರು
ರಾಮಪ್ರಸಾದ್ ಅಮ್ಮೇನಡ್ಕ – ಪ್ರಧಾನ ಕಾರ್ಯದರ್ಶಿ
ಹರಿನಾಥ್ ಸುವರ್ಣ – ಜಂಟಿ ಕಾರ್ಯದರ್ಶಿ
ಈಶ್ವರ್ ಅಂಚನ್ – ಕೋಶಾಧಿಕಾರಿ
ಪುಲಿಕೇಶಿ ಗದಗ ಶರಣಪ್ಪ – ಸಹಾಯಕ ಕೋಶಾಧಿಕಾರಿ
ಹರಿಣಿ ಉತ್ಕರ್ಷ್ ಶೆಟ್ಟಿ – ಸಾಂಸ್ಕೃತಿಕ ಕಾರ್ಯದರ್ಶಿ
ಹರೀಶ ಗೌಡ – ಸಹಾಯಕ ಸಾಂಸ್ಕೃತಿಕ ಕಾರ್ಯದರ್ಶಿ
ಪುರುಷೋತ್ತಮ ಜೋಗಿ – ಸಮಿತಿ ಸದಸ್ಯರು
ಲೋಕೇಶ್ ಸಾಮ್ಯ – ಸಮಿತಿ ಸದಸ್ಯರು
ಹರೀಶ್ಚಂದ್ರ ಗೌಡ – ಸಮಿತಿ ಸದಸ್ಯರು
ಪ್ರವೀಣ್ ಶೆಟ್ಟಿ ಕಿನ್ನಿಗೋಳಿ – ಆಂತರಿಕ ಲೆಕ್ಕಪರಿಶೋಧಕ
ವರದಿ: ಕಮಲಾಕ್ಷ ಅಮೀನ್