Lead Newsಕನ್ನಡ ಸಂಘ ಬಹರೈನ್ ನ ಸಂಭ್ರಮದ 48ನೇ ವಾರ್ಷಿಕೋತ್ಸವ...

ಕನ್ನಡ ಸಂಘ ಬಹರೈನ್ ನ ಸಂಭ್ರಮದ 48ನೇ ವಾರ್ಷಿಕೋತ್ಸವ ಆಚರಣೆ

ಬಹರೈನ್: ಕನ್ನಡ ಸಂಘ ಬಹರೈನ್ ನ 48ನೇ ವಾರ್ಷಿಕೋತ್ಸವವನ್ನು ಕನ್ನಡ ಭವನದ ಶ್ರೀಮತಿ ಆಶಾ ಪ್ರಕಾಶ್ ಶೆಟ್ಟಿ ಸಭಾಂಗಣದಲ್ಲಿ ಸದಸ್ಯರ ಪರಿವಾರ ಹಾಗೂ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ‌ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ರಾಜೇಂದ್ರ ಹೆಗ್ಡೆ ಅವರಿಗೆ ಬೀಳ್ಕೊಡುಗೆ ಹಾಗೂ ಗೌರವ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಯಶಂಕರ್ ವಿಶ್ವನಾಥನ್ (COO, Uneeco Bahrain), ಅಬ್ದುಲ್ ರಝಾಕ್ ಹೆಜಮಾಡಿ (Metalco Group), ಪ್ರಕಾಶ್ ಶೆಟ್ಟಿ (ಮಾಲಕರು, Central Café) ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ, ಅಮರನಾಥ್ ರೈ, ಬಹರೈನ್ ಬಿಲ್ಲವಾಸ್ ನ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಉಪಾಧ್ಯಕ್ಷ ನಿತಿನ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಹ ಹಾಜರಿದ್ದರು.

ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅಧ್ಯಕ್ಷೀಯ ಭಾಷಣ ಮಾಡಿದರು. ಮಾಜಿ ಅಧ್ಯಕ್ಷರಾದ ಅಮರನಾಥ್ ರೈ, ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಮುಖ್ಯ ಅತಿಥಿ ಜಯಶಂಕರ್ ವಿಶ್ವನಾಥನ್ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಇದೇ ವೇದಿಕೆಯಲ್ಲಿ ಬಹರೈನ್ ದ್ವೀಪದ ನಕ್ಷೆಯನ್ನು ಅಕ್ಕಿಯಲ್ಲಿ ರಚಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪಡೆಯಲು ಪಾಲ್ಗೊಂಡ ಸದಸ್ಯರನ್ನು ಪ್ರಶಸ್ತಿ ಪತ್ರದ ಹಾಗೂ ಟೀಶರ್ಟ್ ಕಿಟ್ ನೀಡಿ ಅಭಿನಂದಿಸಲಾಯಿತು. ಅಲ್ಲದೇ, ಸಂಘದ ನೂತನ ವೆಬ್ ನ್ಯೂಸ್ ಚಾನಲ್ “ಹೊಂಗಿರಣ” ಹಾಗೂ ಚಿಗುರು -ಯೂತ್ ವಿಂಗ್ ಅನಾವರಣಗೊಂಡಿತು.
ಪ್ರಧಾನ ಕಾರ್ಯದರ್ಶಿ ರಾಮ ಪ್ರಸಾದ್ ಅಮ್ಮೆನಡ್ಕ ಅತಿಥಿಗಳನ್ನು ಸ್ವಾಗತಿಸಿ, ಸಭಾಕಾರ್ಯಕ್ರಮವನ್ನು ನಿರ್ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ರೂಪೇಶ್ ಎಸ್. ಸಾಲ್ಯಾನ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ದಿಶಾ ಮಂಗಲ್ಪಾಡಿ ಅವರ ಸ್ವಾಗತ ನೃತ್ಯ, ಕನ್ನಡ ಕ್ಲಾಸ್ ವಿದ್ಯಾರ್ಥಿಗಳ ಗೀತೆಗಳು, ಯಕ್ಷ ಶಿಕ್ಷಣ ವಿದ್ಯಾರ್ಥಿಗಳ ಯಕ್ಷ ನಾಟ್ಯ ಹಾಗೂ ಸಂಘದ ಗಾಯಕರಿಂದ ಚಲನಚಿತ್ರ ಹಾಡುಗಳು ಪ್ರೇಕ್ಷಕರನ್ನು ಮನರಂಜಿಸಿತು.

