ಬೆಳಗಾವಿ: ಮಹಿಳಾ ಪದವೀಧರರಿಗೆ ಯುಕೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡಲು ಯುಕೆಯ ಚೆವೆನಿಂಗ್ ಸ್ಕಾಲರ್‌ಶಿಪ್ ಕಾರ್ಯಕ್ರಮದೊಂದಿಗೆ ಕರ್ನಾಟಕ ಸರ್ಕಾರವು ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್, “ದಕ್ಷಿಣ ಭಾರತದಲ್ಲಿ ಚೆವೆನಿಂಗ್ ಪ್ರಸ್ತಾಪವನ್ನು ಸ್ವೀಕರಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ” ಎಂದು ಹೇಳಿದರು.
ಒಟ್ಟಾರೆ, ಮುಂದಿನ ಮೂರು ವರ್ಷಗಳಲ್ಲಿ 15 ಮಹಿಳಾ ಪದವೀಧರರು ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಾರೆ. ಐದು ಮಹಿಳೆಯರ ಮೊದಲ ಬ್ಯಾಚ್ ಸೆಪ್ಟೆಂಬರ್ 2025 ರಿಂದ ತಮ್ಮ ಯುಕೆ ಶಿಕ್ಷಣವನ್ನು ಮುಂದುವರಿಸಲಿದೆ. 3 ವರ್ಷದ ಕಾರ್ಯಕ್ರಮಕ್ಕೆ ಅಂದಾಜು ರೂ. 6 ಕೋಟಿ ವೆಚ್ಚವಾಗಲಿದ್ದು, ಇದರಲ್ಲಿ ರೂ. 3 ಕೋಟಿಯನ್ನು ರಾಜ್ಯ ಸರ್ಕಾರ ಮತ್ತು ಉಳಿದವು ಚೆವೆನಿಂಗ್ ಭರಿಸಲಿದೆ ಎಂದು ತಿಳಿದು ಬಂದಿದೆ.