ಕಾರ್ಯಕ್ರಮದ ಅಂಗವಾಗಿ ವಾರ್ಷಿಕ ಕ್ರೀಡಾ ಸ್ಪರ್ಧೆಗಳ ಒಳಾಂಗಣ ಮತ್ತು ಹೊರಾಂಗಣ ವಿಭಾಗಗಳ ವಿಜೇತರಿಗೆ ಟ್ರೋಫಿಗಳು ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಕ್ರೀಡಾ ವಿಭಾಗದ ನಿರೂಪಣೆಯನ್ನು ಪೂರ್ಣಿಮಾ ಜಗದೀಶ್ ಮತ್ತು ಭಾಸ್ಕರ್ ಆಚಾರ್ಯ ನಡೆಸಿಕೊಟ್ಟರು.

ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಕ್ರೀಡಾ ಕಾರ್ಯದರ್ಶಿ ನಿತೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಹರಿಣಿ ಶೆಟ್ಟಿ, ಉಪ ಸಾಂಸ್ಕೃತಿಕ ಕಾರ್ಯದರ್ಶಿ ಹರೀಶ್ ಗೌಡ ಹಾಗೂ ಸಂಘದ ಸ್ವಯಂಸೇವಕರು ಮಹತ್ವದ ಪಾತ್ರ ವಹಿಸಿದರು.

ಕಾರ್ಯಕ್ರಮವು ಸ್ವಾದಿಷ್ಟ ಭೋಜನದೊಂದಿಗೆ ಮುಕ್ತಾಯಗೊಂಡಿತು. ಸುಮಾರು 350 ಸದಸ್ಯ ಪರಿವಾರ ಮತ್ತು ಅತಿಥಿಗಳು ಭಾಗವಹಿಸಿ ಕನ್ನಡ ಸಂಘ ಬಹರೈನ್‌ನ 48ನೇ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿ ಆಚರಿಸಿದರು.

ವರದಿ-ಕಮಲಾಕ್ಷ ಅಮೀನ್

Hot this week

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆ

ದುಬೈ: ಕರ್ನಾಟಕ ಸಂಘ ಶಾರ್ಜಾ ಇದರ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ...

ರಮಝಾನ್-ಈದುಲ್ ಫಿತ್ರ್ ಅಂಗವಾಗಿ ಕನ್ನಡ ಸಂಘ ಬಹರೈನ್ ವತಿಯಿಂದ ಆಹಾರ ವಸ್ತುಗಳ ಕಿಟ್ ವಿತರಣೆ

ಬಹರೈನ್: ಪವಿತ್ರ ರಮಝಾನ್ ಮತ್ತು ಈದುಲ್ ಫಿತ್ರ್ ಹಬ್ಬದ ಅಂಗವಾಗಿ ಪ್ರಸ್ತುತ...

400 ಭಾರತೀಯರನ್ನು ತಾಯ್ನಾಡಿಗೆ ಕಳುಹಿಸಿದ ಬಹರೈನ್ ಕನ್ನಡ ಸಂಘ!

ಬಹರೈನ್: ತಾಯ್ನಾಡಿಗೆ ಮರಳಲು ಬಯಸಿದ ಸುಮಾರು 400 ಭಾರತೀಯರಿಗೆ ಕನ್ನಡ ಸಂಘ...

ಗಲ್ಫ್ ಸಂಘರ್ಷದ ನಡುವೆಯೂ ಪ್ರಯಾಣಿಕರಿಗೆ ‘ಓಯಸಿಸ್’ ಆಗಿರುವ ಒಮಾನ್!

ಮಸ್ಕತ್: ಇರಾನ್–ಅಮೇರಿಕ ಸಂಘರ್ಷದ ಪರಿಣಾಮವಾಗಿ ಮಧ್ಯಪ್ರಾಚ್ಯದ ವಾಯುಪ್ರದೇಶದಲ್ಲಿ ಅನಿಶ್ಚಿತತೆ ಉಂಟಾದ ಹಿನ್ನೆಲೆಯಲ್ಲಿ...

Related Articles

Popular Categories